Advertisement

ವಿವಿಧ ದತ್ತಿ ಪ್ರಶಸ್ತಿಗಳಿಗೆ ಕೃತಿಗಳ ಆಹ್ವಾನ

12:36 AM Apr 04, 2019 | Lakshmi GovindaRaju |

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ 46 ದತ್ತಿನಿಧಿ ಪ್ರಶಸ್ತಿಗಳಿಗೆ ಕೃತಿಗಳನ್ನು ಆಹ್ವಾನಿಸಲಾಗಿದೆ. “ಮಲ್ಲಿಕಾ’ ಪ್ರಶಸ್ತಿಗೆ ಹಿರಿಯ ಕಿರಿಯ ಲೇಖಕಿಯರು ತಾವು ರಚಿಸಿರುವ ಸ್ವತಂತ್ರ ಅಥವಾ ಅನುವಾದಿಸಿರುವ ಕೃತಿಗಳನ್ನು ಕಳುಹಿಸಬಹುದು. ಎಚ್‌.ಕರಿಯಣ್ಣ ಪ್ರಶಸ್ತಿಗೆ ಲೇಖಕಿಯರು ರಚಿಸಿರುವ ಮಕ್ಕಳ ಪುಸ್ತಕ ಕಳುಹಿಸಬಹುದು.

Advertisement

ವೈಚಾರಿಕ ಹಾಗೂ ವೈಜ್ಞಾನಿಕ ಮನೋಭಾವಕ್ಕೆ ಸಂಬಂಧಿಸಿದ ಶ್ರೇಷ್ಠ ಕೃತಿಗೆ ಡಾ.ಎಚ್‌.ನರಸಿಂಹಯ್ಯ ದತ್ತಿ ಪ್ರಶಸ್ತಿ, ಹರಿದಾಸ ಸಾಹಿತ್ಯ ಕೃತಿಗೆ ಅಸುಂಡಿ ಹುದ್ದಾರ್‌ ಕೃಷ್ಣರಾವ್‌ ಸ್ಮಾರಕ ಪ್ರಶಸ್ತಿ, ಉದಯೋನ್ಮುಖ ಬರಹಗಾರರ ಅತ್ಯುತ್ತಮ ಚೊಚ್ಚಲ ಕೃತಿಗೆ ಕೆ.ವಿ.ರತ್ನಮ್ಮ ಪ್ರಶಸ್ತಿ, ಜೈನ ಸಾಹಿತ್ಯ ಕೃತಿಗೆ ಪಿ.ಶಾಂತಿಲಾಲ್‌ ಪ್ರಶಸ್ತಿ, ಜಾನಪದ ಸಾಹಿತ್ಯ ಕೃತಿಗೆ ಅಕ್ಕಮ್ಮ ಗಿರಿಗೌಡ ರುದ್ರಪ್ಪ ಪ್ರಶಸ್ತಿ, ಅತ್ಯುತ್ತಮ ಚೊಚ್ಚಲ ಕವನ ಸಂಕಲನಕ್ಕೆ ಪ್ರೊ.ಡಿ.ಸಿ.ಅನಂತಸ್ವಾಮಿ ಪ್ರಶಸ್ತಿ ನೀಡಲಾಗುವುದು.

2018ರಲ್ಲಿ ಪ್ರಕಟವಾದ ಕನ್ನಡ ಪುಸ್ತಕಗಳನ್ನು ಪ್ರಶಸ್ತಿ ಆಯ್ಕೆಗೆ ಕಳುಹಿಸಬೇಕು. ಬಹುಮಾನದ ಬಗ್ಗೆ ಕಸಾಪ ನೇಮಿಸುವ ತೀರ್ಪುಗಾರರು ನೀಡುವ ಶಿಫಾರಸ್ಸನ್ನು ಗಮನಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಪಿಎಚ್‌ಡಿ ಕೃತಿಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ.

ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಹೆಸರು, ವಿಳಾಸ, ದೂರವಾಣಿ ಹಾಗೂ ಮೊಬೈಲ್‌ ಸಂಖ್ಯೆಗಳನ್ನು ನಮೂದಿಸಬೇಕು. ಸ್ಪರ್ಧೆಯ ದತತಿ ಹೆಸರನ್ನು ಪುಸ್ತಕದ ಮೊದಲ ಪುಟದಲ್ಲಿ ಸ್ಪಷ್ಟವಾಗಿ ನಮೂದಿಸಬೇಕು. ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು- 560 018 ಇಲ್ಲಿಗೆ ಮೇ 15ರೊಳಗೆ ಪುಸ್ತಕದ ಮೂರು ಪ್ರತಿಗಳನ್ನು ಕಳುಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next