Advertisement
2021ರಲ್ಲಿ ಈ ಟ್ರೆಂಡ್ ಬದಲಾಗಿದೆ. ಸಂಶೋಧನ ಸಂಸ್ಥೆ Cable.co.uk ವರದಿಯ ಪ್ರಕಾರ ಭಾರತದಲ್ಲಿ ಡೇಟಾದ ಸರಾಸರಿ ಬೆಲೆ 7.5 ಪಟ್ಟು ಹೆಚ್ಚಾಗಿದೆ. ಇಂಟರ್‌ನೆಟ್ ಬಳಕೆಯನ್ನು ಹೊಂದಿರುವ ವಿಶ್ವದ 230 ದೇಶಗಳ ಪೈಕಿ ಭಾರತ 28ನೇ ಸ್ಥಾನದಲ್ಲಿದೆ ಎಂದು ವರದಿ ಹೇಳಿದೆ. ಈಗ ಭಾರತದಲ್ಲಿ 1 ಜಿಬಿ ಡೇಟಾದ ಸರಾಸರಿ ಬೆಲೆ 51 ರೂ. ಗಳನ್ನು ತಲುಪಿದೆ.
Related Articles
Advertisement
ಪ್ರೈಸಿಂಗ್ 2021ರ ಇತ್ತೀಚಿನ ವರದಿಯ ಪ್ರಕಾರ ಈಗ ಇಸ್ರೇಲ್ ವಿಶ್ವದ ಅಗ್ಗದ ಇಂಟರ್ನೆಟ್ ಯೋಜನೆಯನ್ನು ನೀಡುತ್ತಿದೆ. ಅಲ್ಲಿ 1 ಜಿಬಿ ಡೇಟಾ ದರ 4 ರೂ.ಗಳಿಗಿಂತ ಕಡಿಮೆ ಇದೆ. ಅಲ್ಲಿ ಒಂದು ಜಿಬಿ ಡೇಟಾದ ಬೆಲೆ 3.75 ರೂ. ಇದೆ. ಬಳಿಕದ ಸ್ಥಾನದಲ್ಲಿ ಕಿರ್ಗಿಸ್ಥಾನ್, ಫಿಜಿ, ಇಟಲಿ, ಸುಡಾನ್ ಮತ್ತು ರಷ್ಯಾ ಇದೆ.
ಈಕ್ವಟೋರಿಯಲ್ ಗಿನಿಯಾ ಅತೀ ದುಬಾರಿ :
ವರದಿಯ ಪ್ರಕಾರ ವಿಶ್ವದ ಅತ್ಯಂತ ದುಬಾರಿ ಇಂಟರ್‌ನೆಟ್ ಡೇಟಾ ಈಕ್ವಟೋರಿಯಲ್ ಗಿನಿಯಾದಲ್ಲಿದೆ. ಇಲ್ಲಿ 1 ಜಿಬಿ ಇಂಟರ್‌ನೆಟ್‌ಗೆ 3,724 ರೂ. ಪಾವತಿಸಬೇಕಾಗಿದೆ. ಫಾಕ್ ಲ್ಯಾಂಡ್, ಐಲ್ಯಾಂಡ್, ಸೇಂಟ್ ಹೆಲೆನಾ, ಸಾವೊಟೋಮೆ ಪ್ರಿನ್ಸಿಪಿ ಮತ್ತು ಮಲಾವಿ ಬಳಿಕದ ಸ್ಥಾನ ಗಳಲ್ಲಿವೆ.
ದುಬಾರಿ ಆಗಲು ಕಾರಣ :
ಭಾರತದ ಟೆಲಿಕಾಂ ಕಂಪೆನಿಗಳ ಡೇಟಾ ದರ ಏರಿಕೆಗೆ ಎಜಿಆರ್ ಪ್ರಮುಖ ಕಾರಣ ವಾಗಿದೆ. ಇದರನ್ವಯ ಟೆಲಿಕಾಂ ಕಂಪೆನಿಗಳು ತಮ್ಮ ಒಟ್ಟು ಆದಾಯದ ಒಂದು ಭಾಗವನ್ನು ಸರಕಾರ ದೊಂದಿಗೆ ಹಂಚಿಕೊಳ್ಳಬೇಕಾಗಿದೆ. ಮಾರ್ಚ್ 2020ರಲ್ಲಿ ಏರ್‌ಟೆಲ್ ಸುಮಾರು 26 ಸಾವಿರ ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿತ್ತು. ವೊಡಾಫೋನ್-ಐಡಿಯಾದಿಂದ 55,000 ಕೋಟಿ ರೂ. ಮತ್ತು ಟಾಟಾ ಟೆಲಿ ಸರ್ವಿಸಸ್‌ನಿಂದ ಸುಮಾರು 13,000 ಕೋಟಿ ರೂ. ಜಿಯೋದಿಂದ 195 ಕೋಟಿ ರೂ. ವಸೂಲಿ ಮಾಡಲಾಗಿದೆ. ಈಗ ಏನೂ ಬಾಕಿ ಉಳಿದಿಲ್ಲ. ಎಜಿಆರ್‌ನಿಂದ ಉಂಟಾಗುವ ನಷ್ಟವನ್ನು ಕಂಪೆನಿ ಗಳು ಇಂಟರ್‌ನೆಟ್ ದರ ಹೆಚ್ಚಿಸಿ ತುಂಬಿಕೊಳ್ಳುತ್ತವೆ.
ಬಳಕೆದಾರರು :
ಟ್ರಾಯ್ ಪ್ರಕಾರ ಮಾರ್ಚ್‌ನಲ್ಲಿ ರಿಲಯನ್ಸ್ ಜಿಯೋ ಶೇ. 35.30 ಬಳಕೆದಾರರೊಂದಿಗೆ ಮುನ್ನಡೆ ಸಾಧಿಸಿದೆ. ಏರ್‌ಟೆಲ್ ಶೇ. 29.62 ಬಳಕೆದಾರರನ್ನು ಹೊಂದಿದೆ. ವೊಡಾಫೋನ್ ಐಡಿಯಾ ಶೇ. 24.58ರಷ್ಟು ಬಳಕೆದಾರರನ್ನು ಹೊಂದಿದೆ.
ನೆರೆ ರಾಷ್ಟ್ರಗಳಲ್ಲಿ ಹೇಗಿದೆ? :
ಚೀನ 18ನೇ ಸ್ಥಾನಕ್ಕೆ ಇಳಿದಿದೆ. ಇಲ್ಲಿ 2021ರ ಮಾರ್ಚ್‌ನಲ್ಲಿ ಒಂದು ಜಿಬಿ ಡೇಟಾದ ಬೆಲೆ 43 ರೂಪಾಯಿಗಳಾಗಿತ್ತು. ಇದಲ್ಲದೆ ಪಾಕಿಸ್ಥಾನ 19ನೇ ಸ್ಥಾನ, ನೇಪಾಲ 24ನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ ಮತ್ತು ಶ್ರೀಲಂಕಾ ಕೂಡ ಭಾರತಕ್ಕಿಂತ ಮೇಲಿವೆ.