Advertisement
ರವೀಂದ್ರ ಶೆಟ್ಟಿ ಉಳಿದೊಟ್ಟು ವಿವಿಧ ಸಂಘ-ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿರುವವರು. ಯಡಿಯೂರಪ್ಪ ನೇತೃತ್ವದಕೆಜೆಪಿ ರಚನೆಯಾದಾಗ ಪ್ರಥಮ ಬಾರಿಗೆ ರಾಜಕೀಯ ಸೇರಿದ ಇವರು ಕೆಜೆಪಿಯ ದ.ಕ. ಜಿಲ್ಲೆಯ ಅಧ್ಯಕ್ಷರಾಗಿ ಪಕ್ಷವನ್ನು ಸಂಘಟಿಸಲು ಶ್ರಮಿಸಿದ್ದವರು. ಈಗ ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸದಸ್ಯ.
ಕಾರಣಾಂತರಗಳಿಂದ ಉದಯವಾದ ಪಕ್ಷ, ಸಂಘಟನೆಯ ಕೊರತೆ ಇತ್ತು. ಅಸ್ತಿತ್ವಕ್ಕಾಗಿ ಚುನಾವಣೆ ಎದುರಿಸಿದ್ದೆವು, ಸೋಲು ನಿರೀಕ್ಷಿತವಾಗಿತ್ತು. ಈ ಬಾರಿ ನಿಮ್ಮ ರಾಜಕೀಯ ಲೆಕ್ಕಾಚಾರ ಹೇಗೆ ?
ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿಯಲ್ಲಿ ಗುರುತಿಸಿ ಕೊಂಡಿದ್ದೇವೆ. ಯಡಿಯೂರಪ್ಪ ಆಡಳಿತದಲ್ಲಿದ್ದಾಗ ನೀಡಿದ ಜನಪರ ಯೋಜನೆಗಳನ್ನು ಜನರು ಇಂದಿಗೂ ಮರೆತಿಲ್ಲ. ಅವರು ಮುಖ್ಯಮಂತ್ರಿಯಾಗುವುದರಲ್ಲಿ ಸಂದೇಹವಿಲ್ಲ.
Related Articles
ಅಲ್ಲ. ಪಕ್ಷದ ಹಿರಿಯರ, ನಾಯಕರ ತೀರ್ಮಾನಕ್ಕೆ ಬದ್ಧ. ಕ್ಷೇತ್ರದಲ್ಲಿ ಯಾರನ್ನೂ ಅಭ್ಯರ್ಥಿಯಾಗಿ ನಿಲ್ಲಿಸಿದರೂ
ನಾಯಕರು, ಕಾರ್ಯಕರ್ತರೊಂದಿಗೆ ಪಕ್ಷವನ್ನು ಗೆಲ್ಲಿಸುವ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ.
Advertisement
ಈ ಬಾರಿಯ ಫಲಿತಾಂಶ ?ಕಾರ್ಯಕರ್ತರು ಉತ್ಸಾಹದಿಂದ ಸಂಘಟನೆಯಲ್ಲಿ ತೊಡಗಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ
ಅವರ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ರಾಜ್ಯದಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ನಡೆಸಿದ ಜನಪರ ಯೋಜನೆಗಳು, ಬಿಜೆಪಿ ರಾಷ್ಟ್ರಾಧ್ಯಕ್ಷರ ತಂತ್ರಗಾರಿಕೆ ನಮಗೆ ಶ್ರೀರಕ್ಷೆ. ನಮ್ಮ ನಾಯಕರ ಕನಸಿನಂತೆ 150ಕ್ಕಿಂತಲೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಆಡಳಿತಕ್ಕೆ ಬರಲು ಪೂರಕ ವಾತಾವರಣ ಇದೆ. ಜಿಲ್ಲೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಅವರ ಅಭಿವೃದ್ಧಿ ಪರ ಕಾರ್ಯಗಳು ಜನಮೆಚ್ಚುವಂತಿವೆ. ಚುನಾವಣಾ ಪ್ರಚಾರ ಯಾವ ರೀತಿ ನಡೆಯುತ್ತಿದೆ ?
ಕ್ಷೇತ್ರವನ್ನು ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರಗಳಾಗಿ ವಿಂಗಡಿಸಿ ಉಸ್ತುವಾರಿಗೆ ಪ್ರಮುಖರನ್ನು ನಿಯೋಜಿಸಲಾಗಿದೆ. ಪೇಜ್ ಪ್ರಮುಖರನ್ನು ನೇಮಿಸಿ ನಿರಂತರ ಮನೆ ಸಂಪರ್ಕ ನಡೆಸಲಾಗುತ್ತಿದೆ. ಸಂಘ ಪರಿವಾರ ಅವಿರತವಾಗಿ ಶ್ರಮಿಸುತ್ತಿದ್ದು, ಪಕ್ಷದ ನಾಯಕರು ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಕಾರ್ಯಕರ್ತರೇ ಪಕ್ಷದ ಜೀವಾಳವಾಗಿದ್ದಾರೆ. ಕೇಂದ್ರದ ಸಾಧನೆ ಮತ್ತು ರಾಜ್ಯದ ದುರಾಡಳಿತದ ಬಗ್ಗೆ ಕಾರ್ಯಕರ್ತರು ಮನೆಮನೆಗೆ ತೆರಳಿ ಜನರಿಗೆ ಮನವರಿಕೆ ಮಾಡಲಿದ್ದಾರೆ. ವಸಂತ ಕೊಣಾಜೆ