ಚುನಾವಣಾ ಆಯೋಗವು ಒಂದು ಸಾಂವಿಧಾನಿಕ, ಸ್ವಾಯತ್ತ ಸಂಸ್ಥೆ. 1950ರಲ್ಲಿ ಇದು ಅಸ್ತಿತ್ವಕ್ಕೆ ಬಂತು. ಸಂವಿಧಾನದ 324ನೇ ಕಲಂ ಪ್ರಕಾರ ರೂಪುಗೊಂಡಿರುವ ಈ ಸಂಸ್ಥೆಯು ದೇಶದಲ್ಲಿ ಚುನಾವಣೆ ನಡೆಸುವ, ಚುನಾವಣೆಗಳಿಗೆ ಮಾರ್ಗ ಸೂಚಿಗಳನ್ನು ನೀಡುವ ಹಾಗೂ ಚುನಾವಣಾ ಪ್ರಕ್ರಿಯೆಗಳನ್ನು ನಿಯಂತ್ರಿಸುವ ಪರಮಾಧಿಕಾರವನ್ನು ಹೊಂದಿದೆ. ಲೋಕಸಭೆ ಮಾತ್ರವಲ್ಲದೆ, ರಾಜ್ಯಗಳ ವಿಧಾನಸಭೆಗಳು ಹಾಗೂ ಇನ್ನಿತರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸುವ ಜವಾಬ್ದಾರಿಯನ್ನು ಹೊಂದಿದೆ. ಅಷ್ಟೇ ಅಲ್ಲ, ರಾಷ್ಟ್ರಪತಿ, ಉಪರಾಷ್ಟ್ರಪತಿ ಚುನಾವಣೆಗಳನ್ನೂ ನಡೆಸುವ ಮಹತ್ವದ ಹೊರೆ ಈ ಸಂಸ್ಥೆಯ ಮೇಲಿದೆ.
Advertisement
ಮುಖ್ಯಸ್ಥರು ಯಾರು?ಈ ಸಂಸ್ಥೆಯ ಮುಖ್ಯಸ್ಥರನ್ನು ಮುಖ್ಯ ಚುನಾವಣಾ ಆಯುಕ್ತರೆಂದು ಕರೆಯಲಾಗುತ್ತದೆ ಹಾಗೂ ಇವರು ರಾಷ್ಟ್ರಪತಿಯಿಂದ ನೇಮಕಗೊಳ್ಳುತ್ತಾರೆ. ಇವರ ಅಧಿಕಾರಾವಧಿ ಆರು ವರ್ಷಗಳದ್ದಾಗಿದ್ದಾಗಿರುತ್ತದೆ. ಇವರಿಗೆ ಸಹಾಯಕರಾಗಿ ಇಬ್ಬರು ಆಯುಕ್ತರನ್ನು ನೇಮಿಸಲಾಗುತ್ತದೆ. ಈ ಮೂವರೂ ಸರಿಸಮಾನ ಅಧಿಕಾರ ಹೊಂದಿರುತ್ತಾರೆ. ಸಂಸತ್ತಿನ ಮಹಾಭಿಯೋಗದ ಮೂಲಕ ಚುನಾವಣಾ ಆಯುಕ್ತರನ್ನು ಅಧಿಕಾರದಿಂದ ವಜಾಗೊಳಿಸಬಹುದಾಗಿದೆ. ಮತದಾರರ ಸೇರ್ಪಡೆ: ಪಾರದರ್ಶಕ ಚುನಾವಣೆಗಳನ್ನು ನಡೆಸುವುದರ ಜತೆಗೆ, ಗರಿಷ್ಠ ಮತದಾರರನ್ನು ಸೇರ್ಪಡೆಗೊಳಿಸುವ ಮತ್ತೂಂದು ಮಹತ್ವದ ಕಾರ್ಯ ಚುನಾವಣಾ ಆಯೋಗಕ್ಕಿದೆ.
– ಚುನಾವಣೆಗಳ ದಿನಾಂಕ ಘೋಷಣೆ
– ಚುನಾವಣಾ ಫಲಿತಾಂಶಗಳ ಘೋಷಣೆ
– ಮತಗಟ್ಟೆ, ಮತಗಣನೆ ಕೇಂದ್ರಗಳ ನಿಗದಿ
– ಮತಗಟ್ಟೆಗಳು, ಮತಗಣನೆ ಕೇಂದ್ರಗಳ ಸುತ್ತ ಬಿಗಿ ಭದ್ರತೆ
– ಚುನಾವಣಾ ನೀತಿ ಸಂಹಿತೆ ಅನುಷ್ಠಾನ,ಅವಗಾಹನೆ
– ಮತಯಂತ್ರಗಳ ನಿರ್ವಹಣೆ ಮತ್ತು ಸಂರಕ್ಷಣೆ
– ರಾಷ್ಟ್ರಮಟ್ಟದ, ರಾಜ್ಯಮಟ್ಟದ ಹಾಗೂ ಪ್ರಾಂತೀಯ ಪಕ್ಷಗಳಿಗೆ ಮಾನ್ಯತೆ ನೀಡುವುದು 01ಕೋಟಿ ಚುನಾವಣಾ ಸಿಬ್ಬಂದಿ
90 ಕೋಟಿ ಒಟ್ಟು
ಮತ ದಾ ರ ರು
10ಲಕ್ಷ ಮತ ಕೇಂದ್ರಗಳು