Advertisement

ಮತದಾನಕ್ಕೆ ಆಮಂತ್ರಣ ಪತ್ರಿಕೆ

04:42 PM Apr 18, 2023 | Team Udayavani |

ಕೋಲಾರ: ಜಿಲ್ಲಾ ಸ್ವೀಪ್‌ ಸಮಿತಿಯು ಮತದಾನಕ್ಕೆ ಮದುವೆ ಮಾದರಿಯ ಆಮಂತ್ರಣ ಪತ್ರಿಕೆಯನ್ನು ಮುದ್ರಿಸುವ ಮೂಲಕ ಮತದಾರರ ಗಮನ ಸೆಳೆಯುವ ಪ್ರಯತ್ನ ಮಾಡಿದೆ.

Advertisement

ಭಾರತ ಸರಕಾರದ ಚುನಾವಣಾ ಆಯೋಗದ ಹೆಸರಿನಲ್ಲಿ ಈ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿದ್ದು, ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿ ವಾಹನ ಶಕ 1945 ಕ್ಕೆ ಸರಿಯಾದ ಶ್ರೀಶೋಭಕೃತ್‌ ನಾಮಸಂವತ್ಸರ ದಿನಾಂಕ 10.5.2023 ರ ಬುಧವಾರ ಬೆಳಿಗ್ಗೆ 7ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಲ್ಲುವ ಶುಭ ಘಳಿಗೆಯಲ್ಲಿ ಮತದಾನ ಎಂಬ ಚುನಾವಣೋತ್ಸವ ನೆರವೇರುವಂತೆ ಭಾರತ ಸರ್ಕಾರ ನಿಶ್ಚಯಿಸಿರುವುದರಿಂದ ತಾವು ಸಕುಟುಂಬ ಸಮೇತರಾಗಿ ಆಗಮಿಸಿ, ತಮ್ಮ ಸ್ವಇಚ್ಛೆಯಂತೆ ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ಭಾರತದ ಭವಿಷ್ಯವನ್ನು ರೂಪಿಸಬೇಕೆಂದು ಕೋರುವ, ತಮ್ಮ ಆಗಮನಾಭಿಲಾಷಿಗಳು ಭಾರತಚುನಾವಣಾ ಆಯೋಗ, ಸ್ಥಳ ಮತಗಟ್ಟೆ ಕೇಂದ್ರ ಎಂದು ಆಹ್ವಾನ ಕೋರಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್‌: ವಿಶೇಷ ಸೂಚನೆ ಯಾಗಿ ಹಣಕೇಳದೆ ಮತ ನೀಡಿ ಆಶೀರ್ವದಿಸಿ ಸುಖಾಗಮನ ಬಯಸುವವರು ಎಲ್ಲಾ ಪಕ್ಷಗಳು ಎಂದು ಮುದ್ರಿಸಲಾಗಿದೆ. ಮತದಾನ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಈಗಾಗಲೇ ವಿವಿಧ ವೈವಿಧ್ಯಮ ಸ್ಪೀಪ್‌ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಚುನಾವಣಾಆಯೋಗವು ಮುದ್ರಿಸಿರುವ ಈ ಆಮಂತ್ರಣ ಪತ್ರಿಕೆಯು ಸಾಮಾಜಿಕ ಜಾಲ ತಾಣಗಳ ಮೂಲಕ ಮತದಾರರಿಗೆ ಹಂಚಿಕೆಯಾಗುತ್ತಿದೆ.

ಇದೇ ರೀತಿಯಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿರುವ ನೂತನ ಮತದಾರರಿಗೆ ಜಿಲ್ಲಾ ಚುನಾವಣಾಧಿಕಾರಿ ಸಹಿ ಹೊಂದಿರುವ ಪತ್ರವೊಂದನ್ನು ಅಂಚೆ ಮೂಲಕ ಮತದಾರರ ಸ್ಮಾರ್ಟ್‌ ಕಾರ್ಡ್‌ನೊಂದಿಗೆ ಕಳುಹಿಸಲಾಗುತ್ತಿದ್ದು, ಮತದಾನ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆಯೂ ಮನವಿ ಮಾಡುತ್ತಿರುವುದು ಮತದಾರರ ಗಮನ ಸೆಳೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next