Advertisement
ಸಿಂಹಾವಲೋಕನ ನ್ಯಾಯದಂತೆ ಮುಂದಿನ ಗುರಿಯನ್ನು ನಿಶ್ಚಯಿಸಿ ತಕ್ಕುದಾದ ರೂಪುರೇಷೆಗಳನ್ನು ಕೈಗೊಂಡಾಗ ಮುಂದಿನ ಜನಾಂಗವು ಉತ್ತಮವಾಗಿರಲು ಸಾಧ್ಯ. ಇದು ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ವಾದ ರೀತಿಯಲ್ಲಿ ಎಲ್ಲ ವ್ಯವಸ್ಥೆಗಳನ್ನೂ ಹೊಂದುವ ಮತ್ತು ಮಾಡುವ ವ್ಯವಸ್ಥೆಯಲ್ಲಿರ ಬೇಕಾಗುತ್ತದೆ. ಸರ್ವಾಂಗೀಣ ಮತ್ತು ಪರಿಪೂರ್ಣ ಅಭಿವೃದ್ಧಿಯ ದೃಷ್ಟಿಯಿಂದ ಚಿಂತನೆ ಮಾಡಿದಾಗ ನಮ್ಮಲ್ಲಿರುವ ಕೊರತೆಗಳನ್ನು ನೀಗಿ ಸಲು ಯಾವ ಅಂಶಗಳನ್ನು ಪರಿಗಣಿಸಿ ಹೇಗೆ ನಿವಾರಿಸಬಹುದೆಂಬ ಉಪಾಯ- ಪ್ರತ್ಯುಪಾಯಗಳೂ ವ್ಯವಸ್ಥಿತವಾಗಿರಬೇಕಾಗುವುದು. ಇವುಗಳನ್ನೆಲ್ಲ ಪರಿಗಣಿಸಿದಾಗ ಕೆಲವೊಂದು ಮೂಲಭೂತ ಮುಖ್ಯ ವಿಷಯಗಳತ್ತ ನಾವು ಗಮನಹರಿಸ ಬೇಕಿದೆ. ಅವುಗಳೆಂದರೆ,
- ವಿದ್ಯಾಭ್ಯಾಸದ ವ್ಯವಸ್ಥೆಯಲ್ಲಿ ಆಯ್ಕೆಯ ವಿಷಯವಾಗಿ ಸರಕಾರಿ ಮತ್ತು ಖಾಸಗಿ ವ್ಯವಸ್ಥೆ ಯಲ್ಲಿರಬೇಕು. 2. ಸರಿಯಾದ ಪಠ್ಯಕ್ರಮ, ಬೋಧನಾಕ್ರಮ ಮತ್ತು ಮೂಲಸೌಕರ್ಯಗಳಿರಬೇಕು. 3. ಸರಿಯಾದ ರೀತಿಯಲ್ಲಿ ನಿರಂತರ ಸಂಶೋಧನೆ ಮತ್ತು ಅಧ್ಯಯನ, ಅಧ್ಯಾಪನದ ಬೆಳವಣಿಗೆಗಳು ನಡೆಯುತ್ತಿರಬೇಕು. 4. ಸರಕಾರದಿಂದ ಇವೆಲ್ಲದಕ್ಕೂ ವ್ಯವಸ್ಥೆ ಮತ್ತು ಸಹಕಾರ ಇರಬೇಕು. 5. ಶಿಕ್ಷಣವು ವ್ಯಾವಹಾರಿಕ ಲಾಭ ನಷ್ಟದ ವಿಷಯವಲ್ಲವಾದರೂ ಯೋಗದ ವಿಷಯದಲ್ಲಿ ವೆಚ್ಚ ಕಡಿಮೆ ಆದಾಯ ಹೆಚ್ಚು. ಇದನ್ನು ಶಿಕ್ಷಣದ ಮೂಲಕ ತೋರಿಸುವ ಜವಾಬ್ದಾರಿ ಸರಕಾರಕ್ಕೆ ಇದೆ. ಇತರ ವಿಷಯಗಳಲ್ಲಿ ವ್ಯಾವಹಾರಿಕ ಲಾಭ-ನಷ್ಟದ ದೃಷ್ಟಿ ಸಾಕಷ್ಟು ಹಾಸು ಹೊಕ್ಕಾಗಿದೆ. 6. ಇವುಗಳನ್ನು ಕಾರ್ಯರೂಪಕ್ಕೆ ತರಲು ಮತ್ತು ನಿಭಾಯಿಸಲು ಮೇಲ್ಮಟ್ಟದಿಂದ ಕೆಳಸ್ತರದ ವರೆಗೆ ಪ್ರತ್ಯೇಕ ವ್ಯವಸ್ಥೆ ಅಗತ್ಯ. 7. ಯೋಗದ ಸರಿಯಾದ ಆಧ್ಯಯನ, ಅಭ್ಯಾಸ, ಆಚ ರಣೆ ಮತ್ತು ಪ್ರಚಾರಗಳಿಗೆ ವಿವಿಧ ಸ್ತರಗಳಲ್ಲಿ ಸರಕಾರದ ನಿಯಂ ತ್ರಣದಲ್ಲಿ ವ್ಯವಸ್ಥೆಯಿರಬೇಕು.
