Advertisement
ಏನಿದು ಅಂತರ್ಜಾಲ ನಿರ್ಬಂಧ? ಗಲಭೆ ಪೀಡಿತ ಸ್ಥಳದಲ್ಲಿ ಮೊಬೈಲ್ (3ಜಿ, 4ಜಿ/ಎಲ್ಟಿಇ), ಫಿಕ್ಸ್‌ಡ್ ಲೈನ್ ಇಂಟರ್‌ನೆಟ್ (ವೈರ್ಡ್, ವೈರ್‌ಲೆಸ್) ಸೌಲಭ್ಯಗಳನ್ನು ಸಂಪೂರ್ಣ ವಾಗಿ ಕಡಿತಗೊಳಿಸುವುದು.
ಸಾಮಾನ್ಯವಾಗಿ ಗಲಭೆ ಪೀಡಿತ ಪ್ರದೇಶಗಳಲ್ಲಿ ವದಂತಿಗಳು ಹಬ್ಬುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲಿ, ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಿಸುವಂಥ ವದಂತಿಗಳಿಂದಾಗಿ ಗಲಭೆ ಇನ್ನಷ್ಟು ಹೆಚ್ಚಳವಾಗುವ ಭೀತಿಯಿರುತ್ತದೆ. ಹೀಗಾಗಿಯೇ ಸರಕಾರಗಳು ಅಂತರ್ಜಾಲವನ್ನು ನಿರ್ಬಂಧಿಸುತ್ತವೆ. ಎಲ್ಲಿ ಹೆಚ್ಚು ಕಡಿತ?
2012ರಿಂದ ಇದುವರೆಗೆ ದೇಶದಲ್ಲಿ 665 ಬಾರಿ ಇಂಟರ್‌ನೆಟ್ ಶಟ್‌ಡೌನ್ ಮಾಡಲಾಗಿದೆ. ಈ ವರ್ಷವೇ 59 ಬಾರಿ ಶಟ್‌ಡೌನ್ ಆಗಿದೆ. ಅದರಲ್ಲೂ ಅತಿ ಹೆಚ್ಚು ಇಂಟರ್‌ನೆಟ್ ಬ್ಯಾನ್ ಆಗಿರುವುದು ಜಮ್ಮು ಮತ್ತು ಕಾಶ್ಮೀರದಲ್ಲಿ. 2012ರಿಂದ ಇಲ್ಲಿವರೆಗೆ 411 ಬಾರಿ ಶಟ್‌ಡೌನ್ ಆಗಿದೆ. ವಿಚಿತ್ರವೆಂದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ತೆಗೆದು ಹಾಕಿದ ಮೇಲೆ ಸತತವಾಗಿ 552 ದಿನಗಳವರೆಗೆ ಇಂಟರ್‌ನೆಟ್ ಶಟ್‌ಡೌನ್ ಮಾಡಲಾಗಿದೆ. ಇದನ್ನು ಬಿಟ್ಟರೆ, ರಾಜಸ್ಥಾನದಲ್ಲಿ 88 ಬಾರಿ ನಿರ್ಬಂಧಿಸಲಾಗಿದೆ.
Related Articles
ಇತ್ತೀಚಿನ ದಿನಗಳಲ್ಲಿ ಹೆಚ್ಚು ಗಲಭೆಗಳಿಗೆ ಸಾಕ್ಷಿಯಾಗುತ್ತಿರುವುದು ರಾಜಸ್ಥಾನ. ಇತ್ತೀಚೆ ಗಷ್ಟೇ ಕನ್ಹಯ್ಯಲಾಲ್ ಅವರನ್ನು ಇಬ್ಬರು ದುಷ್ಕರ್ಮಿಗಳು ಹತ್ಯೆ ಮಾಡಿದಾಗಲೂ, ಉದಯಪುರದಲ್ಲಿ ಅಂತರ್ಜಾಲವನ್ನು ನಿರ್ಬಂಧಿಸಲಾಗಿತ್ತು.
Advertisement