Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಎಂದರೆ ಬೆಂಗಳೂರು ಎನ್ನುವ ಮನಸ್ಥಿತಿ ದೂರ ಮಾಡಿ ಇತರೆ ನಗರಗಳಿಗೆ ಉದ್ದಿಮೆಗಳನ್ನು ಆಹ್ವಾನಿಸುವುದು ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಹಲವೆಡೆ ರೋಡ್ ಶೋ ಮಾಡಲಾಗಿದೆ. ಸುಮಾರು 6 ಸಾವಿರ ಉದ್ದಿಮೆದಾರರಿಗೆ ಆಮಂತ್ರಣ ಕಳುಹಿಸಲಾಗಿದೆ. ಮಂಗಳವಾರ ಮಧ್ಯಾಹ್ನದ ವೇಳೆಗೆ ಸುಮಾರು 650 ಉದ್ದಿಮೆದಾರರು ಪಾಲ್ಗೊಳ್ಳುವುದಾಗಿ ಖಚಿತಪಡಿಸಿದ್ದಾರೆ ಎಂದರು.
Related Articles
Advertisement
ಹೊಸ ಕೈಗಾರಿಕೆ ನೀತಿ: ಉ.ಕ ಭಾಗದಲ್ಲಿ ಉದ್ದಿಮೆ ಆರಂಭಿಸಲು ಆಸಕ್ತಿ ತೋರುವ ಕೈಗಾರಿಕೋದ್ಯಮ ಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸ ಕೈಗಾರಿಕೆ ನೀತಿಯಲ್ಲಿ ಸೌಲಭ್ಯ ಅಳವಡಿಸಲಾಗಿದೆ. ಅನು ಮೋದನೆಗಾಗಿ ಹಣಕಾಸು, ನಗರಾಭಿವೃದ್ಧಿ ಇಲಾಖೆಗೆ ಕಳುಹಿಸ ಲಾಗಿದೆ ಎಂದರು.
ಮೇಳಕ್ಕೆ ಮುಖ್ಯಮಂತ್ರಿ ಚಾಲನೆ: ಫೆ.14ರಂದು ಬೆಳಗ್ಗೆ 10ರಿಂದ 12ರವರೆಗೆ ಉತ್ತರ ಕರ್ನಾಟಕ ವಲಯದ ಶಕ್ತಿ ಸಾಮರ್ಥ್ಯ ಹಾಗೂ ಕೈಗಾರಿಕೆ ಕುರಿತು ಚರ್ಚೆ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಸಿಎಂ ಯಡಿಯೂರಪ್ಪ ಮೇಳಕ್ಕೆ ಚಾಲನೆ ನೀಡುವರು. 2:30ಕ್ಕೆ ಎಫ್‌ಎಂಜಿಸಿ ಅಧಿವೇಶನ, 3:40ಕ್ಕೆ ಒಡಂಬಡಿಕೆ ಸಹಿ ಹಾಗೂ ಸಮಾರೋಪ ನಡೆಯಲಿದೆ. ಮೇಳಕ್ಕಾಗಿ ಸುಮಾರು 1,000 ಜನ ಕುಳಿತುಕೊಳ್ಳುವ ಸಾಮರ್ಥ್ಯದ ಜರ್ಮನ್ ಹ್ಯಾಂಗರ್ ಹವಾ ನಿಯಂತ್ರಿತ ಕೊಠಡಿ ವ್ಯವಸ್ಥೆ ಮಾಡಲಾಗಿದೆ.
ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಸದಾನಂದಗೌಡ ಹಾಗೂ ಸುರೇಶ ಅಂಗಡಿ ಪಾಲ್ಗೊಳ್ಳಲಿದ್ದಾರೆ. ಸಮಾರೋಪದಲ್ಲಿ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರ ಜೋಳ, ಡಾ| ಅಶ್ವಥ ನಾರಾಯಣ, ಲಕ್ಷ್ಮಣ ಸವದಿ, ಸಚಿವ ಸಿ.ಟಿ. ರವಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಆಗಮಿಸಲಿದ್ದಾರೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅಧ್ಯಕ್ಷತೆ ವಹಿಸಲಿದ್ದಾರೆ.
ರಾಜ್ಯದ ವಿವಿಧ ಕೈಗಾರಿಕೆ ಪ್ರದೇಶಗಳಿಂದ ಸುಮಾರು 72 ಕೋಟಿ ರೂ. ತೆರಿಗೆ ನೀಡುವುದು ಬಾಕಿ ಯಿದೆ ಎಂದು ಸ್ಥಳೀಯ ಸಂಸ್ಥೆಗಳ ವಾದ. ಆದರೆ ಕೆಐಡಿಬಿಯಿಂದ ಅಧಿಕೃತವಾಗಿ ಆಸ್ತಿ ಪರಭಾರೆ ಮಾಡದ ಹೊರತು ತೆರಿಗೆ ನಿರ್ಧರಿಸಲು ಬರುವುದಿಲ್ಲ. ಆದರೂ ತೆರಿಗೆ ವಿಧಿಸಿದ್ದು, 72 ಕೋಟಿ ರೂ. ಬಾಕಿ ಉಳಿದು ಕೊಂಡಿದೆ. ಪರಿಹಾರ ಕಂಡುಕೊಳ್ಳಲು ಸಿಎಂ ಜತೆ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.-ಜಗದೀಶ ಶೆಟ್ಟರ್, ಬೃಹತ್ ಕೈಗಾರಿಕೆ ಸಚಿವ