Advertisement

ಅಂತರರಾಜ್ಯ ಬೈಕ್ ಕಳ್ಳರ ಬಂಧನ: 8.35 ಲಕ್ಷ ಮೌಲ್ಯದ 19 ಬೈಕ್ ವಶ

12:51 PM Jul 19, 2021 | Team Udayavani |

ವಿಜಯಪುರ : ಜಿಲ್ಲೆಯ ಪೊಲೀಸರು ಅಂತರರಾಜ್ಯ ಬೈಕ್ ಕಳ್ಳತನ ಆರೋಪದಲ್ಲಿ ಇಬ್ಬರನ್ನು ಬಂಧಿಸಿದ್ದು,  19 ಬೈಕ್ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಬಂಧಿತರು ಸಿಂದಗಿ ತಾಲೂಕ ಗಬಸಾವಳಗಿ ಗ್ರಾಮದ ರಾಮು ಉರ್ಫ್ ರಾಮಚಂದ್ರ (23) ಹಾಗೂ ಕಾನೂನು ಸಂಘರ್ಷಕ್ಕೊಳಗಾದ ಓರ್ವ ಬಾಲಕನೂ ಸೇರಿದ್ದಾನೆ.

ಬಂಧಿತ ಆರೋಪಿಗಳು ಜಿಲ್ಲೆಯ ವಿಜಯಪುರ ಎಪಿಎಂಸಿ, ಗೋಲಗುಮ್ಮಟ, ಇಂಡಿ, ಸಿಂದಗಿ, ದೇವರಹಿಪ್ಪರಗಿ,  ಬೆಂಗಳೂರಿನ‌ ಹೆಬ್ಬಾಳ, ಮಹಾರಾಷ್ಟ್ರದ ರತ್ನಗಿರಿ, ಸೋಲಾಪುರ ಸೇರಿದಂತೆ 29 ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಇಂಡಿ ಉಪ ವಿಭಾಗದ ಸಿಂದಗಿ ಪೊಲೀಸರು ಎಲ್ಲ ಪ್ರಕರಣಗಳ ಬೇಧಿಸಿದ್ದು, ಅರೋಪಿಗಳಿಂದ 8,35,000 ರೂ. ಮೌಲ್ಯದ 19 ಬೈಕ್ ಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಸಂಸತ್ ಮುಂಗಾರು ಅಧಿವೇಶನ: ಕೋಲಾಹಲ-ಲೋಕಸಭೆ ಕಲಾಪ ಮಧ್ಯಾಹ್ನ 2ಗಂಟೆಗೆ ಮುಂದೂಡಿಕೆ

ಸದರಿ ಆರೋಪಿಗಳನ್ನು ಪತ್ತೆಮಾಡಿ, ಬಂಧಿಸುವಲ್ಲಿ ಎಎಸ್ಪಿ ರಾಮ ಅರಸಿದ್ದಿ, ಇಂಡಿ ಡಿಎಸ್ಪಿ ಶ್ರೀಧರ ದೊಡ್ಡಿ ಇವರ ಮಾರ್ಗದರ್ಶನದಲ್ಲಿ ಬೀಟ್ ಪೊಲೀಸರಾದ ಬಲವಂತರಾಯ ಹಾಗೂ ಸುರೇಶ ಕೊಣದಿ ಇವರ ಪಾತ್ರ ಮಹತ್ವದ್ದಾಗಿತ್ತು ಎಂದು ಎಸ್ಪಿ ಅನುಪಮ ಅಗರವಾಲ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

Advertisement

ಎಎಸ್ಪಿ ರಾಮ ಅರಸಿದ್ಧಿ, ಡಿಎಸ್ಪಿ ಶ್ರೀಧರ ದೊಡ್ಡಿ ಸೇರಿದಂತೆ ವಿವಿಧ ಠಾಣೆ ಪೊಲೀಸರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next