Advertisement

ಡಿವೈಎಸ್‌ಪಿ ಕಚೇರಿಯಲ್ಲಿ ಮುರುಘಾ ಶರಣರ ವಿಚಾರಣೆ

11:36 PM Sep 03, 2022 | Team Udayavani |

ಚಿತ್ರದುರ್ಗ: ಪೋಕ್ಸೋ ಪ್ರಕರಣದಡಿ ಪೊಲೀಸ್‌ ವಶದಲ್ಲಿರುವ ಡಾ| ಶಿವಮೂರ್ತಿ ಮುರುಘಾ ಶರಣರನ್ನು ಶನಿವಾರ ಡಿವೈಎಸ್ಪಿ ಕಚೇರಿಯಲ್ಲಿ ವಿಚಾರಣೆ ನಡೆಸಲಾಯಿತು.

Advertisement

ಶುಕ್ರವಾರ ಸಂಜೆ ನ್ಯಾಯಾಲಯದ ಮೂಲಕ ಕಸ್ಟಡಿಗೆ ಪಡೆದ ತನಿಖಾಧಿ ಕಾರಿಗಳು, ರಾತ್ರಿ ಸ್ವಲ್ಪ ಹೊತ್ತು ವಿಚಾರಣೆ ನಡೆಸಿದರು. ಅನಂತರ ದಣಿ ದಿದ್ದ ಶ್ರೀಗಳಿಗೆ ಡಿವೈಎಸ್ಪಿ ಕಚೇರಿಯಲ್ಲೇ ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಯಿತು.

ಶನಿವಾರ ಬೆಳಗ್ಗೆ 6.30ರ ಹೊತ್ತಿಗೆ ಎದ್ದ ಶ್ರೀಗಳು 9 ಗಂಟೆಗೆ ಉಪಾಹಾರ ಸೇವಿಸಿದ್ದಾರೆ. ಅನಂತರ ವೈದ್ಯರನ್ನು ಸ್ಥಳಕ್ಕೆ ಕರೆಯಿಸಿ ಆರೋಗ್ಯ ತಪಾಸಣೆ ನಡೆಸಲಾಯಿತು. ಬೆಳಗ್ಗೆ 10 ಗಂಟೆಯಿಂದ ಸತತ ವಿಚಾರಣೆಗೆ ಒಳಪಡಿಸಲಾಯಿತು.

ಮಧ್ಯಾಹ್ನದ ಬಳಿಕ‌ ಜಿಲ್ಲಾ ಆಸ್ಪತ್ರೆಗೆ ಕರೆತಂದು ತನಿಖೆಗೆ ಅಗತ್ಯವಾಗಿರುವ ಪುರುಷತ್ವ ಪರೀಕ್ಷೆ ಸಹಿತ ಅಗತ್ಯ ವೈದ್ಯ ಕೀಯ ಪರೀಕ್ಷೆಗಳನ್ನು ನಡೆಸಲಾಯಿತು. ಅನಂತರ ಪ್ರಕರಣದ ತನಿಖಾಧಿ ಕಾರಿ ಅನಿಲ್‌ಕುಮಾರ್‌ ನೇತೃತ್ವದಲ್ಲಿ ವಿಚಾರಣೆ ತೀವ್ರಗೊಳಿಸಲಾಯಿತು.

ಗುರುವಾರ ರಾತ್ರಿ ಶ್ರೀಗಳಿಗೆ ವಿಶ್ರಾಂತಿ ಸಿಕ್ಕಿರಲಿಲ್ಲ. ಚಳ್ಳಕೆರೆ ಡಿವೈಎಸ್ಪಿ ಕಚೇರಿಯಲ್ಲಿ ವಿಚಾರಣೆ, ಅಲ್ಲಿಂದ ಜಿಲ್ಲಾ ಆಸ್ಪತ್ರೆಗೆ ಕರೆತಂದು ವೈದ್ಯಕೀಯ ಪರೀಕ್ಷೆ, ಬಳಿಕ ನ್ಯಾಯಾಧೀಶರ ಎದುರು ಹಾಜರುಪಡಿಸಿ, ನ್ಯಾಯಾ ಧೀಶರ ನ್ಯಾಯಾಂಗ ಬಂಧನ ಆದೇಶ ದಂತೆ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿಸ ಲಾಗಿತ್ತು. ಇಷ್ಟೆಲ್ಲ ಪ್ರಕ್ರಿಯೆಗಳು ಮುಗಿಯುವಾಗ ನಸುಕಿನ ಜಾವ ಮೂರು ಗಂಟೆಯಾಗಿತ್ತು.

