Advertisement

Dry Fruit Jewellery: ಮಹಿಳೆ ತೊಟ್ಟ ‘ಡ್ರೈ ಫ್ರೂಟ್’ ಆಭರಣಕ್ಕೆ ಫಿದಾ ಆದ ನೆಟ್ಟಿಗರು…

10:29 AM Feb 17, 2024 | Team Udayavani |

ಇಂಟರ್ನೆಟ್ ನಲ್ಲಿ ಈಗೀಗ ವೈರಲ್ ನ್ಯೂಸ್ ಗಳದ್ದೇ ಹವಾ, ದಿನ ಬೆಳಗಾದರೆ ಭಿನ್ನ ಭಿನ್ನ ರೀತಿಯ ವೈರಲ್ ವಿಡಿಯೋಗಳು ಕಾಣಸಿಗುತ್ತವೆ. ಅದೇ ರೀತಿ ಇಲ್ಲೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ನೆಟ್ಟಿಗರಿಂದ ಬಾರಿ ಮೆಚ್ಚುಗೆಯನ್ನೂ ಪಡೆದುಕೊಂಡಿದೆ.

Advertisement

ಅದೇನೆಂದರೆ ಪಿಸ್ತಾ, ಬಾದಾಮ್, ಗೇರು ಬೀಜ, ಹೀಗೆ ಡ್ರೈ ಫ್ರೂಟ್ ಗಳನ್ನು ಬಳಸಿಕೊಂಡು ಮಾಡಲಾದ ಆಭರಣ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಇಲ್ಲೊಬ್ಬರು ಮಹಿಳೆ ತನ್ನ ಸೀಮಂತ ಕಾರ್ಯಕ್ರಮಕ್ಕೆ ಚಿನ್ನದ ಆಭರಣಗಳನ್ನು ಬಳಸುವ ಬದಲು ಪಿಸ್ತಾ, ಬಾದಾಮ್, ಗೇರುಬೀಜಗಳಿಂದಲೇ ತಯಾರಿಸಲಾದ ಆಭರಣಗಳನ್ನು ಧರಿಸಿಕೊಂಡಿದ್ದಾರೆ.

ಡ್ರೈ ಫ್ರೂಟ್ ಬಳಸಿಕೊಂಡು ನೆಕ್ಕ್ಲೆಸ್, ಕೈಗೆ ಬಳೆ, ಕಿವಿಗೆ ಜುಮ್ಕೆ, ಸೊಂಟ ಪಟ್ಟಿ, ಉಂಗುರ ಹೀಗೆ ಚಿನ್ನದ ಆಭರಣಗಳ ಬದಲಿಗೆ ಡ್ರೈ ಫ್ರೂಟ್ ಗಳನ್ನು ಬಳಸಿಕೊಂಡು ಆಭರಣ ತಯಾರಿಸಿ ಬಳಸಿಕೊಂಡಿದ್ದಾರೆ. ಈ ವಿಡಿಯೋ ಇನ್ಸ್ಟಾ ಗ್ರಾಮ್ ನಲ್ಲಿ ವೈರಲ್ ಆಗುತ್ತಿದ್ದು ನೆಟ್ಟಿಗರು ವಿಡಿಯೋಗೆ ಬಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

Advertisement

Advertisement

Udayavani is now on Telegram. Click here to join our channel and stay updated with the latest news.

Next