ಮುಂಬೈ: ವಹಿವಾಟುದಾರರ ಲಾಭ ನಗದೀಕರಣ, ಜಾಗತಿಕ ಶೇರು ಮಾರುಕಟ್ಟೆ ಪೇಟೆಯ ದೌರ್ಬಲ್ಯ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕಾರಣದಿಂದಾಗಿ ಕಳೆದ ವಾರದಿಂದ ಮುಂಬೈ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಭಾರೀ ಕುಸಿತ ಕಂಡ ಪರಿಣಾಮ ಕಳೆದ 5 ದಿನಗಳಲ್ಲಿ ಹೂಡಿಕೆದಾರರಿಗೆ ಬರೋಬ್ಬರಿ 8.47 ಲಕ್ಷ ಕೋಟಿ ರೂಪಾಯಿ ನಷ್ಟ ತಂದೊಡ್ಡಿದೆ.
ಸೋಮವಾರವೂ ಕೂಡಾ ಶೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ 600 ಅಂಕಗಳ ನಷ್ಟ ಕಂಡಿದ್ದು, ದಿನಾಂತ್ಯದಲ್ಲಿ 536.58 ಅಂಕಗಳ ಭಾರೀ ನಷ್ಟದೊಂದಿಗೆ 36,305.02ಕ್ಕೆ ವಹಿವಾಟು ಅಂತ್ಯಗೊಂಡಿದೆ.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡಾ 11ಸಾವಿರಕ್ಕಿಂತಲೂ ಕಡಿಮೆ ಕುಸಿತ ಕಂಡಿದೆ. ಪ್ರತಿಷ್ಠಿತ ಬಿಎಸ್ ಇ ಲಿಸ್ಟೆಡ್ ಕಂಪನಿಗಳ ಶೇರುಗಳ ಮಾರುಕಟ್ಟೆ ಮೌಲ್ಯ 8,47, 974.15 ಕೋಟಿ ರೂಪಾಯಿಂದ 1,47.89.045 ಕೋಟಿ ರೂ. ಮಟ್ಟಕ್ಕೆ ಕುಸಿದಿದೆ.
ತೈಲ ಬೆಲೆ ಏರಿಕೆ, ಜಾಗತಿಕ ಮಾರುಕಟ್ಟೆಯ ಏರಿಳಿತದಿಂದಾಗಿ ಶೇರುಪೇಟೆ ವಹಿವಾಟಿನ ಮೇಲೆ ಪರಿಣಾಮ ಬೀರಿದೆ ಎಂದು ಜಿಯೋಜಿಟ್ ಫೈನಾಶ್ಶಿಯಲ್ ಸರ್ವಿಸ್ ಲಿಮಿಟೆಡ್ ನ ರಿಸರ್ಚ್ ಮುಖ್ಯಸ್ಥ ವಿನೋದ್ ನಾಯರ್ ತಿಳಿಸಿದ್ದಾರೆ.