Advertisement

ಬಿಗಿ ಭದ್ರತೆ
ಡಿವೈಎಸ್ಪಿ ಕಚೇರಿ ಸುತ್ತಮುತ್ತ ಬಿಗಿ ಪೊಲೀಸ್‌ ಭದ್ರತೆ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ನಿವಾಸದ ಕಡೆಯಿಂದ ಜಿಲ್ಲಾಧಿಕಾರಿ ಕಚೇರಿಗೆ ಬರುವ ರಸ್ತೆ ಹಾಗೂ ಒನಕೆ ಓಬವ್ವ ವೃತ್ತದಿಂದ ಡಿಸಿ ಕಚೇರಿಗೆ ಬರುವ ರಸ್ತೆಗಳನ್ನು ಸಂಪೂರ್ಣ ಮುಚ್ಚಲಾಗಿದ್ದು, ಸಾರ್ವ ಜನಿಕರಿಗೆ ತೀವ್ರ ಸಮಸ್ಯೆಯಾಗಿತ್ತು.

ಜಾಮೀನು ಕೋರಿ ಶ್ರೀಗಳಿಂದ ಅರ್ಜಿ ಸಲ್ಲಿಕೆ
ಚಿತ್ರದುರ್ಗ: ಡಾ| ಶಿವಮೂರ್ತಿ ಮುರುಘಾ ಶರಣರು ಜಾಮೀನು ಕೋರಿ ಶನಿವಾರ ಅರ್ಜಿ ಸಲ್ಲಿಸಿದ್ದು, ಸೋಮವಾರ ವಿಚಾರಣೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಶ್ರೀಗಳ ಪರ ನ್ಯಾಯವಾದಿಗಳಾದ ಕೆ.ಎನ್‌.ವಿಶ್ವನಾಥಯ್ಯ ಹಾಗೂ ಉಮೇಶ್‌ ಅವರು ಅರ್ಜಿ ಸಲ್ಲಿಸಿದ್ದಾರೆ. ಶ್ರೀಗಳ ವಿಚಾರಣೆಯ ಕೆಲವು ಸಂದರ್ಭ ಅವರ ಪರ ವಕೀಲರು ಹಾಜರಿರಲು ಅವಕಾಶ ಕೋರುವ ಸಿಆರ್‌ಪಿಸಿ 41ಡಿ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದ್ದು, ಒಬ್ಬರು ನ್ಯಾಯವಾದಿಗೆ ಅವಕಾಶ ಕಲ್ಪಿಸಿದೆ.

ಪ್ರಕರಣದಲ್ಲಿ 4ನೇ ಆರೋಪಿಯಾಗಿರುವ ಪರಮಶಿವಯ್ಯ ಹಾಗೂ 5ನೇ ಆರೋಪಿ ನ್ಯಾಯವಾದಿ ಗಂಗಾಧರ್‌ ಅವರ ನಿರೀಕ್ಷಣ ಜಾಮೀನು ಅರ್ಜಿ ಶನಿವಾರ ನ್ಯಾಯಾಲಯದ ಮುಂದೆ ಬಂದಿದ್ದು, ಇದಕ್ಕೆ ತಕರಾರು ಅರ್ಜಿ ಸಲ್ಲಿಸಲು ಸೆ.7ಕ್ಕೆ ದಿನಾಂಕ ನಿಗದಿಪಡಿಸಿ ಮುಂದೂಡಲಾಗಿದೆ. ಪ್ರಕರಣದ ಮೂರನೇ ಆರೋಪಿ ಆಗಸ್ಟ್‌ 30ರಂದು ನಿರೀಕ್ಷಣ ಜಾಮೀನು ಅರ್ಜಿ ಸಲ್ಲಿಸಿದ್ದು, ಇದರ ವಿಚಾರಣೆಯನ್ನು ಸೆ.5ಕ್ಕೆ ಮುಂದೂಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next