Advertisement

ಹೈಕೋರ್ಟ್‌ ನ್ಯಾಯಾಧೀಶರಿಂದ ತನಿಖೆಯಾಗಲಿ: ಯು.ಟಿ. ಖಾದರ್‌

02:19 AM Jul 09, 2022 | Team Udayavani |

ಮಂಗಳೂರು: ರಾಜ್ಯ ಹೈಕೋರ್ಟ್‌ ನ್ಯಾಯಾಧೀಶರಿಗೆ ಪ್ರಕರಣದ ತನಿಖೆಯ ವೇಳೆ ಎಸಿಬಿ ಬಗ್ಗೆ ಮಾತನಾಡಿರುವುದಕ್ಕೆ ವರ್ಗಾವಣೆಯ ಬೆದರಿಕೆ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಮುಖ್ಯ ನ್ಯಾಯಾಧೀಶ ರಿಂದ ತನಿಖೆಯಾಗಲಿ ಎಂದು ವಿಧಾನಸಭಾ ವಿಪಕ್ಷ ಉಪ ನಾಯಕ, ಶಾಸಕ, ಯು.ಟಿ. ಖಾದರ್‌ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

Advertisement

ನ್ಯಾಯಾಧೀಶರಿಗೇ ಬೆದರಿಕೆ ಒಡ್ಡು ವುದು ಸಂವಿಧಾನದ ಆಶಯ ರಕ್ಷಿಸು ವಲ್ಲಿ ಸರಕಾರ ವಿಫಲವಾಗಿರುವುದರ ಲಕ್ಷಣ. ಇದನ್ನು ನಾವು ಖಂಡಿಸುತ್ತೇವೆ ಹಾಗೂ ಈ ಕುರಿತು ಸರಕಾರ ತನಿಖೆಗೆ ಸೂಚಿಸಬೇಕು ಎಂದರು.

ಪಿಎಸ್‌ಐ ಹಗರಣದ ಕುರಿತಂತೆ ಕಾಂಗ್ರೆಸ್‌ ಪಕ್ಷ ಪ್ರಾಥಮಿಕ ಹಂತದಲ್ಲೇ ತನಿಖೆಗೆ ಆಗ್ರಹಿಸಿತ್ತು. ಆದರೆ ಆಗ ಸರಕಾರ ಎಲ್ಲ ನೇಮಕಾತಿ ಸರಿಯಾಗಿ ಆಗಿದೆ. ಅನುತ್ತೀರ್ಣರಾದವರು ಆರೋಪಿ ಸುತ್ತಿದ್ದಾರೆ ಎಂದು ಉಡಾಫೆ ಯಿಂದ ಹೇಳಿತ್ತು. ಕೆಲವೇ ತಿಂಗಳಲ್ಲಿ ಹಗರಣ ಬಯಲಾಗಿದೆ. ಹೈಕೋರ್ಟ್‌ ನ್ಯಾಯಾಧೀಶರು ಸರಕಾರ, ಸಿಐಡಿಗೆ ಛೀಮಾರಿ ಹಾಕಿದ್ದಾರೆ. ಈಗ ಅಕ್ರಮ ತನಿಖೆಗೂ ಹೈಕೋರ್ಟ್‌ ಆದೇಶ ನೀಡ ಬೇಕೆಂದರೆ ಇದು ರಾಜ್ಯ ಸರಕಾರದ ವೈಫ‌ಲ್ಯವಲ್ಲವೇ ಎಂದು ಪ್ರಶ್ನಿಸಿದರು.

