Advertisement

ಸಾಗರ: ಅಂತರ್ ಜಿಲ್ಲಾ ಬೈಕ್ ಕಳ್ಳರು ಪೊಲೀಸರ ಬಲೆಗೆ; 30.50 ಲಕ್ಷ ರೂ.ಮೌಲ್ಯದ 22 ಬೈಕ್ ವಶ

05:42 PM Apr 06, 2022 | Suhan S |

ಸಾಗರ: ಅಂತರ್ ಜಿಲ್ಲೆಗಳಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದು ಮೂವರು ಆರೋಪಿಗಳನ್ನು ಬಂಧಿಸಿರುವ ನಗರ ಠಾಣೆ ಪೊಲೀಸರು ಬಂಧಿತರಿಂದ 30.50 ಲಕ್ಷ ರೂ. ಮೌಲ್ಯದ 22 ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Advertisement

ನಗರವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ದ್ವಿಚಕ್ರ ವಾಹನ ಕಳ್ಳತನ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮೀಪ್ರಸಾದ್, ಅಡಿಷನಲ್ ಎಸ್ಪಿ ವಿಕ್ರಮ್ ಅಮತೆ ಮಾರ್ಗದರ್ಶನದಲ್ಲಿ ಸಾಗರ ಎಎಸ್‌ಪಿ ಡಾ. ರೋಹನ್ ಜಗದೀಶ್ ಸಾರಥ್ಯದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು.

ಏಪ್ರಿಲ್ 1ರಂದು ತನಿಖಾ ತಂಡವು ಸುದೀಪ್ ಯಾನೆ ಚೂಪಾ ಹಾವೇರಿ, ಅಜಯ್ ಯಾನೆ ಅಜ್ಜಪ್ಪ ಹಾವೇರಿ, ಗಂಗಾಧರ್ ಯಾನೆ ಸಂಜು ಯಾನೆ ಡಿಜೆ ಯಾನೆ ಗಂಗಾ ಹಾವೇರಿ ಎಂಬ ಮೂವರು ಆರೋಪಿಗಳನ್ನು ಮತ್ತು ಕಳ್ಳತನ ಮಾಡಿದ ಬೈಕ್ ಖರೀದಿ ಮಾಡಿದ್ದ ಹಾವೇರಿ ಶಿವಬಸವ ನಗರದ ಗುರುರಾಜ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ:ಕರ್ನಾಟಕದಲ್ಲಿ ಏನಾಗುತ್ತಿದೆ ಅಂತ ಅರ್ಥವಾಗುತ್ತಿಲ್ಲ : ವಾಟಾಳ್ ನಾಗರಾಜ್

ಬಂಧಿತರಿಂದ 8 ಬುಲೆಲ್ ಬೈಕ್, 1 ಕೆಟಿಎಂ ಬೈಕ್, 1 ಡ್ಯೂಕ್ ಬೈಕ್, 1 ಬಜಾಜ್ ಪಲ್ಸರ್ ಎನ್‌ಎಸ್, 9 ಸ್ಪ್ಲೆಂಡರ್ ಪ್ಲಸ್ ಬೈಕ್, 1 ಯಮಹ, 1 ಸ್ಪ್ಲೆಂಡರ್ ಪ್ರೋ ಸೇರಿದಂತೆ ಒಟ್ಟು 30.50 ಲಕ್ಷ ರೂ. ಮೌಲ್ಯದ 22 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಬೈಕ್‌ಗಳನ್ನು ಸಾಗರ, ಹೊಸನಗರ, ತೀರ್ಥಹಳ್ಳಿ, ಆನವಟ್ಟಿ, ಸೊರಬ, ಶಿರಾಳಕೊಪ್ಪ, ಹಾವೇರಿ, ಕೊಪ್ಪಳ, ಬಳ್ಳಾರಿ ಸೇರಿದಂತೆ ವಿವಿಧ ಕಡೆಗಳಲ್ಲಿ ಕಳ್ಳತನ ಮಾಡಿರುವುದು ಒಪ್ಪಿಕೊಂಡಿದ್ದಾರೆ.

Advertisement

ಸಾಗರ-ಕಾರ್ಗಲ್ ಸರ್ಕಲ್ ಇನ್ಸ್‌ಪೆಕ್ಟರ್ ಕೃಷ್ಣಪ್ಪ ಕೆ.ವಿ. ಕಾರ್ಗಲ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ತಿರುಮಲೇಶ್ ಜಿ., ಸಾಗರ ನಗರ ಠಾಣೆ ಸಬ್‌ಇನ್ಸ್‌ಪೆಕ್ಟರ್ ತುಕಾರಾಮ್ ಡಿ. ಸಾಗರ್‌ಕರ್  ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳಾದ ರತ್ನಾಕರ್, ಸಂತೋಷ್ ನಾಯ್ಕ್, ಹಜರತ್ ಅಲಿ, ಅಶೋಕ್, ಶ್ರೀಧರ್, ರವಿಕುಮಾರ್, ಮಲ್ಲೇಶ್ ಹೊಸಕೋಟೆ, ಸೈನುಸಾಬ್, ಹನೀಫ್, ಚಂದ್ರಶೇಖರ್ ಗೌಡ, ಶಮಂತ್, ಶಿವಮೊಗ್ಗ ಎ.ಎನ್.ಸಿ. ವಿಭಾಗದ ಸಿಬ್ಬಂದಿಗಳಾದ ಇಂದ್ರೇಶ್, ವಿಜಯಕುಮಾರ್, ಗುರುರಾಜ್ ಇನ್ನಿತರರು ಪಾಲ್ಗೊಂಡಿದ್ದರು.

ತಂಡಕ್ಕೆ ಕೃತಜ್ಞತೆ: ಸಾಗರ ನಗರವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು. ನಮ್ಮ ತಂಡಕ್ಕೆ ಅಡಿಷನಲ್ ಎಸ್ಪಿ ಸಹ ಮಾರ್ಗದರ್ಶನ ಮಾಡಿದ್ದರು. ತಂಡವು ತ್ವರಿತಗತಿಯಲ್ಲಿ ನಾಲ್ವರು ಆರೋಪಿಗಳನ್ನು ಮಾಲುಸಹಿತ ಬಂಧಿಸಿದ್ದು ಪೊಲೀಸ್ ಇಲಾಖೆಯ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಎಎಸ್‌ಪಿ ಡಾ. ರೋಹನ್ ಜಗದೀಶ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next