Advertisement

ಅಂತಾರಾಜ್ಯ ಡ್ರಗ್ಸ್‌ ಪೆಡ್ಲರ್‌ ಗಳ ಬಂಧನ

02:19 PM Aug 10, 2021 | Team Udayavani |

ಬೆಂಗಳೂರು: ರಾಜಸ್ಥಾನದಿಂದ ಬೆಂಗಳೂರಿಗೆ ಗಾಂಜಾ, ಎಂಡಿಎಂಎ ಸೇರಿ ವಿವಿಧ ಮಾದರಿಯ ಡ್ರಗ್ಸ್‌ಗಳನ್ನು ತಂದು ನಗರದಲ್ಲಿ ವಿದ್ಯಾರ್ಥಿಗಳು,ಟೆಕ್ಕಿಗಳಿಗೆ ಮಾರಾಟ ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಪೆಡ್ಲರ್‌ ಗಳನ್ನು ಪಶ್ಚಿಮ ವಿಭಾಗದ ಸಿ.ಟಿ.ಮಾರು
ಕಟ್ಟೆ ಪೊಲೀಸರು ಬಂಧಿಸಿದ್ದಾರೆ.

Advertisement

ರಾಜಸ್ಥಾನ ಮೂಲದ ಪಪ್ಪುರಾಮ್‌ ಅಲಿಯಾಸ್‌ ಪಪ್ಪು (20), ಚುನ್ನಿಲಾಲ್‌ ಅಲಿಯಾಸ್‌ ಸುನೀಲ್‌ (20) ಬಂಧಿತರು. ಇಬ್ಬರು ಅತ್ತಿಬೆಲೆಯಲ್ಲಿ ವಾಸವಾಗಿದ್ದರು. ಆರೋಪಿಗಳಿಂದ ಎರಡು ಕೋಟಿ ರೂ. ಮೌಲ್ಯದ ಒಂದುಕೆ.ಜಿ.820 ಗ್ರಾಂ ಬ್ರೌನ್‌ ಶುಗರ್‌, 859 ಗ್ರಾಂ ಎಂಡಿಎಂಎ, ಒಂದು ಕೆ.ಜಿ ಮಿಕ್ಸಿಂಗ್‌ ಪೌಡರ್‌, 1.700 ಕೆಜಿ ಗಾಂಜಾ, ಕುಕ್ಕಾ ಸೇದುವ ಸಾಧನ, ಡಿಜಿಟಲ್‌ ತೂಕದ ಯಂತ್ರ, ಕೃತ್ಯಕ್ಕೆ ಬಳಸಿದ್ದ ಕಾರು, ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್‌ ಎಂ.ಪಾಟೀಲ್‌ ತಿಳಿಸಿದರು.

ಪಪ್ಪುರಾಮ್‌ ಬಿಎ ವ್ಯಾಸಂಗ ಮಾಡಿದ್ದು, ಅರ್ಧಕ್ಕೆ ವಿದ್ಯಾಭ್ಯಾಸ ಮೊಟಕು ಗೊಳಿಸಿದ್ದಾನೆ. ಆರೋಪಿಗಳು ರಾಜಸ್ಥಾನದಿಂದ ರೈಲಿನಲ್ಲಿ ಬೆಂಗಳೂರಿಗೆ ಡ್ರಗ್ಸ್‌ ಸರಬರಾಜು ಮಾಡುತ್ತಿದ್ದರು ತಮ್ಮ ಪರಿಚಿತ ಗ್ರಾಹಕರಿಗೆ ಮಾತ್ರ ಮಾರಾಟ ಮಾಡುತ್ತಿದ್ದರು. ಪೊಲೀಸರಿಗೆ ಸುಳಿವು ಸಿಗಬಾರದು ಎಂಬ ಕಾರಣದಿಂದ ಹೊಸಬರಿಗೆ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿರಲಿಲ್ಲ. ಐಟಿ-ಬಿಟಿ ಉದ್ಯೋಗಿಗಳು,ಕಾಲೇಜು
ವಿದ್ಯಾರ್ಥಿಗಳೇಅವರ ಗ್ರಾಹಕ ರಾಗಿದ್ದಾರೆ.


ಕೆಲ ತಿಂಗಳಿನಿಂದ ಆರೋಪಿಗಳಿಗಾಗಿ ಸಿ.ಟಿ. ಮಾರುಕಟ್ಟೆ ಪೊಲೀಸರು ಶೋಧ ನಡೆಸುತ್ತಿದ್ದರು. ಆರೋಪಿಗಳಿಬ್ಬರು ಗೋಡೌನ್‌ ಸ್ಟ್ರೀಟ್‌ನಲ್ಲಿ ಭಾನುವಾರ ಸಂಜೆ 5.30ರ ಸುಮಾರಿಗೆ ಮಾದಕ ವಸ್ತು ಮಾರಾಟ ಮಾಡುತ್ತಿರುವ ಮಾಹಿತಿ ಮೇರೆಗೆ ಇನ್ಸ್‌ ಪೆಕ್ಟರ್‌ ಬಿ.ಜಿ.ಕುಮಾರಸ್ವಾಮಿ ನೇತೃತ್ವದ ತಂಡ ದಾಳಿ ನಡೆಸಿ ಬಂಧಿಸಿದೆ ಎಂದರು.

