ಕಣ್ಣೆದುರು ಒಂದಿಷ್ಟು ಕೃತಕ ಬುದ್ಧಿಮತ್ತೆಯ ಮಾದರಿಗಳಿದ್ದವು. ಅಲ್ಲೆಲ್ಲೋ ಜಪಾನಿನಲ್ಲಿ ರೊಬೊಟ್, ಬ್ರೇಕಿಂಗ್ ನ್ಯೂಸ್ ಓದುತ್ತಿತ್ತು; ಅಮೆಜಾನ್‌ನ ಕೂಸು “ಅಲೆಕ್ಸಾ’, ಇಷ್ಟದ ಹಾಡನ್ನು ಪ್ಲೇ ಮಾಡಿ, ರಂಜಿಸುತ್ತಿತ್ತು; ಗೂಗಲ್ ಅಸಿಸ್ಟಂಟ್, ಆ್ಯಪಲ್‌ನ ಹೋಮ್‌ಪಾಡ್‌ಗಳು ಮನುಷ್ಯನೊಂದಿಗೆ ಹರಟೆ ಹೊಡೆದು, ಒಂದಷ್ಟು ಮನರಂಜನೆ ನೀಡುತ್ತಿದ್ದವಷ್ಟೇ… ಆಗಿನ್ನೂ ಮನುಷ್ಯ ಹೇಳಿದ್ದನ್ನು ಕೇಳುವಂಥ, ಛಕ್ಕನೆ ಪ್ರತಿಕ್ರಿಯಿಸುವಂಥ ಕಾರು ರೋಡಿಗೇ ಇಳಿದಿರಲಿಲ್ಲ. ಇನ್ನೆರಡು ತಿಂಗಳು ಕಾದುಬಿಟ್ಟರೆ, ಆ ಪವಾಡವೂ ನಡೆದುಹೋಗುತ್ತೆ. ಜೂನ್ ಹೊತ್ತಿಗೆ ಭಾರತದಲ್ಲಿ ಆರ್ಟಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ಕಾರುಗಳು ಗಲ್ಲಿಗಲ್ಲಿಗಳಲ್ಲಿ “ರೊಂಯ್’ಗುಟ್ಟಲಿವೆ. ಇಂಗ್ಲೆಂಡಿನ ಎಂ.ಜಿ. ಮೋಟಾರ್ಸ್ ಸಂಸ್ಥೆಯು ಭಾರತದಲ್ಲಿ “ಮೊದಲ ಇಂಟರ್ನೆಟ್ ಕಾರ್’ ಅನ್ನು ಬಿಡುಗಡೆ ಮಾಡುತ್ತಿದೆ. “ಎಂ.ಜಿ. ಹೆಕ್ಟರ್’ ಎನ್ನುವ ಇಂಟರ್ನೆಟ್ ಪವಾಡಗಳನ್ನು ತುಂಬಿಕೊಂಡ ಎಸ್‌ಯುವಿ ಇದು. ಮನುಷ್ಯ ಹೇಳಿದ್ದನ್ನೆಲ್ಲ ಕೇಳಿಸಿಕೊಂಡು, ಶ್ರದ್ಧೆಯಿಂದ ಪಾಲಿಸುವ ಈ ಕಾರಿನಲ್ಲಿ, ಡ್ರೈವರ್‌ಗಾಗಲೀ, ಕುಳಿತವರಿಗಾಗಲೀ ಹೆಚ್ಚು ಕೆಲಸವೇ ಇರೋದಿಲ್ಲ.