Related Articles
Advertisement
ಈ ವರೆಗೆ ನಡೆದ ಸಂಶೋಧನೆಯ ಫಲಿತಾಂಶಗಳು ಯುವಜನರಿಗೆ ತಲುಪುವ ವ್ಯವಸ್ಥೆಗಳಿರಬೇಕು. ಯೋಗಾಭ್ಯಾಸದ ಪ್ರಯೋಜನವನ್ನು ಅನುಭವಿಸಿದ ಗಣ್ಯವ್ಯಕ್ತಿಗಳು ಅವರಿಗೆ ತಿಳಿದ ಸರಿಯಾದ ಮಾರ್ಗದಲ್ಲಿ ಜನರಿಗೆ ತಿಳಿಸಬೇಕು. ಎಲ್ಲಿಯೂ ಅತೀ ಉತ್ಪ್ರೇಕ್ಷೆಯೂ ಸಲ್ಲದು. ಇದರಿಂದ ತಪ್ಪು ಕಲ್ಪನೆಗಳು, ಸಂಶಯಗಳು, ಅನರ್ಥಗಳು ಹೆಚ್ಚಾಗುವವು ಹೊರತು ಯಾವುದೇ ಅಭಿವೃದ್ಧಿ ಇರುವುದಿಲ್ಲ. ಯೋಗವು ಅನುಭವ ಪ್ರಧಾನ ವಿಷಯ ವಾಗಿರುವುದರಿಂದ ಉತ್ತಮ ಮಟ್ಟದ ಅಭ್ಯಾಸಗಳಿಂದ ಅವರವರ ಅನುಭವಗಳನ್ನು ಇತರರಿಗೆ ಹಂಚಿ ಕೊಳ್ಳಬೇಕಾಗಿರುತ್ತದೆ. ಇದಕ್ಕಾಗಿ ಮಾಧ್ಯಮಗಳು, ಸಂಘ ಸಂಸ್ಥೆಗಳು, ಸರಕಾರಿ ವ್ಯವಸ್ಥೆಗಳು ಸರಿಯಾದ ರೀತಿಯಲ್ಲಿ ಸದಾ ಜಾಗೃತವಾಗಿದ್ದು ಉತ್ತಮ ಸಂದೇಶಗಳನ್ನು ಎಡೆಬಿಡದೆ ಕೊಟ್ಟಾಗ ಫಲಪ್ರದ ವಾಗಲು ಸಾಧ್ಯ. ಇವೆಲ್ಲವೂ ಆದಷ್ಟು ಶೀಘ್ರದಲ್ಲಿ ವೇಗವಾಗಿ ನಡೆಯುವುದು ಅಗತ್ಯ. ಅನಗತ್ಯ ವಿಳಂಬದಿಂದ ದುಷ್ಪರಿಣಾಮಗಳೇ ಹೆಚ್ಚು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. “ಇಂದಿನ ದಿನ ಸುದಿನ ನಾಳೆಗೆ ಎಂದರೆ ಅದು ಕಠಿನ’ ಎನ್ನುವ ದಾಸರವಾಣಿಯಂತೆ ಬೇಗನೆ ಕಾರ್ಯತತ್ಪರರಾದರೆ ಮುಂದಿನ ಜನಾಂಗಕ್ಕೆ ಉತ್ತಮ ಕೊಡುಗೆಯಾಗುವುದರಲ್ಲಿ ಸಂದೇಹವಿಲ್ಲ.
ಡಾ| ಕೆ. ಕೃಷ್ಣ ಶರ್ಮಾ
ಪ್ರಾಧ್ಯಾಪಕರು ಹಾಗೂ ಅಧ್ಯಕ್ಷರು, ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗ ಮಂಗಳೂರು ವಿಶ್ವವಿದ್ಯಾನಿಲಯ.