ನವದೆಹಲಿ: ಕೋವಿಡ್ 19 ವೈರಸ್ ಸಂಬಂಧಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಲಕ್ಷಾಂತರ ಜನರು ಮನೆಯಲ್ಲೇ ಕೆಲಸ ಮಾಡುತ್ತಿರುವುದರಿಂದ ಭಾರತದಲ್ಲಿ ಮೊಬೈಲ್ ಇಂಟರ್ನೆಟ್ ಮತ್ತು ಹೋಮ್ ಬ್ರಾಡ್ ಬ್ಯಾಂಡ್ ವೇಗ ಕುಸಿಯುತ್ತಿದೆ. ಓಕ್ಲಾ ಸ್ಪೀಡ್ ಟೆಸ್ಟ್ ಗ್ಲೋಬಲ್ ಇಂಡೆಕ್ಸ್ ಡೇಟಾ ಈ ಮಾಹಿತಿ ನೀಡಿದೆ.
ಬ್ರಾಡ್ ಬ್ಯಾಂಡ್ ಸರಾಸರಿ ಡೌನ್ ಲೌಡ್ ಸ್ಪೀಡ್ ಫೆಬ್ರವರಿಯಲ್ಲಿ 39.65 ಎಂಬಿಪಿಎಸ್ ಇತ್ತು ಮಾರ್ಚ್ ತಿಂಗಳಿನಲ್ಲಿ ಈ ವೇಗ 35.98 ಎಂಬಿಪಿಎಸ್‌ಗೆ ಇಳಿದಿದೆ ಎಂದು ತಿಳಿದುಬಂದಿದೆ. ಸರಾಸರಿ ಮೊಬೈಲ್ ಇಂಟರ್ನೆಟ್ ಡೌನ್‌ಲೋಡ್ ವೇಗ ಕೂಡ 1.68ಎಂಬಿಪಿಎಸ್‌ಗೆ ಇಳಿದಿದೆ. ಭಾರತದ ಮೊಬೈಲ್ ನೆಟ್ ವರ್ಕ್‌ಗಳು ಫೆಬ್ರವರಿಯಲ್ಲಿ ಹೊಂದಿದ್ದ ಸರಾಸರಿ ವೇಗ 11.83 ಎಂಬಿಪಿಎಸ್‌ನಿಂದ ಮಾರ್ಚ್‌ವರೆಎಗೆ 10.15 ಎಮ್‌ಬಿಪಿಎಸ್‌ಗೆ ಇಳಿದಿದೆ.