Advertisement

ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಿಗೆ ಆಹ್ವಾನ

04:54 PM Nov 21, 2018 | |

ಎಂ.ಕೆ.ಹುಬ್ಬಳ್ಳಿ: ಚಿಕ್ಕಮುನವಳ್ಳಿ ಗ್ರಾಮದಲ್ಲಿ ಡಿ. 8 ರಂದು ನಡೆಯಲಿರುವ ಖಾನಾಪುರ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಖ್ಯಾತ ಸಾಹಿತಿ ಸತೀಶ ಕುಲಕರ್ಣಿ ಅವರನ್ನು ಹಾವೇರಿಯ ಅವರ ನಿವಾಸಕ್ಕೆ ತೆರಳಿ ಕನ್ನಡ ಸಾಹಿತ್ಯ ಪರಿಷತ್‌ ಪದಾಧಿಕಾರಿಗಳು, ಗ್ರಾಮಸ್ಥರು ತೆರಳಿ ಸತ್ಕರಿಸಿ ಆಹ್ವಾನಿಸಿದರು.

Advertisement

ತಾಲೂಕಾ ಅಧ್ಯಕ್ಷ ವಿಜಯ ಬಡಿಗೇರ ಮಾತನಾಡಿ, ಸತೀಶ ಕುಲಕರ್ಣಿಯವರು ಖಾನಾಪುರದಲ್ಲಿ 80 ರ ದಶಕದಲ್ಲಿ ಸೇವೆ ಸಲ್ಲಿಸಿ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದಲ್ಲಿ ಸಂಚಲನ ಮೂಡಿಸಿದವರು ಅವರ ಸಾಹಿತ್ಯಿಕ ಕೊಡುಗೆ ಅಪಾರವಾಗಿದ್ದು ಇಂಥವರನ್ನು ಸರ್ವಾಧ್ಯಕ್ಷರನ್ನಾಗಿ ಆಹ್ವಾನಿಸಲು ನಮಗೆ ಹೆಮ್ಮೆಯಾಗುತ್ತಿದೆ ಹಾಗೂ ಸಮ್ಮೇಳನದ ಉದ್ಘಾಟಕರಾಗಿ ಖ್ಯಾತ ಸಾಹಿತಿಗಳಾದ ಸರಜೂ ಕಾಟ್ಕರ ಆಗಮಿಸಲು ಒಪ್ಪಿದ್ದಾರೆ ಮತ್ತು ಗ್ರಾಮಸ್ಥರ ಹಾಗೂ ಪದಾಧಿಕಾರಿಗಳ ಸಹಕಾರದಿಂದ ಸಮ್ಮೇಳನದ ಸಕಲ ಸಿದ್ಧತೆಗಳು ನಡೆದಿವೆ ಎಂದರು.

ಸತೀಶ ಕುಲಕರ್ಣಿ ಮಾತನಾಡಿ, ಗಡಿಭಾಗದ ಜನ ನನ್ನನ್ನು ಸರ್ವಾಧ್ಯಕ್ಷನನ್ನಾಗಿ ಆಹ್ವಾನಿಸುತ್ತಿರುವುದು ಸುದೈವ ಅಲ್ಲಿನ ನಾಡು ನುಡಿ ಸೇವೆಗೆ ನಾನು ಸಹಕಾರ ನೀಡುತ್ತೇನೆ ಎಂದರು. ಚಿಕ್ಕಮುನವಳ್ಳಿಯ ಅಶೋಕ ಬೆಂಡಿಗೇರಿ, ಕಸಾಪ ಪದಾಧಿಕಾರಿ ಬಿ.ಎನ್‌. ಬನೋಶಿ ಹಾಗೂ ಸಾಹಿತಿಗಳು ಮಾತನಾಡಿದರು. ನಾರಾಯಣ ಜೋಶಿ, ಎಸ್‌.ಎಸ್‌.ಹಿರೇಮಠ, ಆರ್‌.ಬಿ.ಹುಣಶೀಕಟ್ಟಿ ಹಾಗೂ ಹಾವೇರಿ ಜಿಲ್ಲಾ ಕಾರಾಗೃಹ ಅಧಿ ಕಾರಿ ಟಿ.ಬಿ.ಭಜಂತ್ರಿ, ತಾಲೂಕಾ ಕಸಾಪ ಮಾಜಿ ಅಧ್ಯಕ್ಷ ವಿ.ಎಂ.ಪತ್ರಿ ಮತ್ತು ಸಾಹಿತ್ಯ ಬಳಗದ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next