Advertisement
ಕಳೆದ ಬಾರಿ ನಿಮ್ಮ ಸೋಲಿಗೆ ಕಾರಣವೇನು?ನಮ್ಮ ಪಕ್ಷದ ಸಂಘಟನೆ ಅಷ್ಟೊಂದು ಬಲವಾಗಿಲ್ಲದ ಕಾರಣ ಜಯ ಸಾಧ್ಯವಾಗಿಲ್ಲ. ಆದರೆ ದುಡಿಯುವ ಜನ ನಮ್ಮ ಜತೆಗೆ ಇದ್ದಾರೆ ಎಂಬ ವಿಶ್ವಾಸವಿತ್ತು, ಆ ವಿಶ್ವಾಸದಲ್ಲಿ ಸ್ಪರ್ಧೆ ಎದುರಿಸಿದ್ದೆ. ನಿರೀಕ್ಷೆಗೂ ಮೀರಿದ ಮತ ಲಭಿಸಿತ್ತು.
ಪಕ್ಷದಲ್ಲಿ ಭಿನ್ನಮತ ಇದೆ. ಆದರೆ ಕೋಮುವಾದಿ ಶಕ್ತಿಗಳು ತಾಲೂಕಿನಲ್ಲಿ ಗೆಲ್ಲಲೇಬಾರದು ಎಂಬ ಉದ್ದೇಶವಿದೆ. ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಯಾರು ಬೇಕಾದರೂ ಗೆಲ್ಲಲಿ ಎಂಬ ನಿಲುವು ತಾಳಲಾಗಿತ್ತು. ಈ ಬಾರಿ ಕೋಮುವಾದಿ ಶಕ್ತಿಗಳನ್ನು ದೂರವಿಡಲು ಪ್ರಯತ್ನ ನಡೆಸಲಾಗುತ್ತದೆ. ಈ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತೀರಾ ?
ಬೆಳ್ತಂಗಡಿ ಕ್ಷೇತ್ರದಿಂದ ಸ್ಪರ್ಧಿಸುವ ಯೋಚನೆ ಇಲ್ಲ. ಪಕ್ಷದೊಳಗಿನ ಭಿನ್ನಾಭಿಪ್ರಾಯದಿಂದ ಸ್ಪರ್ಧಿಸುವ ಸ್ಫೂರ್ತಿಗೆ ಅಡ್ಡಿಯಾಗಿದೆ. ಜತೆಗೆ ನಮ್ಮ ಸ್ಪರ್ಧೆಯಿಂದ ಇತರ ಕೋಮುವಾದಿ ಪಕ್ಷಗಳಿಗೆ ಲಾಭವಾಗುತ್ತದೆ. ಆದ್ದರಿಂದ ಎಚ್ಚರಿಕೆಯ ಹೆಜ್ಜೆಯನ್ನು ಇಡಲಾಗುವುದು.
Related Articles
ಎಪ್ರಿಲ್ 10ರಂದು ಬೆಂಗಳೂರಿನಿಂದ ಆಗಮಿಸಲಿರುವ ಪಕ್ಷದ ಮುಖಂಡರ ಜತೆ ಚರ್ಚೆ ನಡೆಸಿ ಮುಂದಿನ ನಿರ್ಧಾರ ಪ್ರಕಟಿಸಲಿದ್ದೇವೆ. ಒಟ್ಟಾರೆ ಕೋಮುವಾದಿಗಳನ್ನು ದೂರವಿಡಲು ಪ್ರಯತ್ನಿಸಲಾಗುವುದು.
Advertisement
ಮುಂದಿನ ರಾಜಕೀಯ ನಡೆ ಏನು?ನಾವು ನೈಜ ಕಮ್ಯೂನಿಸ್ಟರಾಗಿಯೇ ಮುಂದುವರಿಯಲಿ ದ್ದೇವೆ. ಬೆಳ್ತಂಗಡಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸಮಬಲದಲ್ಲಿವೆ. ನಮ್ಮ ಮತಗಳು ಬಿಜೆಪಿಗಂತೂ ಹೋಗುವುದಿಲ್ಲ. ಯಾರಿಗೆ ಬೆಂಬಲ ಎನ್ನುವುದನ್ನು ಎಪ್ರಿಲ್ 10ರ ಬಳಿಕವೇ ತೀರ್ಮಾನಿಸಲಿದ್ದೇವೆ. ಬಹಿರಂಗ ಬೆಂಬಲವೇ ಅಥವಾ ಮತ ನೀಡುವುದೇ ಎಂಬ ಬಗ್ಗೆ ತೀರ್ಮಾನಿಸಲಾಗುವುದು. ನಿಮ್ಮ ಪಕ್ಷ ಸಂಘಟನೆಯಲ್ಲಿ ಹಿನ್ನಡೆ ಏಕಾಗಿದೆ?
ಜಿಲ್ಲೆಯಲ್ಲಿ ಚಳವಳಿಯ ಕೊರತೆಯಿಂದ ಹಿನ್ನಡೆಯನ್ನು ಅನುಭವಿಸುವಂತಾಗಿದೆ. ಕೋಮುವಾದಿ ಶಕ್ತಿಗಳ ಬೆಳವಣಿಗೆಯಿಂದ ಜಿಲ್ಲೆಗೆ ಅಪಾಯವಿದೆ. ಆದ್ದರಿಂದ ಕೋಮುವಾದಿ ಶಕ್ತಿಗಳನ್ನು ಸೋಲಿಸುವುದೇ ಮುಖ್ಯ ಗುರಿ. ಹರ್ಷಿತ್ ಪಿಂಡಿವನ