ಕಾನ್ಪುರ: ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ ತಂಡ ಇನ್ನೇನು ಗೆದ್ದೇ ಬಿಟ್ಟಿತು ಎನ್ನುವಷ್ಟರಲ್ಲಿ ಡ್ರಾನಲ್ಲಿ ಅಂತ್ಯವಾಯಿತು. ಕೊನೆಯ 9 ಓವರ್ ಗಳಲ್ಲಿ ಒಂದು ವಿಕೆಟ್ ತೆಗೆಯಲಾಗದ ಭಾರತ ತಂಡ ನಿರೀಕ್ಷಿತ ಗೆಲುವು ತಪ್ಪಿಸಿಕೊಂಡಿತು. ರಚಿನ್ ರವೀಂದ್ರ ವೀರೋಚಿತ ಬ್ಯಾಟಿಂಗ್ ನಿಂದ ಕಿವೀಸ್ ತಂಡ ಸೋಲಿನ ದವಡೆಯಿಂದ ಪಾರಾಯಿತು!
ಭಾರತದ ಗೆಲುವಿಗೆ ಅಡ್ಡವಾಗಿ ನಿಂತ ಕಿವೀಸ್ ಆಲ್ ರೌಂಡರ್ ರಚಿನ್ ರವೀಂದ್ರ 91 ಎಸೆತಗಳಿಂದ 18 ರನ್ ಗಳಿಸಿದರು. ಭಾರತದ ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ರವೀಂದ್ರ ಭಾರತಕ್ಕೆ ಗೆಲುವಿನ ಸವಿ ಅನುಭವಿಸಲು ಅಡ್ಡಗಾಲು ಹಾಕಿದರು. ಮೊದಲ ಟೆಸ್ಟ್ ಪಂದ್ಯ ಆಡುತ್ತಿರುವ ರವೀಂದ್ರ ಸಾಹಸದಿಂದ ಕಿವೀಸ್ ಆಟಗಾರರು ನಿಟ್ಟುಸಿರು ಬಿಟ್ಟರು.
ಭಾರತ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡ 345 ರನ್ ಗಳಸಿದ್ದರೆ, ಕಿವೀಸ್ 296 ರನ್ ಗಳಿಸಿತ್ತು. ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ ತಂಡವು 234 ರನ್ ಗಳಿಸಿ ಡಿಕ್ಲೇರ್ ಮಾಡಿದ್ದರೆ, ಕಿವೀಸ್ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು.
ಇದನ್ನೂ ಓದಿ:ಭಾರತದ ಜಯಕ್ಕೆ ಅಡ್ಡಿಯಾದ ರವೀಂದ್ರ ಮತ್ತು ಮಂದಬೆಳಕು: ಕಾನ್ಪುರ ಟೆಸ್ಟ್ ಡ್ರಾನಲ್ಲಿ ಅಂತ್ಯ
Related Articles
ಪಂದ್ಯ ವಿರೋಚಿತ ಡ್ರಾ ಫಲಿತಾಂಶ ಕಂಡ ಬಳಿಕ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.