Advertisement

ಕೊರೊನಾ ನಿರ್ವಹಣೆಯಲ್ಲಿ ಸಮನ್ವಯತೆ

02:43 PM May 27, 2021 | Team Udayavani |

ಬೆಂಗಳೂರು: ದೇಶ ಹಾಗೂ ರಾಜ್ಯವನ್ನು ಕಾಡುತ್ತಿರುವಕೊರೊನಾ ನಿರ್ವಹಣೆಯಲ್ಲಿ ಕೇಂದ್ರ, ರಾಜ್ಯಸರ್ಕಾರಗಳ ಕಾರ್ಯವೈಖರಿ, ಪಕ್ಷದಲ್ಲಿ ಆಂತರಿಕಬೆಳವಣಿಗೆಗಳು, ಟೂಲ್‌ ಕಿಟ್‌ ಪ್ರಕರಣ ಸೇರಿದಂತೆಪ್ರಸಕ್ತ ವಿದ್ಯಮಾನಗಳ ಕುರಿತು ಬಿಜೆಪಿ ರಾಷ್ಟ್ರೀಯಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ “ಉದಯವಾಣಿ’ಯೊಂದಿಗೆ ಮನ ಬಿಚ್ಚಿ ಮಾತನಾಡಿದ್ದಾರೆ.„

Advertisement

ಕೊರೊನ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದಕಾರ್ಯವೈಖರಿಯ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ಕಳೆದ 15 ದಿನಗಳಲ್ಲಿ ಸಮನ್ವಯತೆಕಾಣಿಸುತ್ತಿದೆ. ನಿಜವಾದ ಸಮಸ್ಯೆಗುರುತಿಸಿ ಪರಿಹಾರ ಒದಗಿಸುವ ಕೆಲಸಮಾಡುತ್ತಿದ್ದಾರೆ. ಆರಂಭದಲ್ಲಿ ನಮಗೆಸ್ವಲ್ಪ ಗೊಂದಲ ಆಯ್ತು. ಅದಕ್ಕೆ ಕಾರಣವೇಗವಾಗಿ ಕೊರೊನಾ ಬಂದಿದ್ದು, ಬೆಡ್‌, ರೆಮ್‌ಡೆಸಿವಿಯರ್‌, ಆಕ್ಸಿಜನ್‌ ಸಿಗದಿರುವುದು. ಆಕ್ಸಿಜನ್‌ಸಮಸ್ಯೆ ಆಗುತ್ತದೆ ಎಂದು ಯಾರೂ ಆಲೋಚನೆಮಾಡಿರಲಿಲ್ಲ. ಈಗ ಬದಲಾವಣೆ ಕಣ್ಣಿಗೆ ಕಾಣಿಸುತ್ತಿದೆ.

ಕೇಂದ್ರ, ರಾಜ್ಯ ಸರ್ಕಾರಗಳು ಕೊರೊನಾಗಿಂತ ಚುನಾವಣೆಗೆ ಆದ್ಯತೆ ನೀಡಿದ್ದವು ಎಂಬ ಆರೋಪ ಕೇಳಿ ಬರುತ್ತಿದೆ?

ಮುಂದಾಲೋಚನೆ ಇಲ್ಲದೆ ಇದ್ದಿದ್ದರೆ,ಒಂದು ವರ್ಷದಲ್ಲಿ ಲಸಿಕೆ ಉತ್ಪಾದನೆಮಾಡಲು ಸಾಧ್ಯವಾಗುತ್ತಿರಲಿಲ್ಲ. ಸ್ವತಃ ಪ್ರಧಾನಿಲ್ಯಾಬ್‌ಗಳಿಗೆ ಹೋಗಿ ವಿಜ್ಞಾನಿಗಳಿಗೆ ಉತ್ತೇಜನ ನೀಡಿದರು. ಆ ಸಮಯದಲ್ಲಿ ಮೋದಿ ವಿರೋಧಿಗಳುವ್ಯಾಕ್ಸಿನೇಷನ್‌ ವಿರುದ್ಧ ಏನು ಮಾತನಾಡಿದರು ಎನ್ನುವುದು ಅಂಗೈ ಹುಣ್ಣಿನಷ್ಟೇ ಸ್ಪಷÌ. ಆತ್ಮವಿಶ್ವಾಸಇರುವ ಪ್ರಧಾನಿ ನರೇಂದ್ರ ಮೋದಿ ಇಲ್ಲದಿದ್ದರೆ, ಸಾವಿನಸಂಖ್ಯೆ ಇನ್ನೂ ಎರಡು ಪಟ್ಟು ಹೆಚ್ಚಾಗುತ್ತಿತ್ತು.

Advertisement

ಚಾಮರಾಜನಗರ ದುರಂತಕ್ಕೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಬೇಕು ಅಂತಹೇಳಿದ್ದಿರಿ,ಆದರೆ, ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ ?

ದುರಂತದ ಬಗ್ಗೆ ಕೋರ್ಟ್‌ ರಚಿಸಿದ್ದ ಸಮಿತಿ ಕೋರ್ಟ್‌ಗೆವರದಿ ನೀಡಿದೆ. ಕೋರ್ಟ್‌ ಏನು ಹೇಳುತ್ತದೆಯೋಅದನ್ನು ನೋಡಬೇಕು. ಕೋರ್ಟ್‌ ಹೇಳಿದ ಮೇಲೆಯಾರನ್ನೂ ರಕ್ಷಿಸಲಾಗುವುದಿಲ್ಲ. ಸರ್ಕಾರ ಸಂದರ್ಭಬಂದಾಗ ತನ್ನ ಇಚ್ಛಾಶಕ್ತಿಯನ್ನು ಪ್ರಕಟಗೊಳಿಸಬೇಕು.

ಡಾ.ಅಶ್ವತ್ಥನಾರಾಯಣ,ಡಾ. ಸುಧಾಕರ್‌ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಗಿದೆಯಲ್ಲಾ ?

ಇಬ್ಬರೂ ವೈದ್ಯರಿದ್ದಾರೆ,ಬುದ್ದಿವಂತರಿದ್ದಾರೆ. ಇಬ್ಬರನಡುವಿನ ಭಿನ್ನಾಭಿಪ್ರಾಯಗಮನಿಸಿದ್ದೇನೆ. ಪರಸ್ಪರಸಮಾಲೋಚಿಸಿ ಹೇಳಿಕೆ ನೀಡಿದರೆ, ಅನಗತ್ಯ ಗೊಂದಲಸೃಷ್ಟಿಯಾಗುವುದು ತಪ್ಪುತ್ತದೆ.

ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next