ಆರೋಪಿ ಪಪ್ಪುರಾಮ್‌ನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಆತನ ಮನೆಯಲ್ಲಿ ಮಾದಕ ವಸ್ತುಗಳು ಸಂಗ್ರಹಿಸಿರುವ ಮಾಹಿತಿ ಸಿಕ್ಕಿದೆ. ಅವನ್ನು ಜಪ್ತಿ ಮಾಡಿದ್ದಾರೆ.

ಈ ಹಿಂದೆಯೂ ಬಂಧನ: ನಾಲ್ಕು ವರ್ಷಗಳಿಂದ ಆರೋಪಿ ದಂಧೆಯಲ್ಲಿ ತೊಡಗಿದ್ದು, ಚುನ್ನಿಲಾಲ್‌ನನ್ನು ತನ್ನ ಸಹಾಯಕನಾಗಿ ಇಟ್ಟುಕೊಂಡಿದ್ದ. ಒಂದು ವರ್ಷದ ಹಿಂದೆ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುವಾಗ ಹನುಮಂತ ನಗರ ಠಾಣೆ
ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ. ಪೊಲೀಸರಿಗೆ ಸಿಗಬಾರದೆಂಬ ಕಾರಣಕ್ಕೆ ನಗರದ ಹೊರ ವಲಯದ ಚಂದಾಪುರ, ಆನೇಕಲ್‌ ಭಾಗದಲ್ಲಿ ಮನೆ ಮಾಡುತ್ತಿದ್ದ. ಪ್ರತಿ ಮೂರು ತಿಂಗಳಿಗೊಮ್ಮೆ ಮನೆ ಹಾಗೂ ಸಿಮ್‌ ಕಾರ್ಡ್‌ ಬದಲಾವಣೆ ಮಾಡುತ್ತಿದ್ದ. ಮಾದಕ ವಸ್ತುವನ್ನು ಸಂಗ್ರಹಿಸಿ ಇಡಲು ‌ ಒಂದು ಸಣ್ಣ ರೂಮ್‌ ಕೂಡ ಮಾಡಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

Advertisement

ಇದನ್ನೂ ಓದಿ:ಪೆಗಾಸಸ್ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ, ಶಿಸ್ತಿನಿಂದ ವರ್ತಿಸಿ : ಸುಪ್ರೀಂ ಸೂಚನೆ

ಮಾರಕಾಸ್ತ್ರಗಳಿಂದ ಕೊಚ್ಚಿ ಗಾರೆ ಮೇಸ್ತ್ರಿ ಕೊಲೆ
ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಎಲೆಕ್ಟ್ರಾನಿಕ್‌ ಸಿಟಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಮಿಳುನಾಡಿನ ತಿರುನಾಕರನ್‌(32) ಕೊಲೆಯಾಗಿರುವ ಗಾರೆ ಕಾರ್ಮಿಕ.ವಿಪ್ಪಸಂದ್ರದಲ್ಲಿ ನವಿಬ್‌ಗಯಾರ್‌ ಶಾಲೆ ಹಿಂಭಾಗ ನಿರ್ಮಾಣ ಹಂತದ ಕಟ್ಟಡದಲ್ಲಿ ಕಾಮಗಾರಿ ನಡೆಯುತ್ತಿದ್ದು, ಕಾರ್ಮಿಕರು
ಉಳಿದುಕೊಳ್ಳಲು ಇದೇ ಸ್ಥಳದಲ್ಲಿ ಶೆಡ್‌ಗಳನ್ನು ನಿರ್ಮಿಸಲಾಗಿದ್ದು, ಮೇಸ್ತ್ರಿಯಾಗಿದ್ದ ತಿರುನಾಕರನ್‌ ಸಹ ಅಲ್ಲೆ ವಾಸಿಸುತ್ತಿದ್ದರು ಭಾನುವಾರ ರಾತ್ರಿ ಶೆಡ್‌ನ‌ಲ್ಲಿದ್ದಾಗ ಏಕಾಏಕಿ ಅಲ್ಲಿಗೆ ನುಗ್ಗಿದ ಐದಾರು ದುಷ್ಕರ್ಮಿಗಳು ತಿರುನಾಕರನ್‌ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಇತರೆ ಕಾರ್ಮಿಕರು ಸೋಮವಾರ ಬೆಳಗ್ಗೆ ಕೆಲಸಕ್ಕೆ ಬಂದ ವೇಳೆ ಕೃತ್ಯ ಬೆಳಕಿಗೆ ಬಂದಿದೆ. ತಿರುನಾಕರನ್‌ರನ್ನು ಯಾವ ಕಾರಣಕ್ಕೆಕೊಲೆ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ಪಡೆಯಬೇಕಿದೆ ಎಂದು ಪೊಲೀಸರು ಹೇಳಿದರು. ಎಲೆಕ್ಟ್ರಾನಿಕ್‌ ಸಿಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next