Advertisement
ಮಾರುಕಟ್ಟೆ ನೋಡಿನಾವು ನೀವೆಲ್ಲರೂ ಗಮನಿಸಿರುವಂತೆ ಶೇರುಮಾರುಕಟ್ಟೆ ಉತ್ತುಂಗದಲ್ಲಿದೆ. ಈಕ್ವಿಟಿ ಮಾರುಕಟ್ಟೆ ಈ ವರ್ಷ ಶೇ.18.5ರ ಏರಿಕೆಯನ್ನು ದಾಖಲಿಸಿದೆ. ಅದೇ ವೇಳೆಗೆ ಡೆತ್ ಮಾರ್ಕೆಟ್ ಶೇ. 9ರ ಏರಿಕೆಯನ್ನು ಸಾಧಿಸಿದೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಚಿನ್ನದ ಮಾರುಕಟ್ಟೆ ಕಳೆದ ಸಾಲಿನಲ್ಲಿ ಇಳಿಮುಖದ ಸಾಧನೆಯನ್ನು ತೋರಿರುವುದು. ಈ ಹಂತದಲ್ಲಿ ನಿಮ್ಮ ಹೂಡಿಕೆಯ ಪೋರ್ಟ್‌ಫೋಲಿಯೋ ಪುನರ್ ನಿರ್ಮಾಣ ಮಾಡುವುದು ಸೂಕ್ತ. ಈಗಾಗಲೇ ಶೇರುಮಾರುಕಟ್ಟೆ ತನ್ನ ಉತ್ತುಂಗ ತಲುಪಿರುವ ಕಾರಣ ಲಾಭದಲ್ಲಿರುವ ಕೆಲವು ಶೇರುಗಳನ್ನು ಮಾರಾಟ ಮಾಡಿ ಬರುವ ಮೊತ್ತವನ್ನು ಡೆಬ್r ಮತ್ತು ಗೋಲ್ಡ್ ನಲ್ಲಿ ಹೂಡಿಕೆ ಮಾಡುವುದು ಒಳಿತು. ೆ.
ಟ್ಯಾಕ್ಸ್ ಪ್ಲಾನಿಂಗ್ ಗೋಸ್ಕರ ಹೂಡಿಕೆ ಮಾಡುವುದರ ಬದಲು ಏಪ್ರಿಲ್ ನಿಂದಲೇ ಎಸ್.ಐ.ಪಿ.ಅಡಿಯಲ್ಲಿ ಪ್ರತಿತಿಂಗಳೂ ಇಂತಿಷ್ಟು ಎಂದು ಮೊತ್ತ ನಿಗದಿ ಪಡಿಸಿಕೊಂಡು ಈ.ಎಲ್.ಎಸ್.ಎಸ್. ನಲ್ಲಿ ಹೂಡುವುದು ಜಾಣ ನಿರ್ಧಾರ. 2014ರ ಎಪ್ರಿಲ್‌ನಿಂದ ಆರಂಭಿಸಿ 2017ರ ಮಾರ್ಚ್ ತನಕ ಪ್ರತಿತಿಂಗಳೂ ಐದುಸಾವಿರ ಎಸ್.ಐ.ಪಿ.ಯಡಿಯಲ್ಲಿ ಹೂಡಿಕೆ ಮಾಡುತ್ತಾ ರೂ:1.80 ಲಕ್ಷ ಮೊತ್ತ ಜಮೆ ಮಾಡಿರುವವರು ಈಗ ರೂ:2.15 ಲಕ್ಷದ ಮೊತ್ತದ ಯಜಮಾನರಾಗಿದ್ದಾರೆ. ಇದು ಉತ್ತಮ ಹೂಡಿಕೆಯಲ್ಲವೇ? ತೆರಿಗೆ ವಿನಾಯಿತಿ ಜೊತೆಗೆ ಲಾಭವನ್ನೂ ನೀಡುವ ಇಂತಹ ಹೂಡಿಕೆ ಬಗ್ಗೆ ಗಮನಿಸುವುದು ಸೂಕ್ತ. 15 ಎಚ್ ಮತ್ತು 15-ಜಿ ನಮೂನೆಗಳನ್ನು ಸಲ್ಲಿಸಿ
