Advertisement
ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಗುರುವಾರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ವಾಲ್ಮೀಕಿ ಸಂಸ್ಮರಣೆ ಮಾಡಿದರು.
ಬದುಕಿನ ಉತ್ತಮವಾದ ದಾರಿ, ಸದ್ಗುಣಗಳು ಮಾತ್ರ ಸಮಾಜದ ಮೆಚ್ಚುಗೆಯನ್ನು ಪಡೆಯಬಹುದು. ಧರ್ಮ ನಿಷ್ಠರು, ದುರ್ಬಲರ ಪರವಾಗಿ ನಿಲ್ಲುವುದು ಮನುಷ್ಯ ಧರ್ಮ ಎಂಬುದನ್ನು ವಾಲ್ಮೀಕಿ ರಾಮಾಯಣ ಸಾರಿ ಹೇಳಿದೆ. ಈ ಕಾರಣದಿಂದ ಅಯೋಧ್ಯೆ, ಕಿಷ್ಕಿಂಧೆ, ಲಂಕೆಯ ಮೂಲಕ ಉತ್ತಮ ಹಾಗೂ ಕೆಟ್ಟ ಸಂಸ್ಕೃತಿಯ ವಿಭಾಗವನ್ನು ವಾಲ್ಮೀಕಿಯವರು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
Related Articles
ಮುಖ್ಯ ಅತಿಥಿಯಾಗಿದ್ದ ನಗರ ಯೋಜನ ಪ್ರಾಧಿಕಾರದ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಮಾತನಾಡಿ, ಶೂನ್ಯದಿಂದ
ಆಧ್ಯಾತ್ಮಿಕ ಶಿಖರಕ್ಕೆ ಏರಿ ಸಮಾಜಕ್ಕೆ ಮಾದರಿಯಾದ ವಾಲ್ಮೀಕಿಯವರು ಜನ್ಮದಿಂದ ಅಲ್ಲ, ಕರ್ಮದಿಂದ ವ್ಯಕ್ತಿತ್ವ
ಎನ್ನುವುದನ್ನು ತೋರಿಸಿಕೊಟ್ಟ ಮಹಾನ್ ಸಾಧಕ ಎಂದು ಹೇಳಿದರು.
Advertisement
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಆಧ್ಯಕ್ಷ ತಹಶೀಲ್ದಾರ್ ಅನಂತಶಂಕರ್ ಬಿ. ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕಿ, ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಡಿ.ಎನ್. ಉಪಸ್ಥಿತರಿದ್ದರು.
ಶಾಸಕಿ ಶಕುಂತಳಾ ಟಿ. ಶೆಟ್ಟಿ , ಸಹಾಯಕ ಕಮಿಷನರ್ ರಘುನಂದಮೂರ್ತಿ ಅವರ ಅನುಪಸ್ಥಿತಿಯಲ್ಲಿ ಈ ಸರಕಾರಿ ಕಾರ್ಯಕ್ರಮ ನಡೆಯಿತು. ತಾ.ಪಂ. ಸದಸ್ಯರು, ಸಮಾಜ ಕಲ್ಯಾಣ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್. ಸ್ವಾಗತಿಸಿ, ಉಪತಹಶೀಲ್ದಾರ್ ಶ್ರೀಧರ್ ಕೋಡಿಜಾಲ್ ವಂದಿಸಿದರು. ತಾ. ಕಚೇರಿಯ ನಾಗೇಶ್ ಕಾರ್ಯಕ್ರಮ ನಿರ್ವಹಿಸಿದರು.
ಜೀವನ ಮೌಲ್ಯಅಧ್ಯಕ್ಷತೆ ವಹಿಸಿದ ಪುತ್ತೂರು ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ ಮಾತನಾಡಿ, ಹಿಂದೂ ಧರ್ಮೀಯರಿಗೆ ಜೀವನ ಮೌಲ್ಯಗಳನ್ನು ಬೋಧಿಸಿದ ಮಹಾನ್ ಕಾವ್ಯ ರಾಮಾಯಣವನ್ನು ರಚಿಸುವ ಮೂಲಕ ಮಹರ್ಷಿ ವಾಲ್ಮೀಕಿ ಅವರು ಹಾಕಿಕೊಟ್ಟ ಅಡಿಗಲ್ಲು ನಿರಂತರ ಪಾಲನೆಯಾಗಬೇಕು. ವಾಲ್ಮೀಕಿ ಅವರ ಮಾನವೀಯ ಧರ್ಮದ ಜೀವನದಿಂದ ರಾಮರಾಜ್ಯ ನಿರ್ಮಾಣ ಸಾಧ್ಯ ಎಂದರು.