Advertisement

ಶಿರ್ವ ಡಾನ್‌ ಬೊಸ್ಕೊ ಆಂ.ಮಾ. ಶಾಲೆ : ಅಂತರಾಷ್ಟ್ರೀಯ ಯೋಗ ದಿನಾಚರಣೆ

01:59 PM Jun 21, 2021 | Team Udayavani |

ಶಿರ್ವ: ಇಲ್ಲಿನ ಡಾನ್‌ ಬೊಸ್ಕೊ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯೋಗಕ್ಷೇಮಕ್ಕಾಗಿ ಯೋಗ  ಘೋಷ ವಾಕ್ಯದೊಂದಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯೋಗ ಮಾಡುವ ಮೂಲಕ ಜೂ. 21ರಂದು ಆಚರಿಸಲಾಯಿತು.

Advertisement

ಶಿರ್ವ ಪತಂಜಲಿ ಯೋಗ ಸಮಿತಿಯ ಲ್ಯಾನ್ಸಿ ಕೋರ್ಡಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ನಮ್ಮ ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕೆಂದರು.ಶಾಲೆಯ ಪ್ರಾಂಶುಪಾಲೆ ಮರ್ಟಲ್‌ ಎಲ್‌.ಎಫ್‌.ಲೂವಿಸ್‌ ಯೋಗ ದಿನದ ಮಹತ್ವ ತಿಳಿಸಿದರು.

ಶಿರ್ವ ಪತಂಜಲಿ ಯೋಗ ಸಮಿತಿಯ ಅನಂತ್ರಾಯ ಶೆಣೈ,ವಿನೋದ್‌ ಕಬ್ರಾಲ್‌,ಉದಯ ಆಚಾರ್ಯಯೋಗ ಪ್ರಾತ್ಯಕ್ಷಿಕೆ ನೀಡಿದರು. ಕಾರ್ಯಕ್ರಮದಲ್ಲಿ ಶಿರ್ವ ಆರೋಗ್ಯ ಮಾತಾ ದೇವಾಲಯದ ಸಹಾಯಕ ಧರ್ಮಗುರು ರೆ|ಫಾ| ರೋಲ್ವಿನ್‌ ಅರಾನ್ಹ,ಉಪಪ್ರಾಂಶುಪಾಲೆ ಐರಿನ್‌ ಕಾರ್ಡೊಜಾ,ಎಲ್ಲಾ ವಿಭಾಗಗಳ ಮುಖ್ಯಸ್ಥರು,ಶಿಕ್ಷಕ ಶಿಕ್ಷಕೇತರ ವೃಂದ ಉಪಸ್ಥಿತರಿದ್ದರು.

ದೈಹಿಕ ಶಿಕ್ಷಣ ಶಿಕ್ಷಕರಾದ ಸುಜಿತ್‌ ಶೆಟ್ಟಿ,ವಿಶ್ವನಾಥ ಆಚಾರ್ಯ ಮತ್ತು ಶಿಕ್ಷಕಿಯರಾದ ಸಂದ್ಯಾ ಮತ್ತು ಸವಿತಾ ಶೆಟ್ಟಿಗಾರ್‌ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next