Advertisement

ಸಣ್ಣ ವ್ಯವಹಾರಗಳಿಗೆ ಮೈಕ್ರೋಸಾಫ್ಟ್ ಟೀಮ್ಸ್ ಎಸೆನ್ಷಿಯಲ್ಸ್ ಪರಿಚಯ

11:30 AM Dec 03, 2021 | Team Udayavani |

ಬೆಂಗಳೂರು: ಮೈಕ್ರೋಸಾಫ್ಟ್ ನ ಟೀಮ್ಸ್ ಎಸೆನ್ಷಿಯಲ್ಸ್ ಈಗ ಸಣ್ಣ ವ್ಯಾಪಾರಿಗಳಿಗೂ ಲಭ್ಯವಾಗಲಿದೆ. ಇದೇ ಮೊದಲ ಬಾರಿಗೆ ಮೈಕ್ರೋಸಾಫ್ಟ್ ಸಣ್ಣ ವ್ಯಾಪಾರಿಗಳಿಗಾಗಿ ಮೈಕ್ರೋಸಾಫ್ಟ್ ಟೀಮ್ಸ್ ಎಸೆನ್ಷಿಯಲ್ಸ್ ಅನ್ನು ಬಿಡುಗಡೆ ಮಾಡಿದೆ. ಟೀಮ್ಸ್ ಎಸೆನ್ಷಿಯಲ್ಸ್ ಸಣ್ಣ ವ್ಯವಹಾರಗಳಿಗೆ ವೃತ್ತಿಪರ ಮತ್ತು ಕೈಗೆಟುಕುವ ಮೀಟಿಂಗ್ ಸಲೂಶನ್ಸ್ ಅನ್ನು ನೀಡುತ್ತದೆ. ಪ್ರತಿ ವ್ಯಕ್ತಿಗೆ ಮಾಸಿಕ 100 ರೂಪಾಯಿ ದರದಲ್ಲಿ ಈ ಟೀಮ್ಸ್ ಎಸೆನ್ಷಿಯಲ್ಸ್ ಲಭ್ಯವಿದೆ.

Advertisement

ಈ ಬಗ್ಗೆ ಮಾತನಾಡಿದ ಮೈಕ್ರೋಸಾಫ್ಟ್ ನಲ್ಲಿ ಮಾಡರ್ನ್ ವರ್ಕ್ ನ ಕಾರ್ಪೊರೇಟ್ ಉಪಾಧ್ಯಕ್ಷ ಜರೇದ್ ಸ್ಪಟಾರೋ, “ಕಳೆದ 20 ತಿಂಗಳಿಂದ ಸಣ್ಣ ವ್ಯವಹಾರಗಳು ಕಾರ್ಯನಿರ್ವಹಣೆ ಮಾಡುವುದು ಕಷ್ಟವಾಗಿದೆ ಎಂಬುದನ್ನು ನಾವು ಅರಿತಿದ್ದೇವೆ. ಈ ಹಿನ್ನೆಲೆಯಲ್ಲಿ ಅವರಿಗೆ ಸೂಕ್ತವಾದ ಪರಿಕರಗಳ ಅಗತ್ಯತೆ ಇದೆ. ಹೀಗಾಗಿ ನಾವು ಮೈಕ್ರೋಸಾಫ್ಟ್ ಟೀಮ್ಸ್ ಅನ್ನು ಅವರಿಗೆ ಅನುಕೂಲವಾಗುವ ರೀತಿಯಲ್ಲಿ ವಿನ್ಯಾಸಗೊಳಿಸಿದ್ದೇವೆ. ಅಂದರೆ, ಸಣ್ಣ ವ್ಯವಹಾರಗಳ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಟೀಮ್ಸ್ ಎಸೆನ್ಷಿಯಲ್ಸ್ ಅನ್ನು ನಿರ್ದಿಷ್ಟವಾಗಿ ರೂಪಿಸಲಾಗಿದೆ. ಈ ಹೊಸ ಕೆಲಸದ ಯುಗದಲ್ಲಿ ಅವರು ಟೀಮ್ಸ್ ಎಸೆನ್ಷಿಯಲ್ಸ್ ಅನ್ನು ಬಳಸಿಕೊಂಡು ತಮ್ಮ ವ್ಯವಹಾರಗಳನ್ನು ವೃದ್ಧಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ” ಎಂದರು.