ಕಡಲ್ಕೊರೆತ ಕೆಲಸ ಹಸ್ತಾಂತರ ಯಾಕೆ
ಸೋಮೇಶ್ವರದಲ್ಲಿ ಎಡಿಬಿ ನೆರವಿನ ಕಾಮಗಾರಿ ಸಮರ್ಪಕವಾಗಿ ಆಗಿಲ್ಲ ಎಂಬ ಬಗ್ಗೆ ನಾನು ಕಳೆದ ವರ್ಷವೇ ಪತ್ರ ಮುಖೇನ ಬಂದರು ಖಾತೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ತಿಳಿಸಿ 3 ವರ್ಷ ಕಾಲ ಕೆಲಸವನ್ನು ಹಸ್ತಾಂ ತರ ಮಾಡಬಾರದು ಎಂದಿದ್ದೆ. ಆದರೆ ಅದನ್ನು ಬಂದರು ಇಲಾಖೆ ಪಡೆದುಕೊಂಡಿದೆ. ಈಗ ನಿರ್ವಹಣೆಗೆ ಯಾರೂ ಬರುತ್ತಿಲ್ಲ,

ಗುತ್ತಿಗೆದಾರರಿಗೆ ಹಿಂದೆ ಹಣ ಪಾವತಿ ಸದ ಕಾರಣ ಅವರೂ ಕೆಲಸಕ್ಕೆ ಬರುತ್ತಿಲ್ಲ ಎಂದರು.ಕೋಟೆಪುರ, ಉಳ್ಳಾಲಕೋಡಿ ಯಲ್ಲಿ ಹಿಂದೆಲ್ಲಾ ಭಾರೀ ಕಡಲ್ಕೊರೆತ ಸಮಸ್ಯೆ ಆಗುತ್ತಿತ್ತು. ಅದನ್ನು ಕಾಂಗ್ರೆಸ್‌ ಅವಧಿ ಯಲ್ಲಿ ಶಾಶ್ವತ ಪರಿಹಾರದ ಮೂಲಕ ಬಗೆಹರಿಸಲಾಗಿದೆ. ಪ್ರಸ್ತುತ ಬಟ್ಟಪಾಡಿ, ಸೋಮೇಶ್ವರ ಮೊದಲಾದೆಡೆ ಕಡಲ್ಕೊರೆತ ಜೋರಾಗಿದ್ದು, ಶಾಶ್ವತ ಪರಿಹಾರದ ಜತೆಗೆ ಪ್ರತೀ ವರ್ಷ ಅದನ್ನು ನಿರ್ವಹಿಸಬೇಕು. ಅದಕ್ಕೆ ಬಜೆಟ್‌ನಲ್ಲಿ ಸೂಕ್ತ ಅನುದಾನವನ್ನು ಕಾದಿರಿ ಸಬೇಕು ಎಂದು ಆಗ್ರಹಿಸಿದರು.

Advertisement

ಗೋ ವಧೆ ಕುರಿತ
ಕಾನೂನು ಸ್ಪಷ್ಟಪಡಿಸಲಿ
ಅಕ್ರಮ ಗೋಹತ್ಯೆ ಮಾಡಿದರೆ ಆಸ್ತಿ ಮುಟ್ಟುಗೋಲು ಹಾಕುವ ಶಾಸಕ ಡಾ| ಭರತ್‌ ಶೆಟ್ಟಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಖಾದರ್‌, ಯಾರೂ ಕಾನೂನು ಮೀರಿ ಹೋಗಬಾರದು.

ಇದೇ ವೇಳೆ ಬಕ್ರೀದ್‌ ಹಿನ್ನೆಲೆಯಲ್ಲಿ ಖುರ್ಬಾನಿಯಾಗಿ ಬಡವರಿಗೆ ವಿತರಿಸಲು 14 ವರ್ಷ ಮೇಲ್ಪಟ್ಟ ಕೋಣಗಳ ವಧೆಗೆ ಕಾನೂನಿನಲ್ಲಿ ಅವಕಾಶ ಇದೆ. ಆದ್ದರಿಂದ ಈ ಬಗ್ಗೆ ಸರಕಾರ ಸ್ಪಷ್ಟನೆ  ನೀಡಬೇಕು. ಯಾರೂ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ ಎಂದರು.ಸದಾಶಿವ ಉಳ್ಳಾಲ, ರಫೀಕ್‌ ಅಂಬ್ಲಿಮೊಗರು ಅವರು ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next