Advertisement

ಉತ್ಕೃಷ್ಟ ತಂತ್ರಜ್ಞಾನದ ಕಂಬಿಗಳ ಪರಿಚಯ

06:14 AM Mar 15, 2019 | Team Udayavani |

ಬೆಂಗಳೂರು: ಉನ್ನತ ದರ್ಜೆಯ ಉಕ್ಕಿನ ಕಂಬಿಗಳಿಗೆ ಹೆಸರು ವಾಸಿಯಾಗಿರುವ ಟರ್ಬೋಸ್ಟೀಲ್ ಕಂಪನಿ ಇದೀಗ ಎಲ್ಪಿಎಸ್‌ (ಕಡಿಮೆ ಫಾಸ್ಫರಸ್‌ ಮತ್ತು ಸಲ್ಫರ್‌)ಬಳಸಲಾದ ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಿದೆ.

Advertisement

ಈ ಎಲ್ಪಿಎಸ್‌ ಕಂಬಿಗಳು ಇತರೆ ಸಾಮಾನ್ಯ ಕಂಬಿಗಳಿಗಿಂತ ಹೆಚ್ಚು ಸದೃಢ ಹಾಗೂ ಯಾಂತ್ರಿಕ ಶ್ರೇಷ್ಠತೆಯನ್ನು ಹೊಂದಿವೆ. ಇದಕ್ಕೆ ಉನ್ನತ ದರ್ಜೆಯ ಕಬ್ಬಿಣದ ಅದಿರಿನ ಜತೆಗೆ ಕಡಿಮೆ ಫಾಸ್ಫರಸ್‌ ಬಳಸಲಾಗಿದೆ. ಇದರಿಂದ ಉತ್ತಮ ಗುಣಮಟ್ಟ ಕಾರ್ಯಕ್ಷಮತೆ ಹೊಂದಿದೆ. ಹೊಸ ಹೊಳಪನ್ನು ಹೊಂದಿರುವ ಉತ್ಪನ್ನವನ್ನು ಇತ್ತೀಚೆಗೆ ನಗರದಲ್ಲಿ ಚಿತ್ರನಟ ರಮೇಶ ಅರವಿಂದ್‌ ಅವರು ಬಿಡುಗಡೆಗೊಳಿಸಿದರು.

ಹೊಸ ಉತ್ಪನ್ನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟರ್ಬೋಸ್ಟೀಲ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್‌ ಚಂದ್ರ ರಾಮಮೂರ್ತಿ, ಈ ಹೊಸ ವಿನ್ಯಾಸದ ನೂತನ ಕಂಬಿಗಳನ್ನು ಶೀಘ್ರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ಈ ಹೊಸ ಮಾದರಿಯ ಕಂಬಿಗಳನ್ನು ಎಲ್.ಆರ್‌.ಎಫ್ ಹಾಗೂ ಎಂಎಸ್‌ಎಸ್‌ ಕನ್ವರ್ಟ್‌ರ್‌ನಂತಹ ಉತ್ಕೃಷ್ಟ ತಂತ್ರಜ್ಞಾನದಲ್ಲಿ ತಯಾರಿಸಲಾಗಿದೆ.

ಈ ಮೂಲಕ ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ಈ ತಂತ್ರಜ್ಞಾನವನ್ನು ಪರಿಚಯಿಸುತ್ತಿರುವುದು ಕಂಪನಿಗೆ ಹೆಮ್ಮೆ ಎನಿಸುತ್ತಿದೆ ಎಂದರು. ಪ್ರಸ್ತುತ ರಾಜ್ಯದಲ್ಲಿ 100 ಮಂದಿ ಡೀಲರ್‌ಗಳಿದ್ದು, ಸುಮಾರು 600 ಮಂದಿಗೆ ನೇರ ಮತ್ತು ಪರೋಕ್ಷವಾಗಿ ಉದ್ಯೋಗ ನೀಡುವ ಗುರಿ ಕಂಪನಿ ಹೊಂದಿದೆ. ಮುಂದಿನ ದಿನಗಳಲ್ಲಿ ಇದರ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸುವ ಆಶಯವನ್ನು ಕಂಪನಿ ಹೊಂದಿದ್ದು, ಈ ಮೂಲಕ ರಾಜ್ಯಾದಾದ್ಯಂತ ಕಂಪನಿಯನ್ನು ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next