Advertisement
ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಶನಿವಾರ ಅಂತರ್ಜಲ ನಿರ್ದೇಶನಾಲಯ ಹಾಗೂ ಸಣ್ಣ ನೀರಾವರಿ ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಕರ್ನಾಟಕ ರಾಜ್ಯದ ಅಂತರ್ಜಲ ಮೌಲೀಕರಣ -2020 ವರದಿ ಬಿಡುಗಡೆ ಸಮಾರಂಭಹಾಗೂ ಅಟಲ್ ಭೂಜಲ ಯೋಜನೆಯ ಸುಸ್ಥಿರ ಅಂತರ್ಜಲ ನಿರ್ವಹಣೆಯಲ್ಲಿ ಸಮುದಾಯದ ಸಹಭಾಗಿತ್ವ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.
Related Articles
Advertisement
ಮೂರು ವರ್ಷಕ್ಕೊಮ್ಮೆ ವರದಿ: ಅಂತರ್ಜಲ ಮೌಲ್ಯೀಕರಣ ವರದಿಯೂ ಪ್ರತಿ ಮೂರು ವರ್ಷಕ್ಕೊಮ್ಮೆ ಸರಕಾರದಿಂದ ವರದಿಯನ್ನು ಬಿಡುಗಡೆ ಮಾಡುತ್ತಾರೆ, ಭೂಮಿಯಲ್ಲಿ ಜಲ ಹೇಗಿರುತ್ತದೆ ಎಂಬುದರ ಬಗ್ಗೆ ಸಮೀಕ್ಷೆ ಮಾಡಿ ಪುಸ್ತಕ ರೂಪದಲ್ಲಿ ತರುತ್ತಾರೆ.
ಪ್ರಸ್ತುತ ಭೂಮಿಯಲ್ಲಿ ಶೇ.98 ಯೋಗ್ಯವಲ್ಲದ ನೀರಿದ್ದೂ ಕೇವಲ ಶೇ.2 ನೀರು ಮಾತ್ರ ಯೋಗ್ಯವಾಗಿದೆ. ನೀರಿನ ಮರುಬಳಕೆ ಮಾಡಿಕೊಳ್ಳಬೇಕೆಂಬುದು ಪ್ರತಿಯೊಬ್ಬರಿಗೂ ತಿಳಿವಳಿಕೆ ನೀಡುವ ಮೂಲಕ ಮುಂದಿನ ಪೀಳಿಗೆಗೆ ಉಳಿಸಬೇಕಾಗಿದೆ ಎಂದು ವಿವರಿಸಿದರು.
ಅಂತರ್ಜಲ ಸಂಪನ್ಮೂಲ ಉಳಿಸಿ: ಹಿಂದೆ ಕೋಲಾರದಂತಹ ಜಿಲ್ಲೆಯಲ್ಲಿ 1700 ಅಡಿಗಳಿಗೆನೀರು ಸಿಗುತ್ತಿತ್ತು. ಪ್ರಸ್ತುತ 400-500 ಅಡಿಗಳಿಗೆ ನೀರು ಬರುತ್ತಿದೆ. ಮುಂದೆ ಒಂದೆರಡು ವರ್ಷದಲ್ಲಿ 200ರಿಂದ 300 ಅಡಿಗಳಿಗೆ ನೀರು ಬರುವ ಸಾಧ್ಯತೆ ಇದೆ. ನೀರನ್ನು ಸಂಗ್ರಹಿಸಿಕೊಂಡು ಎಷ್ಟು ಬೇಕೋ ಅಷ್ಟು ಮಾತ್ರ ಬಳಸಿಕೊಳ್ಳುವುದರ ಮೂಲಕ ಅಂತರ್ಜಲ ಸಂಪನ್ಮೂಲವನ್ನು ಉಳಿಸಬೇಕಾಗಿದೆ ಎಂದು ಹೇಳಿದರು.
ಪ್ರಕೃತಿ ಉಳಿಸಿ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ಪ್ರಕೃತಿಯಲ್ಲಿನೀರಿನ ಮಟ್ಟ ಕಡಿಮೆಯಾಗಲು ನಾವುಗಳೇ ಕಾರಣ. ಮರ ಗಿಡಗಳನ್ನು ನಾಶಮಾಡಿದ್ದೇ ಇದಕ್ಕೆಲ್ಲ ಕಾರಣ. ಹಿಂದೆ ಎಲ್ಲಿ ನೋಡಿದರೂ ಹಸಿರಿನಿಂದ ಕಂಗೊಳಿಸುತ್ತಿದ್ದ ಪ್ರದೇಶವನ್ನು ಮನುಷ್ಯನ ದುರಾಸೆಗೆ ನಾಶ ಮಾಡಿದ್ದರಿಂದ ಮಳೆ ಪ್ರಮಾಣ ಕಡಿಮೆಯಾಗಿದೆ. ಮುಂದಾದರು ಎಚ್ಚೆತ್ತುಕೊಂಡು ಪ್ರಕೃತಿ ಉಳಿಸುವ ಕಡೆಗೆ ಹೆಜ್ಜೆ ಹಾಕಬೇಕಾಗಿದೆ ಎಂದರು.
ಸಂಸದ ಎಸ್.ಮುನಿಸ್ವಾಮಿ, ಶಾಸಕ ಎಚ್ .ನಾಗೇಶ್, ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ, ಸಣ್ಣ ನೀರಾವರಿ ಅಂತರ್ಜಲ ಅಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಸಿ.ಮ್ಯತ್ಯುಂಜಯ ಸ್ವಾಮಿ, ಪ್ರಾದೇಶಿಕ ಅಂತರ್ಜಲ ಮಂಡಳಿ ನಿರ್ದೇಶಕವಿ. ಕುನಂಬು, ಸಣ್ಣನೀರಾವರಿ ಅಧೀಕ್ಷಕ ಎಂಜಿನಿಯರ್ ಎನ್.ನಾಗರಾಜ್, ಅಂತರ್ಜಲ ನಿರ್ದೇಶನಾಲಯ ನಿರ್ದೇಶಕ ಜಿ.ವಿಜಯಣ್ಣ, ಜಿಪಂ ಸಿಇಒ ಎನ್.ಎಂ.ನಾಗರಾಜ್, ಸಣ್ಣ ನೀರಾವರಿ ಇದ್ದರು.