Advertisement

ಡಿಜಿಟಲ್ ರೂಪಾಂತರ ಹೂಡಿಕೆ ಏರಿಕೆ

12:21 PM Mar 26, 2019 | Lakshmi GovindaRaju |

ಬೆಂಗಳೂರು: ಡಿಜಿಟಲ್ ರೂಪಾಂತರ ಕಂಪನಿಗಳ ಜಾಗತಿಕವಾಗಿ ಹೂಡಿಕೆಯು ಪ್ರಸ್ತುತ 1.3 ಟ್ರಿಲಿಯನ್‌ ಡಾಲರ್‌ಗೆ ತಲುಪಿದ್ದು, 2021ರ ವೇಳೆಗೆ ಇದು 2.1 ಟ್ರಿಲಿಯನ್‌ ಡಾಲರ್‌ಗೆ ಏರಿಕೆಯಾಗಲಿದೆ ಎಂದು ಸಿಐಐ ಕರ್ನಾಟಕ ತಂತ್ರಜ್ಞಾನ ಮತ್ತು ಆವಿಷ್ಕಾರ ಸಮಿತಿಯ ಸಹ ಸಮಾಲೋಚಕ ಅನಿಲ್‌ ಗೋಪಿನಾಥನ್‌ ತಿಳಿಸಿದರು.

Advertisement

ಡಿಜಿಟಲ್‌ ರೂಪಾಂತರ ಕುರಿತು ಸೋಮವಾರ ನಡೆದ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಡಿಜಿಟಲ್‌ ರೂಪಾಂತರವು ಸಂಸ್ಥೆಗಳಿಗೆ ಕೇವಲ ಮೂಲ ಸೌಕರ್ಯ ಒದಗಿಸುವ ಹಾಗೂ ಕೆಲ ಪ್ರಕ್ರಿಯೆಯನ್ನು ಆಧುನೀಕರಿಸುವುದಕ್ಕೆ ಸೀಮಿತವಾಗಿಲ್ಲ. ಇಂದು ಸಂಸ್ಥೆಯ ಬಹುತೇಕ ವ್ಯವಹಾರ ಮಾದರಿಗಳು ಹಾಗೂ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಜತೆಗೆ ಉತ್ಪಾದನೆ ಚುರುಕುಗೊಳಿಸುವ ವಿಧಾನ ಒಳಗೊಂಡಿವೆ.

ಹೀಗಾಗಿಯೇ, ಡಿಜಿಟಲ್‌ ಉದ್ಯಮಕ್ಕಾಗಿ ಹೂಡಿಕೆ ಮಾಡುವ ಸಂಸ್ಥೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿವೆ. ಪ್ರಸ್ತುತ 1.3 ಟ್ರಿಲಿಯನ್‌ ಡಾಲರ್‌ ಇರುವ ಹೂಡಿಕೆ ಇನ್ನು 2021 ರ ಹೊತ್ತಿಗೆ 2.1 ಟ್ರಿಲಿಯನ್‌ ಡಾಲರ್‌ ತಲುಪಲಿದೆ. ಜತೆಗೆ ಭಾರತದಲ್ಲೂ ಈ ಪ್ರಕ್ರಿಯೆ ಹೆಚ್ಚಾಗಿದ್ದು, ಮುಂದಿನ ನಾಲ್ಕು ವರ್ಷಗಳಲ್ಲಿ ಭಾರತದ ಜಿಡಿಪಿಯಲ್ಲಿ ಶೇ.60ರಷ್ಟು ಕೊಡುಗೆ ಡಿಜಿಟಲ್ ರೂಪಾಂತರದ್ದೇ ಆಗಿರುತ್ತದೆ ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು.

ವಿಪ್ರೋ ಲಿಮಿಟೆಡ್‌ ಮುಖ್ಯ ತಾಂತ್ರಿಕ ಅಧಿಕಾರಿ ಸಂಜೀವ್‌ ಕೋವಿಲ್‌ ಮಾತನಾಡಿ, ಕಂಪನಿಗಳು ಹೊಸ ಆವಷ್ಕಾರ ಹಾಗೂ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿ ಮುಂದಾಗಬೇಕು. ಯಾವುದೇ ಸಮಸ್ಯೆಯನ್ನು ಪರಿಹರಿಸಲು ತಂತ್ರಜ್ಞಾನಗಳ ಸಂಯೋಜನೆ ಅಗತ್ಯವಿದೆ ಎಂದರು. ಸಿಐಐ ಕರ್ನಾಟಕ ರಾಜ್ಯ ಕೌನ್ಸಿಲ್‌ ಅಧ್ಯಕ್ಷ ಅಮನ್‌ ಚೌಧರಿ ಸೇರಿದಂತೆ ವಿವಿಧ ಕಂಪನಿ ಮುಖ್ಯಸ್ಥರು, ತಾಂತ್ರಿಕ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next