Advertisement

ಮತದಾನ ಮಾಡಲು ಆಮಂತ್ರಣ…

02:23 AM Apr 18, 2019 | Team Udayavani |

ಉಡುಪಿ: ಗುರುವಾರ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿಅರ್ಹ ಮತದಾರರೆಲ್ಲರೂ ಮತ ಚಲಾಯಿಸಬೇಕು ಮತ್ತು ಅತ್ಯಂತ ಗರಿಷ್ಠ ಮತದಾನ ಪ್ರಮಾಣ ದಾಖಲಾಗಬೇಕು ಎಂಬ ಉದ್ದೇಶದಿಂದ ಚುನಾವಣ ಆಯೋಗ, ಸ್ವೀಪ್‌ ಸಮಿತಿಗಳು ಕೆಲಸ ಮಾಡುತ್ತಿವೆ. ಉಡುಪಿ ಜಿಲ್ಲಾಡಳಿತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ; ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ಸಭೆ ಸಮಾರಂಭಗಳಂತೆ ಮತದಾನ ಮಾಡುವುದಕ್ಕೂ ಆಮಂತ್ರಣ ನೀಡಿದ್ದಾರೆ.

Advertisement

ಅದು ಹೀಗಿದೆ:
ನಮ್ಮದು ಜಗತ್ತಿನಲ್ಲಿಯೇ ಅತ್ಯಂತ ಬೃಹತ್‌ ಪ್ರಜಾಪ್ರಭುತ್ವ ರಾಷ್ಟ್ರ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಹಲವಾರು ಭಾಷೆ, ಜನಾಂಗ, ಸಂಸ್ಕೃತಿ, ಧರ್ಮ ಹೊಂದಿರುವ ನಾವೆಲ್ಲರೂ ಒಂದು ಎಂಬ ಭಾವನೆಯಿಂದ ಬದುಕುತ್ತಿದ್ದೇವೆ. ಆದ್ದರಿಂದ ವಿಶ್ವದಲ್ಲಿ ನಮ್ಮದು ಬೃಹತ್‌ ಪ್ರಜಾಸತ್ತಾತ್ಮಕ ಜಾತ್ಯತೀತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿ ಹೊರಹೊಮ್ಮಿದೆ.

ನಮ್ಮ ದೇಶಕ್ಕೆ ಸುಭದ್ರ ಸರಕಾರವನ್ನು ಆಯ್ಕೆ ಮಾಡಲು ಎ. 18ರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಅಂದು ತಾವು ಮತ್ತು ತಮ್ಮ ಕುಟುಂಬದ ಅರ್ಹ ಮತದಾರರು ಮತಗಟ್ಟೆಗೆ ಬಂದು ಯೋಗ್ಯ ಅಭ್ಯರ್ಥಿಗೆ ಮತ ಚಲಾಯಿಸುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕಿದೆ.

ಈ ಚುನಾವಣೆಯಲ್ಲಿ ಎಲ್ಲರನ್ನೂ ಒಳಗೊಂಡ ಸುಲಭ ಸಾಧ್ಯವಾದ ನೈತಿಕ ಮತದಾನಕ್ಕೆ ಒತ್ತು ಕೊಡಬೇಕಾಗಿದೆ. ಆದ್ದರಿಂದ ನಮ್ಮ ಜಿಲ್ಲೆಯಲ್ಲಿ ವಿಶೇಷ ಚೇತನರಿಗೆ, ಮಹಿಳೆಯರಿಗೆ ಮತ್ತು ಹಿರಿಯ ನಾಗರಿಕ ಬಂಧುಗಳಿಗೆ ಮತಗಟ್ಟೆಯಲ್ಲಿ ವಿಶೇಷ ಸೌಲಭ್ಯವನ್ನು ಕಲ್ಪಿಸಲಾಗಿದೆ. ವಿಶೇಷಚೇತನರಿಗೆ ಮನೆಯಿಂದ ಕರೆದುಕೊಂಡು ಬಂದು ಮತದಾನ ಮಾಡಿ ವಾಪಸ್‌ ತೆರಳಲು ವಾಹನ ವ್ಯವಸ್ಥೆ ಮತ್ತು ಸಹಾಯಕರನ್ನು ನೇಮಿಸಲಾಗಿದೆ.

ಆದ್ದರಿಂದ, ನಾಡಿನ ಪ್ರಗತಿಯನ್ನು ದೃಢಪಡಿಸುವ ನಿಟ್ಟಿನಲ್ಲಿ ಯಾವುದೇ ಆಸೆ ಆಮಿಷಗಳಿಗೆ ಹಾಗೂ ಯಾವುದೇ ಪ್ರಭಾವಗಳಿಗೆ ತಮ್ಮ ಒಳಗಾಗದೆ ಕರ್ತವ್ಯಗಳನ್ನು ನಿರ್ವಹಿಸಿ ಎಂದು ಸವಿನಯ ಮನವಿ.

Advertisement

“ಮತದಾನ ನಿಮ್ಮ ಹಕ್ಕು ಹಾಗೂ ನಿಮ್ಮ ಜವಾಬ್ದಾರಿ, ತಪ್ಪದೆ ಮತ ಚಲಾಯಿಸಿ’
ಹೆಪ್ಸಿಬಾ ರಾಣಿ ಕೊರ್ಲಪಾಟಿ,
ಕ್ಷೇತ್ರ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next