Advertisement

ಕೋಚ್‌ ಹುದ್ದೆಗೆ 6 ಮಂದಿ ಸಂದರ್ಶನ

10:53 PM Aug 12, 2019 | Sriram |

ಮುಂಬಯಿ: ಟೀಮ್‌ ಇಂಡಿಯಾ ಕ್ರಿಕೆಟ್‌ ಕೋಚ್‌ ಹುದ್ದೆಯ ರೇಸ್‌ನಲ್ಲಿ ಅಂತಿಮವಾಗಿ 6 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ. ಶುಕ್ರವಾರ ಕಪಿಲ್‌ದೇವ್‌ ನೇತೃತ್ವದ ಸಮಿತಿ ಇವರ ಸಂದರ್ಶನ ನಡೆಸಲಿದೆ.

Advertisement

ಹಾಲಿ ಕೋಚ್‌ ರವಿ ಶಾಸ್ತ್ರಿ ಸಹಿತ ಅಂತಿಮ ಸುತ್ತಿಗೆ ಆಯ್ಕೆಯಾದ ಉಳಿ ದವರೆಂದರೆ ಮೈಕ್‌ ಹೆಸನ್‌, ಟಾಮ್‌ ಮೂಡಿ, ರಾಬಿನ್‌ ಸಿಂಗ್‌, ಲಾಲ್‌ಚಂದ್‌ ರಜಪೂತ್‌, ಫಿಲ್‌ ಸಿಮನ್ಸ್‌.

ವೀಡಿಯೋ ಕಾಲ್‌
“ಕೋಚ್‌ ಹುದ್ದೆಯ ಅಂತಿಮ ಯಾದಿಯಲ್ಲಿ 6 ಅಭ್ಯರ್ಥಿಗಳಿದ್ದಾರೆ. ಶುಕ್ರವಾರ ಇವರನ್ನು ಸಂದರ್ಶಿಸ ಲಾಗುವುದು. ಆದರೆ ಕೆಲವು ವಿದೇಶಿ ಅಭ್ಯರ್ಥಿಗಳಿಗೆ ಈ ಸಂದರ್ಶನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದು. ಇವರನ್ನು ವೀಡಿಯೋ ಕಾಲ್‌ ಮೂಲಕ ಸಂದರ್ಶಿಸಲಾಗುವುದು’ ಎಂದು ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿಂಡೀಸ್‌ನಲ್ಲಿರುವ ರವಿ ಶಾಸ್ತ್ರಿ ಅವರನ್ನು ಸ್ಕೈಪ್‌ ಮೂಲಕ ಸಂದರ್ಶಿ ಸಲಾಗುವುದು. ಈ ಸಂದರ್ಭದಲ್ಲಿ ಟೀಮ್‌ ಇಂಡಿಯಾ ನಾಯಕ ಕೊಹ್ಲಿ ಅವರ ಯಾವುದೇ ಸಲಹೆಗಳನ್ನು ಗಣನೆಗೆ ತೆಗೆದುಕೊಳ್ಳು ವುದಿಲ್ಲ ಎಂದೂ ತಿಳಿದು ಬಂದಿದೆ.ಸಂದರ್ಶಕರಿಗೆ ಈಗಾಗಲೇ ಇ-ಮೇಲ್‌ ಮೂಲಕ ತಿಳಿಸಲಾಗಿದೆ. ಇವರೆಲ್ಲ ಆ. 15ರ ಒಳಗೆ ಮುಂಬಯಿ ತಲುಪಬೇಕಿದೆ. ಕೋಚ್‌ ಹುದ್ದೆಗೆ 2 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ.

ಸಿಎಸಿ ಸಮಿತಿಗೆ ಕಪಿಲ್‌ದೇವ್‌ ಅಧ್ಯಕ್ಷರಾಗಿದ್ದಾರೆ. ಉಳಿದಿಬ್ಬರು ಸದಸ್ಯ ರೆಂದರೆ ಅಂಶು ಮಾನ್‌ ಗಾಯಕ್ವಾಡ್‌ ಮತ್ತು ಶಾಂತಾ ರಂಗಸ್ವಾಮಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next