Advertisement

ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಮಾಜದ ಬೆಸುಗೆ: ಪ್ರೊ|ಬೈರಪ್ಪ

10:34 AM May 11, 2018 | Team Udayavani |

ಮಹಾನಗರ: ಶಿರಿಡಿಯಿಂದ ಆಗಮಿಸುತ್ತಿರುವ ಶ್ರೀ ಸಾಯಿಬಾಬಾರ ಮೂಲ ಪಾದುಕಾ ದರ್ಶನ ಕಾರ್ಯಕ್ರಮ ನಗರದ ಉರ್ವ ಚಿಲಿಂಬಿಯ ಶ್ರೀ ಶಿರಿಡಿ ಸಾಯಿಬಾಬ ಮಂದಿರದಲ್ಲಿ ಮೇ 22ರಿಂದ 25ರವರೆಗೆ ನಡೆಯಲಿದ್ದು, ಇದರ ಆಮಂತ್ರಣ ಬಿಡುಗಡೆ ಸಮಾರಂಭ ಸಾಯಿಬಾಬ ಮಂದಿರದಲ್ಲಿ ನಡೆಯಿತು.

Advertisement

ಮಂಗಳೂರು ವಿ.ವಿ.ಯ ಕುಲಪತಿ ಪ್ರೊ| ಬೈರಪ್ಪ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳು ಸಮಾಜವನ್ನು ಬೆಸೆಯುವ ಹಾಗೂ ಮಾನಸಿಕ ಶಾಂತಿ ನೀಡುವ ಉತ್ಸವಗಳಾಗಿದೆ. ಮಂಗಳೂರಿನಲ್ಲಿ ನಡೆಯಲಿರುವ ಈ ಅಪೂರ್ವ ಕಾರ್ಯಕ್ರಮವನ್ನು ಆಸ್ತಿಕ ಬಂಧುಗಳು ಯಶಸ್ವಿಗೊಳಿಸಬೇಕು ಎಂದರು.

ಮುಡಾ ಅಧ್ಯಕ್ಷ ಸುರೇಶ್‌ ಬಲ್ಲಾಳ್‌ ಮಾತನಾಡಿ, ಸಾಯಿಬಾಬ ಅವರು ಧರಿಸುತ್ತಿದ್ದ ಶ್ರೀ ಪಾದುಕೆಯನ್ನು ಶಿರಿಡಿಯಿಂದ ತಂದು ಚಿಲಿಂಬಿಯ ಸಾಯಿಬಾಬ ಮಂದಿರದಲ್ಲಿ ದರ್ಶನಾರ್ಥವಾಗಿ ಪೂಜಿಸುವ ಸುವರ್ಣಾಕಾಶ ಪ್ರಾಪ್ತವಾಗಿರುವುದು ಭಕ್ತರಿಗೆ ಸಂತಸ ತಂದಿದೆ ಎಂದರು.

ಉದ್ಯಮಿ ಡಾ| ರವಿಚಂದ್ರನ್‌, ಇಂದಿರಾ ರವಿಚಂದ್ರನ್‌, ಲೀಲಾಕ್ಷ ಕರ್ಕೇರ, ರಣದೀಪ್‌ ಕಾಂಚನ್‌, ಯೋಗಗುರು ಜಗದೀಶ್‌ ಶೆಟ್ಟಿ ಬಿಜೈ, ಪತ್ರಕರ್ತ ಪಿ.ಬಿ.ಹರೀಶ್‌ ರೈ, ಅಭಿಲಾಷ್‌, ಯುದಿಷ್ಠಿರ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಸುಧಾಕರ ರಾವ್‌ ಪೇಜಾವರ ನಿರೂಪಿಸಿದರು.

ಸಾಯಿ ಶತಾಬ್ದ
ಸಾಯಿಬಾಬ ಮಂದಿರದಲ್ಲಿ 2018ರ ವರ್ಷವನ್ನು ವಿವಿಧ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಸಾಯಿ ಶತಾಬ್ದ ವರ್ಷವನ್ನಾಗಿ ಆಚರಿಸಲಾಗುತ್ತಿದೆ. ಮೇ 22ರಿಂದ ನಡೆಯುವ ಶ್ರೀ ಸಾಯಿ ಪಾದುಕಾ ದರ್ಶನದಲ್ಲಿ 50 ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಶಿರಿಡಿ ಸಾಯಿಬಾಬಾ ಮಂದಿರ ಸೇವಾ ಟ್ರಸ್ಟ್‌ನ ಆಡಳಿತ ಮೊಕ್ತೇಸರ ವಿಶ್ವಾಸ್‌ಕುಮಾರ್‌ ದಾಸ್‌ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next