ನೀವು ಹಿರಿಯ ನಾಗರಿಕರಾಗಿದ್ದು ನಿಮ್ಮ ಒಟ್ಟಾರೆ ಆದಾಯ ತೆರಿಗೆ ಮಿತಿಯ ಒಳಗಡೆ ಬರುವುದಿಲ್ಲವೆಂದಾದಲ್ಲಿ 15-ಜಿ ಅಥವಾ 15.ಎಚ್ ಸಲ್ಲಿಕೆ ಮಾಡಬೇಕಾಗುತ್ತದೆ. ಇದರ ಸಲ್ಲಿಕೆ ಮಾಡುವುದರಿಂದ ಮೂಲದಲ್ಲಿ ತೆರಿಗೆ ಕಟಾವಣೆ (ಟಿಡಿ.ಎಸ್) ತಪ್ಪಿಸಬಹುದು. ಕೆಲವು ಬ್ಯಾಂಕುಗಳಲ್ಲಿ ಅನ್ ಲೈನ್ ಮೂಲಕವೂ ಇಂಥ ಫಾರಂ ಸಲ್ಲಿಕೆಗೆ ಅವಕಾಶವಿದೆ. ಬ್ಯಾಂಕಿಗೆ ಹೋಗಿ ಬರುವ ಶ್ರಮ ಮತ್ತು ಖರ್ಚನ್ನೂ ಉಳಿಸಬಹುದು.
Related Articles
ನಿಮ್ಮ ಇದುವರೆಗಿನ ಕೆಲವು ಹೂಡಿಕೆಗಳಲ್ಲಿ ನಿರಾಶಾದಾಯಕ ಇಳುವರಿ ಸಿಕ್ಕಿರಬಹುದು. ಅವು ನಿಮ್ಮ ನಿರೀಕ್ಷಿತ ಗುರಿಯನ್ನು ತಲುಪದೇ ಇರಬಹುದು. ಹಾಗಾಗಿ ನಿಮ್ಮ ಗುರಿತಲುಪಲು ಬೇಕಾದ ಹೆಚ್ಚುವರಿ ಮೊತ್ತವನ್ನು ಸೂಕ್ತವಾದ ಯೋಜನೆಯಲ್ಲಿ ಈ ಬಾರಿ ಹೂಡಿಕೆ ಮಾಡಿ. ನೀವು ಖರೀದಿ ಮಾಡಬೇಕೆಂದಿದ್ದ ಮನೆಯ ಬೆಲೆ ಈಗ ಏರಿರಬಹುದು. ಏರಿಕೆಯಾಗಿರುವ ಮೌಲ್ಯವನ್ನು ಹೇಗೆ ಸರಿದೂಗಿಸುವುದು ಎಂಬ ಚಿಂತೆ ನಿಮ್ಮನ್ನು ಕಾಡುತ್ತಿರಬಹುದು. ಹಾಗಾಗಿ ಹೆಚ್ಚಿನ ಉಳಿತಾಯ ಮತ್ತು ಜಾಣ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳಿ, ಪ್ರಾವಿಡೆಂಟ್ ಫಂಡೂ ಇದೆ ನೀವೂ ಗಮನಿಸಿರಬಹುದು. ಪಬ್ಲಿಕ್ ಪ್ರಾಡೆಂಟ್ ಫಂಡ್ ಶೇ:7.9ರ ಇಳುವರಿಯನ್ನು ಕೊಟ್ಟಿದೆ. ಆದರೆ ನೀವು ವಾಲಂಟರಿ ಪ್ರಾಡೆಂಟ್ ಫಂಡ್ ಯೋಜನೆಗೆ ಹೂಡಿಕೆ ಮಾಡಿದ್ದರೆ ಅಲ್ಲಿ ನೀವು ಶೇ:.8.65ರ ಇಳುವರಿ ಪಡೆಯುತ್ತಿದ್ದಿರಿ. ಈ ಹೂಡಿಕೆಗಳಿಂದ ಬರುವ ವರಮಾನವೆಲ್ಲವೂ ತೆರಿಗೆರಹಿತವಾದದ್ದು . ಈ ಆರ್ಥಿಕ ವರುಷದ ಆರಂಭದಿಂದಲೇ .ಪಿ.ಎಫ್. ಹೂಡಿಕೆ ಶುರು ಮಾಡುವುದು ಒಳಿತು.