ಒಂದು ಸ್ಥಳದಲ್ಲಿ ಕುಳಿತು ವೃತ್ತಿಪರ ಸಭೆಗಳನ್ನು ನಡೆಸಲು ಈ ಟೀಮ್ಸ್ ಎಸೆನ್ಷಿಯಲ್ಸ್ ಅನುವು ಮಾಡಿಕೊಡುತ್ತದೆ. ಅಲ್ಲದೇ, ಈ ಕೆಳಗಿನ ವೈಶಿಷ್ಟ್ಯತೆಗಳನ್ನು ಹೊಂದಿದೆ:

  • 30 ಗಂಟೆಗಳವರೆಗೆ ಅನಿಯಮಿತವಾದ ಗ್ರೂಪ್ ಮೀಟಿಂಗ್ ಗಳನ್ನು ಆಯೋಜನೆ ಮಾಡಬಹುದು.
  • ಒಂದೇ ಬಾರಿಗೆ 300 ಜನರನ್ನು ಸೇರಿಸಿ ಸಂವಾದ ನಡೆಸಬಹುದು
  • ಪ್ರತಿ ಬಳಕೆದಾರನು 10 ಜಿಬಿ ಕ್ಲೌಡ್ ಸ್ಟೋರೇಜ್ ಮಾಡಬಹುದು.

ಸಣ್ಣ ವ್ಯಾಪಾರಗಳ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಟೀಮ್ಸ್ ನ ಉಚಿತ ಆವೃತ್ತಿಯಲ್ಲಿ ಲಭ್ಯವಿರುವ ಹಾಲಿ ಮತ್ತು ಹೊಸ ಸಾಮರ್ಥ್ಯಗಳನ್ನು ಟೀಮ್ಸ್ ಎಸೆನ್ಷಿಯಲ್ಸ್ ಹೊಂದಿದೆ.

Advertisement

ಸರಳ, ಸುಲಭ ಆಹ್ವಾನಗಳು: ಇದಕ್ಕೆ ಕೇವಲ ಇಮೇಲ್ ವಿಳಾಸವಿದ್ದರೆ ಸಾಕು. ಮೀಟಿಂಗ್ ನಲ್ಲಿ ಪಾಲ್ಗೊಳ್ಳಲು ಬಳಕೆದಾರರು ಸೈನ್ ಅಪ್, ಸೈನ್ ಇನ್ ಅಥವಾ ಟೀಮ್ಸ್ ಅನ್ನು ಇನ್ ಸ್ಟಾಲ್ ಮಾಡುವ ಅಗತ್ಯವಿಲ್ಲ,

ಇದರಲ್ಲಿ ಹೊಸ ಗೂಗಲ್ ಕ್ಯಾಲೆಂಡರ್ ಇಂಟಿಗ್ರೇಶನ್ ಇದ್ದು, ಇದು ಮೈಕ್ರೋಸಾಫ್ಟ್ ಟೀಮ್ಸ್ ನಲ್ಲಿ ಮೀಟಿಂಗ್ ಗಳನ್ನು ನಿಗದಿಪಡಿಸುವ ಕಾರ್ಯವನ್ನು ಸುಲಭಗೊಳಿಸುತ್ತದೆ.

ವೃತ್ತಿಪರ ಮೀಟಿಂಗ್ ಟೂಲ್ಸ್ ಮತ್ತು ಸಾಮರ್ಥ್ಯಗಳು: ಮೀಟಿಂಗ್ ಲಾಬಿಗಳು, ವರ್ಚುವಲ್ ಬ್ಯಾಕ್ ಗ್ರೌಂಡ್ಸ್, ಟುಗೆದರ್ ಮೋಡ್, ಲೈವ್ ಕ್ಲೋಸ್ಡ್ ಕ್ಯಾಪ್ಶನ್ಸ್ ಮತ್ತು ಲೈವ್ ರಿಯಾಕ್ಷನ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಯಾವುದೇ ಕಾರಣಕ್ಕೂ ಕಾಂಟೆಕ್ಸ್ಟ್ ಅಥವಾ ನಿರಂತರತೆಗೆ ಧಕ್ಕೆಯಾಗುವುದಿಲ್ಲ. ಮೈಕ್ರೋಸಾಫ್ಟ್ ಟೀಮ್ಸ್ ನಲ್ಲಿ ಚಾಟ್ಸ್ ಮುಂದುವರಿಯುತ್ತದೆ.

ಗ್ರೂಪ್ ಪ್ರಾಜೆಕ್ಟ್ ಅನ್ನು ತ್ವರಿತವಾಗಿ ಪ್ರಾರಂಭಿಸಿ ಮತ್ತು ಯಾರೊಂದಿಗಾದರೂ ಸಭೆಗಳನ್ನು ಆಯೋಜನೆ ಮಾಡಿ, ತಂಡದ ಸದಸ್ಯರಿಗೆ ಕಾರ್ಯಗಳನ್ನು ನಿಯೋಜನೆ ಮಾಡಿ ಮತ್ತು ಹೊಸ ಸಣ್ಣ ವ್ಯಾಪಾರ ಗುಂಪು ಚಾಟ್ ಟೆಂಪ್ಲೇಟ್ ನೊಂದಿಗೆ ಒಂದೇ ಹಬ್ ನಲ್ಲಿ ತ್ವರಿತವಾಗಿ ಪ್ರತಿಕ್ರಿಯೆಯನ್ನು ಸ್ವೀಕರಿಸಲು ಸಮೀಕ್ಷೆಗಳನ್ನು ರಚಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next