Advertisement

ಸಂದರ್ಶನ:ಕಸ್ತೂರಿಪಂಜ,ಬಿಜೆಪಿ ಚುನಾವಣಾ ಬೆಳ್ತಂಗಡಿ ತಾಲೂಕು ಉಸ್ತುವಾರಿ

04:01 PM Mar 14, 2018 | |

ಬೆಳ್ತಂಗಡಿ ತಾಲೂಕಿನಲ್ಲಿ ಅಭ್ಯರ್ಥಿಗಳ ಘೋಷಣೆ ಆಗಿಲ್ಲ. ಇದು ಸಂಘಟನೆಗೆ ಹಿನ್ನಡೆ ಆಗುವುದಿಲ್ಲವೇ?
ಖಂಡಿತ ಇಲ್ಲ, ಪಕ್ಷದಲ್ಲಿ ಚುನಾವಣೆಗೂ ಒಂದು ತಿಂಗಳ ಮೊದಲು ಅಭ್ಯರ್ಥಿ ಘೋಷಣೆ ಮಾಡಲಾಗುತ್ತದೆ.

Advertisement

ತಾಲೂಕಿನಲ್ಲಿ ಇಬ್ಬರು ಯುವ ಮುಖಂಡರು ಹಾಗೂ ಇಬ್ಬರು ಅನುಭವಿಗಳ ನಡುವೆ ಪೈಪೋಟಿ ಇದೆ. ಯಾವ ರೀತಿ ಪರಿಸ್ಥಿತಿ ನಿಭಾಯಿಸುತ್ತೀರಿ?
ಅಭ್ಯರ್ಥಿ ಅಯ್ಕೆಯನ್ನು ಪಕ್ಷದ ವರಿಷ್ಠರು ನಿರ್ಧರಿಸುವುದು; ಆದ್ದರಿಂದ ಯಾವುದೇ ಗೊಂದಲಕ್ಕೆ ಆಸ್ಪದ ಇರುವುದಿಲ್ಲ.

ತಾಲೂಕಿನಲ್ಲಿ ಈಗಾಗಲೇ ಕಾಂಗ್ರೆಸ್‌ ತನ್ನ ಅಭ್ಯರ್ಥಿ ಘೋಷಣೆ ಮಾಡಿದೆ. ಏನು ಪ್ರತಿತಂತ್ರ ರೂಪಿಸುತ್ತಿದ್ದೀರಿ?
ಗೆಲ್ಲಲು ಬೇಕಾದ ಎಲ್ಲ ಪ್ರಯತ್ನ ನಡೆಸಲಾಗುತ್ತಿದೆ. ಜಿಲ್ಲೆಯ ಎಲ್ಲ 8 ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ. ವಿಶೇಷವಾಗಿ ಹೆಚ್ಚಿನ ಮತಗಳಿಂದ ಜಯ ಗಳಿಸಲಿದ್ದಾರೆ. ಬೂತ್‌ ಮಟ್ಟದಲ್ಲಿ ಪಕ್ಷ ಸಂಘಟಿಸುವ ಕಾರ್ಯ ನಡೆಸಲಾಗುತ್ತಿದೆ. ಅಭಿವೃದ್ಧಿ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ. ಮುಖಂಡರು ತಿಳಿಸಿದ ತಂತ್ರಗಳನ್ನು ಬೂತ್‌ ಮಟ್ಟದಲ್ಲಿ ಅನುಷ್ಠಾನ ಮಾಡಲು ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ.

ಬಿಜೆಪಿಯ ಯಾವ ವಿಚಾರಗಳು ತಾಲೂಕಿನಲ್ಲಿ ಮತ ಬೇಟೆಗೆ ಸಹಕಾರಿಯಾಗಲಿವೆ ?
ವಿಶೇಷವಾಗಿ ಪ್ರಧಾನಿ ಮೋದಿ ನೇತೃತ್ವದ ಕೆಲಸ ಕಾರ್ಯಗಳು ಜನರನ್ನು ಬಿಜೆಪಿಗೆ ಮತ ಹಾಕುವಂತೆ ಮಾಡಲು ಪ್ರೇರೇಪಿಸಲಿವೆ. ಜತೆಗೆ ರಾಜ್ಯದಲ್ಲೂ ಬಿಜೆಪಿ ಸರಕಾರ ಮಾಡಿರುವ ಸಾಧನೆಗಳನ್ನು ಜನರು ಪರಿಗಣಿಸಿ ಮತ ನೀಡಲಿದ್ದಾರೆ. ಬಿಜೆಪಿ ಸರಕಾರವಿದ್ದ ಸಂದರ್ಭ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದು, ಮುಂದೆ ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದರೆ ಹೆಚ್ಚಿನ ಅಭಿವೃದ್ಧಿ ಕಾರ್ಯ ನಡೆಸಲಾಗುತ್ತದೆ. ಈಗ ರಾಜ್ಯದಲ್ಲಿ ಗಲಭೆಗಳು ಹೆಚ್ಚಾಗಿವೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ಅಧಿಕಾರಿಗಳಿಂದ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅಗತ್ಯವಿಲ್ಲದವರಿಗೂ ರೇಷನ್‌ ಕಾರ್ಡ್‌ ಬೇಕಾಬಿಟ್ಟಿ ವಿತರಿಸಲಾಗುತ್ತಿದೆ. ಆದರೆ ಅರ್ಜಿ ಸಲ್ಲಿಸಿ ಕಾಯುತ್ತಿರುವ ಅರ್ಹರಿಗೆ ಮಾತ್ರ ಸಿಗುತ್ತಿಲ್ಲ.

 ತಾಲೂಕಿನಲ್ಲಿ ಪ್ರಚಾರ ಕಾರ್ಯ ಎಂದಿನಿಂದ ಆರಂಭ?
ಅಭ್ಯರ್ಥಿ ಘೋಷಣೆ ನಡೆದ ಕೂಡಲೇ ಅಧಿಕೃತ ಪ್ರಚಾರ ಕಾರ್ಯ ಆರಂಭಿಸಲಿದ್ದೇವೆ. ಕೇಂದ್ರ ಸಾಧನೆಗಳನ್ನು ಜನರಿಗೆ ತಲುಪಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಮುಂದೆಯೂ ಕಾರ್ಯದಲ್ಲಿ ಪ್ರಗತಿ ಸಾಧಿಸಲಿದ್ದೇವೆ.

Advertisement

„ ಹರ್ಷಿತ್‌ ಪಿಂಡಿವನ 

Advertisement

Udayavani is now on Telegram. Click here to join our channel and stay updated with the latest news.

Next