Advertisement
ಹಲೋ ಎಂ.ಜಿ…ಈ ಧ್ವನಿ ಸಹಾಯಕವೇ ಕಾರಿನ “ಸ್ಟ್ರೆಂತ್’. ಅಲೆಕ್ಸಾದ ಪ್ರತಿರೂಪದಂತೆ ಇರುವ, ಕ್ಲೌಡ್ ಹಾಗೂ ಹೆಡ್‌ನಲ್ಲಿ ಕಾರ್ಯನಿರ್ವಹಿಸುವಂಥ ಪ್ರಬಲವಾಯ್ಸ ಅಪ್ಲಿಕೇಶನ್ ಇಲ್ಲಿರಲಿದೆ. ಭಾರತೀಯರ ಉಚ್ಚಾರಣೆಗೆ ಸ್ಪಂದಿಸುವ, “ಹಲೋ ಎಂ.ಜಿ.’ ಧ್ವನಿ ಸಹಾಯಕದ ಮೂಲಕ 100ಕ್ಕೂ ಹೆಚ್ಚು ಕೆಲಸವನ್ನು ಮಾಡಿಸಿಕೊಳ್ಳಬಹುದು. “ಎಸಿ ಕಂಟ್ರೋಲ್ ಮಾಡು’ ಅಂದರೆ, ಮಾಡುತ್ತೆ; “ಬ್ಯಾಕ್‌ಸೀಟ್‌ನ ಕಾರಿನ ಗ್ಲಾಸು ಏರಿಸು’ ಅಂದ್ರೆ ಏರಿಸುತ್ತೆ; ಸನ್‌ರೂಫ್ ಇರಲಿಯೆಂದರೆ, ಆಕಾಶದ ಅಂದವನ್ನೆಲ್ಲ ಟಾಪ್ ನಲ್ಲಿ ತೋರಿಸುತ್ತೆ; ಬಾಗಿಲುಗಳನ್ನೂ ಕಾರೇ ಹಾಕುತ್ತೆ… ಇಷ್ಟದ ಹಾಡುಗಳನ್ನೂ ಕೇಳಿಸುತ್ತೆ… ಬಿಲ್ಟ್ ಇನ್ ಅವಕಾಶವೂ ಇಲ್ಲಿದ್ದು, ಮಿಷನ್ ಲರ್ನಿಂಗ್ ಅಲ್ಗಾರಿದಮ್ ನೆರವಿನಿಂದ ದಿನದಿಂದ ದಿನಕ್ಕೆ ಇದರ ಬುದ್ಧಿಮತ್ತೆಯೂ ಆಟೋಮ್ಯಾಟಿಕ್ ಆಗಿ ಉತ್ತಮಗೊಳ್ಳುತ್ತಾ ಹೋಗುತ್ತದೆ. ದಾರಿ ತೋರಿಸುವ ದೇವರು ಕಾರಿನಲ್ಲಿ ಹೋಗುತ್ತಿದ್ದೀರಿ… ಮುಂದೆ ಟ್ರಾಫಿಕ್ ಜಾಮ್ ಆಗಿರೋ ಮುನ್ಸೂಚನೆಯನ್ನು ನೇವಿಗೇಶನ್‌ನಲ್ಲೇ ತಿಳಿಯಬಹುದು. ರಸ್ತೆ ದುರಸ್ತಿ ನಡೆಯುತ್ತಿದ್ದರೆ, ಸೇತುವೆ ಬಿದ್ದಿದ್ದರೆ, ಅದು ಮುಂಚಿತವಾಗಿಯೇ ಚಾಲಕನಿಗೆ ಗೊತ್ತಾಗುವ ವ್ಯವಸ್ಥೆ ಇಲ್ಲಿರಲಿದೆ.
5ಜಿ ನೆಟ್‌ವರ್ಕ್, ಈ ಕಾರಿನ ಇನ್ನೊಂದು ವೈಶಿಷ್ಟ. ಎಂಥದ್ದೇ ಕಳಪೆ ಸಂಪರ್ಕ
ಸ್ಥಿತಿಯಲ್ಲೂ ದೂರವಾಣಿ, ಇಂಟರ್ನೆಟ್ ಕೆಲಸ ಮಾಡಲಿವೆ. ಕಾರು ಯಾವುದೋ ದಟ್ಟಾರಣ್ಯದ ನಡುವೆ ಇದ್ದರೂ, ಕರೆಗಳನ್ನು ಮಾಡುವಂಥ ವ್ಯವಸ್ಥೆ ಇರಲಿದೆ. ಒಂದು ವೇಳೆ, ಕಾರು ಅಪಘಾತ ಆಗುತ್ತದೆ ಎನ್ನುವ ಸಮಯದಲ್ಲಿ, 30 ಅಡಿಗಳ ಮುಂಚಿತವಾಗಿಯೇ ಮುನ್ಸೂಚನೆಯ ಸಿಗ್ನಲ್ ಸಿಗುತ್ತದೆ. ಹಾಗೂ ಅಪಘಾತವಾದರೆ, ಕೂಡಲೇ ರಿಜಿಸ್ಟರ್ ಆದ ಮೊಬೈಲ್‌ಗೆ ಎಂ.ಜಿ. ಕಸ್ಟಮರ್ ಕೇರ್‌ನಿಂದ ಕರೆ ಹೋಗುತ್ತದೆ. ಮೊದಲನೇ ನಂಬರ್‌ನವರು ಕರೆ ಎತ್ತದೇ ಇದ್ದಾಗ, ಎರಡನೇ ಸಂಖ್ಯೆಯವರಿಗೆ ಕರೆ ಹೋಗುತ್ತದೆ. ಕಾರಿನ ಯಾವುದೇ ಸಮಸ್ಯೆಗೆ ಕೂಡಲೇ ಸ್ಪಂದಿಸಲು 24*7 ಕಸ್ಟಮರ್ ಕೇರ್ ಇರುವುದು ಗ್ರಾಹಕರಿಗೆ ಇನ್ನೊಂದು ಪ್ಲಸ್ ಪಾಯಿಂಟ್.
Related Articles
Advertisement