Advertisement

ವಾರಾಂತ್ಯದ ಮೋಜಿಗೆ ಅಡ್ಡಿಯಾದ ಮಳೆ

12:23 PM Sep 17, 2018 | |

ಬೆಂಗಳೂರು: ನಗರದಲ್ಲಿ ಸತತ ಮೂರನೇ ದಿನವೂ ಮಳೆಯಾಗಿದ್ದು, ವಾರಾಂತ್ಯದ ಮೋಜು-ಮಸ್ತಿಗೆ ಭಾನುವಾರದ ಮಳೆ ತಣ್ಣೀರೆರಚಿತು. ಶಾಪಿಂಗ್‌ ಮಾಲ್‌ಗ‌ಳು, ಚಿತ್ರಮಂದಿರಗಳು, ಪ್ರಮುಖ ಮಾರುಕಟ್ಟೆಗಳಲ್ಲಿ ಜನದಟ್ಟಣೆ ವಿರಳವಾಗಿತ್ತು. ಸೋಮವಾರ ಕೂಡ ಮುಂದುವರಿಯುವ ಸಾಧ್ಯತೆ ಇದೆ.

Advertisement

ಭಾನುವಾರ ಮಧ್ಯಾಹ್ನ ಆರಂಭವಾದ ಮಳೆ, ಧಾರಾಕಾರವಾಗಿ ಸುರಿಯಿತು. ಹಿಂದಿನ ಎರಡು ದಿನಗಳಿಗೆ ಹೋಲಿಸಿದರೆ ಮಳೆ ಅಬ್ಬರ ತುಸು ಕಡಿಮೆ. ನಗರದ ಶಿವಕೋಟೆಯಲ್ಲಿ ಗರಿಷ್ಠ 34.5 ಮಿ.ಮೀ. ಮಳೆ ದಾಖಲಾಗಿದೆ. 

ಚಂಡಮಾರುತದ ಪರಿಚಲನೆ ಮತ್ತು ಕಡಿಮೆ ಒತ್ತಡದ ತಗ್ಗು (ಟ್ರಫ್) ಜತೆಗೆ, ಒಂದು ವಾರದಿಂದ ಬಿಸಿಲಿನ ಧಗೆ ಹೆಚ್ಚಿತ್ತು. ಪರಿಣಾಮ ನಗರದಲ್ಲಿ ಮಳೆಯಾಗುತ್ತಿದೆ. ಇನ್ನೂ ಒಂದು ದಿನ ಇದೇ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಮಧ್ಯೆ ನಗರದ ಗರಿಷ್ಠ ತಾಪಮಾನ 2 ಡಿಗ್ರಿ ಸೆಲ್ಸಿಯಸ್‌ ಇಳಿಕೆಯಾಗಿದೆ. ಭಾನುವಾರ ಸಂಜೆ ಗರಿಷ್ಠ ಉಷ್ಣಾಂಶ 28.9 ಡಿಗ್ರಿ ಇತ್ತು.

ಎಲ್ಲೆಲ್ಲಿ ಎಷ್ಟು ಮಳೆ?: ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ 7.5 ಮಿ.ಮೀ., ರಾಜರಾಜೇಶ್ವರಿ ನಗರ 1.5, ಬಸವನಗುಡಿ 7.5, ಬೊಮ್ಮನಹಳ್ಳಿ 11, ಹೆಸರಘಟ್ಟ 10 ಮಿ.ಮೀ. ಮಳೆ ಆಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next