Advertisement
ಎನ್.ಪಿ.ಎಸ್.ಖಾತೆ ತೆರೆಯಿರಿಒಂದೊಮ್ಮೆ ನೀವು ನ್ಯಾಶನಲ್ ಪೆನ್‌ಶನ್ ಸ್ಕೀಮ್ ಖಾತೆಯನ್ನು ಇದುವರೆಗೆ ಹೊಂದಿಲ್ಲದೇ ಇದ್ದಲ್ಲಿ ತಡ ಮಾಡಬೇಡಿ. ತ್ವರಿತವಾಗಿ ಒಂದು ಎನ್.ಪಿ.ಎಸ್. ಖಾತೆಯನ್ನು ತೆರೆದು ಉಳಿತಾಯವನ್ನು ಅದರಲ್ಲಿ ಹೂಡಿಕೆ ಮಾಡಿ. 80-ಸಿಸಿ ಅಡಿಯಲ್ಲಿ ಸಿಗುವ ಗರಿಷ್ಠ ವಿನಾಯಿತಿಗಳಲ್ಲದೇ ಹೆಚ್ಚುವರಿಯಾಗಿ ಐವತ್ತುಸಾವಿರ ರೂ.ಗಳನ್ನು ಎನ್.ಪಿ.ಎಸ್.ನಲ್ಲಿ ಹೂಡಿಕೆ ಮಾಡಿದ್ದರೆ ಅದು ಸೆಕ್ಷನ್ 80ಸಿಸಿಡಿ(1ಬಿ) ಅನ್ವಯ ವಿನಾಯಿತಿ ಇದೆ. ಆಧಾರ್ ಕಾರ್ಡು ಹೊಂದಿರುವವರಿಗೆ ಎನ್.ಪಿ.ಎಸ್.ಖಾತೆ ತೆರೆಯುವುದು ಅತ್ಯಂತ ಸುಲಭ. 15-20 ನಿುಷಗಳಲ್ಲಿ ಆನ್ ಲೈನ್‌ನಲ್ಲಿ ಖಾತೆ ತೆರೆಯಬಹುದು. ಎಸ್.ಐ.ಪಿ. ಹೂಡಿಕೆ ಹೆಚ್ಚಿಸಿ
ಉಳಿತಾಯವೆನ್ನುವುದು ಸಣ್ಣ ಸಣ್ಣ ಮೊತ್ತಗಳಿಂದಲೇ ಸಾಧ್ಯವಾಗುವ ಸಂಗತಿ. ಪ್ರತಿ ತಿಂಗಳೂ ನಿಮ್ಮ ಹೂಡಿಕೆಯನ್ನು ಸಿಸ್ಟಮ್ಯಾಟಿಕ್ ಇನ್ವೆಸ್ಟಮೆಂಟ್ ಪ್ಲಾನ್ (ಎಸ್.ಐ.ಪಿ) ಮೂಲಕ ಮಾಡುತ್ತಿದ್ದೀರಿ ಎಂದಾದರೆ ನಿಮ್ಮದು ಜಾಣತನದ ನಿರ್ಧಾರವೇ ಸರಿ. ಆದರೆ ಈ ಬಾರಿ ಅದನ್ನು ಕೊಂಚ ಹೆಚ್ಚಿಸುವುದು ಸಾಧ್ಯವಿದ್ದಲ್ಲಿ ನೀವು ಇನ್ನಷ್ಟು ಜಾಣರಾಗುತ್ತೀರಿ. ಖರ್ಚನ್ನು ಕಡಿಮೆ ಮಾಡಿ ಉಳಿತಾಯದತ್ತ ಇನ್ನೂ ಸ್ವಲ್ಪ ಹೆಚ್ಚಿನ ಮೊತ್ತವನ್ನು ಕೂಡಿಡುವುದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ನಿರ್ಧಾರ. – ನಿರಂಜನ