Advertisement

ಮಾಧ್ಯಮಗಳಲ್ಲಿ ರಾಜಕಾರಣಿಗಳ ಹೂಡಿಕೆ ಅಪಾಯಕಾರಿ

04:23 PM May 08, 2017 | |

ಧಾರವಾಡ: ಉದ್ಯಮಿಗಳು ಪತ್ರಿಕಾರಂಗಕ್ಕೆ ಬರಲಿ. ಆದರೆ, ರಾಜಕಾರಣಿಗಳು ಪತ್ರಿಕಾರಂಗಕ್ಕೆ ಪ್ರವೇಶ ಮಾಡಿರುವುದು ಅಪಾಯಕಾರಿ ಸಂಗತಿ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ ಅಮೀನಮಟ್ಟು ಹೇಳಿದರು. ನಗರದಲ್ಲಿ ಮೇ ಸಾಹಿತ್ಯ ಮೇಳದಂಗವಾಗಿ ನಡೆದ “ಮಾಧ್ಯಮ: ವಾಸ್ತವ ನೋಟ’ ಕುರಿತ ಗೋಷ್ಠಿ ನಿರ್ದೇಶನ ಮಾಡಿ ಅವರು ಮಾತನಾಡಿದರು.

Advertisement

ಪ್ರಸ್ತುತ ಮಾಧ್ಯಮಗಳಿಗೆ ಬೇಕಾಗಿರುವುದು ಗ್ರಾಹಕರೇ ಹೊರತು ಓದುಗ ಅಥವಾ ವೀಕ್ಷಕರಲ್ಲ. ಮಾಧ್ಯಮಗಳು ಜಾಹೀರಾತುಗಳನ್ನೇ ಸಂಪೂರ್ಣವಾಗಿ ಅವಲಂಬಿಸಿವೆ. ಅವುಗಳಿಗೆ ಗ್ರಾಹಕರ ಅವಶ್ಯಕತೆಯಿದೆ. ಮಾಧ್ಯಮಗಳು ಚಳವಳಿಗಳ ಪರವಾಗಿದ್ದರೂ ಅವುಗಳನ್ನು ನಂಬಿ ಚಳವಳಿ ಆರಂಭಿಸಿದರೆ ಖಂಡಿತ ನಿರಾಸೆಯಾಗುತ್ತದೆ.

ಮಾಧ್ಯಮದ ಬಗ್ಗೆ ಜನರಿಗೆ ಆಕ್ರೋಶವಿದೆ ಎಂದರು. ಮಾಧ್ಯಮಗಳು ಜನಪರ ಸುದ್ದಿಗಳನ್ನು ಹೆಚ್ಚು ಹೆಚ್ಚು ಪ್ರಕಟಿಸಬೇಕಾದರೆ ಸಹಕಾರ ತತ್ವದಡಿ ಪತ್ರಿಕೆ ಮಾಡಬೇಕು. ಓದುಗರನ್ನೇ ಶೇರುದಾರರನ್ನಾಗಿ ಮಾಡಿ ಅವರು ನೀಡಿದ ಚಂದಾ ಹಣದಿಂದ ಪತ್ರಿಕೆ ನಡೆಸುವಂತಾಗಬೇಕು ಎಂದು ಹೇಳಿದ ಅವರು, ಸಾಮಾಜಿಕ ಜಾಲತಾಣಗಳ ದುರುಪಯೋಗವಾಗುತ್ತಿದೆ ಎಂಬುದು ಕೆಲವರ ಅಪಪ್ರಚಾರವಷ್ಟೇ ಎಂದರು. 

ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಮಾತನಾಡಿ, ಪತ್ರಿಕೆಗಳು ಸುದ್ದಿಗಳನ್ನು ಬರೆಯುತ್ತವೆ. ತಮ್ಮ ಜವಾಬ್ದಾರಿ ನಿಭಾಯಿಸುತ್ತಿವೆ. ಆದರೆ ಇಂಥ ಸುದ್ದಿಗಳನ್ನು ಇಟ್ಟುಕೊಂಡು ಹೋರಾಟ ಮಾಡುವವರ ಅವಶ್ಯಕತೆಯಿದೆ. ಮಾಧ್ಯಮಗಳು ಸಾಮಾಜಿಕ ಅನಿಷ್ಠ ತಡೆಯುವ ಗುತ್ತಿಗೆ ಪಡೆದಿಲ್ಲ. ಅವು ತಮ್ಮ ಕೆಲಸ ಸಮರ್ಪಕವಾಗಿ ಮಾಡುತ್ತಿವೆ. 

ಅನಗತ್ಯವಾಗಿ ಮಾಧ್ಯಮಗಳನ್ನು ದೂರುವುದು ಸರಿಯಲ್ಲ ಎಂದರು. ಶೃಂಗೇಶ ಮಾತನಾಡಿ, ದೊಡ್ಡ ಪತ್ರಿಕೆಗಳು ಬಲಪಂಥೀಯರ ತುತ್ತೂರಿ ಆಗುತ್ತಿದ್ದು, ಸಣ್ಣ ಪತ್ರಿಕೆಗಳನ್ನು ಬೆಳೆಸುವುದು ಅವಶ್ಯ. ಸಣ್ಣ ಪತ್ರಿಕೆಗಳು ಯಾರಿಗೂ ಬೇಡವಾಗಿದ್ದು, ನಿರ್ಲಕ್ಷಕ್ಕೊಳಗಾಗಿದ್ದು ದುರ್ದೈವ ಎಂದರು. ಮಂಜುನಾಥ ಅದ್ದೆ ಮಾತನಾಡಿ, ಮಾಧ್ಯಮಗಳು ಒಂದು ಘಟನೆ ನಡೆದಾಗ ತಾವೇ ದೂರು ದಾಖಲಿಸಿಕೊಂಡು,

Advertisement

ತಾವೇ ವಿಚಾರಣೆ ನಡೆಸಿ, ತಾವೇ ಶಿಕ್ಷೆ ನೀಡುತ್ತಿರುವುದು ಅಪಾಯಕಾರಿ ವರ್ತನೆಯಾಗಿದೆ. ರೈತರ ಆತ್ಮಹತ್ಯೆ, ಮಹಿಳಾ ದೌರ್ಜನ್ಯಗಳನ್ನು ಕಡೆಗಣಿಸಿ ಟಿಆರ್‌ಪಿ ಆಧರಿಸಿ ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ. ಮಾಧ್ಯಮಗಳಿಗೆ ಸಾಮಾಜಿಕ ಜವಾಬ್ದಾರಿ ಇಲ್ಲವಾಗಿದೆ. ಮೌಡ್ಯಗಳ ಬಿತ್ತನೆ ನಡೆದಿದೆ. ರಾಜ್ಯದ ಎಲ್ಲ ವಾಹಿನಿಗಳು ನಷ್ಟದಲ್ಲಿದ್ದರೂ ಅವುಗಳ ನಿರ್ವಹಣೆಗೆ ಹಣ ಎಲ್ಲಿಂದ ಬರುತ್ತದೆ ಎಂಬುದನ್ನು ಅಧ್ಯಯನ ಮಾಡುವುದು ಅವಶ್ಯ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next