Advertisement

‘ಯೋಗದಿಂದ ಆರೋಗ್ಯ ಸದೃಢ’

11:55 PM Jun 21, 2019 | mahesh |

ಪುತ್ತೂರು: ಯೋಗವು ವಿಶ್ವಕ್ಕೆ ಭಾರತದ ಅನನ್ಯ ಕೊಡುಗೆ. ಯೋಗ ಶಾಸ್ತ್ರವು ಮಾನವ ಬದುಕಿನ ಪ್ರಮುಖ ಭಾಗವೆಂದು ಪರಿಗಣಿಸಿ ಜೂ. 21ರಂದು ವಿಶ್ವ ಯೋಗ ದಿನ ಎಂದು ಆಚರಿಸುತ್ತಿದ್ದೇವೆ. ಜಗತ್ತಿನಾದ್ಯಂತ ಈ ಆಚರಣೆ ನಡೆಯುತ್ತಿರುವುದು ಭಾರತೀ ಯರಿಗೆ ಹೆಮ್ಮೆಯ ವಿಚಾರ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.

Advertisement

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಹಯೋಗದಲ್ಲಿ ಆಯೋಜಿಸಲಾದ ತಾಲೂಕು ಮಟ್ಟದ ವಿಶ್ವ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಿಂದ ಇಂದು ಭಾರತ ವಿಶ್ವ ಗುರುವಾಗುವಲ್ಲಿ ದಿಟ್ಟ ಹೆಜ್ಜೆಯನ್ನಿರಿಸುತ್ತಿದೆ ಎಂದು ಹೇಳಿದ ಅವರು, ಕೇವಲ ಯೋಗವು ಈ ದಿನಕ್ಕೆ ಮಾತ್ರ ಸೀಮಿತವಾಗದೇ ಪ್ರತೀ ದಿನವೂ ಆಚರಿಸುವಂತಾಗಬೇಕು. ಇದರಿಂದ ದೈಹಿಕ, ಮಾನ ಸಿಕ ಆರೋಗ್ಯವನ್ನು ಕಾಪಾಡಿ ಕೊಳ್ಳಲು ಸಾಧ್ಯ ಎಂದು ಹೇಳಿದರು.

ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಡಿ.ಎನ್‌., ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ತಾಲೂಕು ಸಹಾಯಕ ಯುವಜನ ಸೇವಾ ಕ್ರೀಡಾಧಿಕಾರಿ ಎಂ. ಮಾಮಚ್ಚನ್‌, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ, ವಿವೇಕಾನಂದ ವಿದ್ಯಾವರ್ಧಕ ಸಂಘದ ಹಿರಿಯ ಸದಸ್ಯ ಬಿರ್ಮಣ್ಣ ಗೌಡ, ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಸದಸ್ಯ ಚಂದ್ರಶೇಖರ್‌, ವಸಂತಿ, ಸುನೀತಾ, ಭರತ್‌ ಪೈ ಮತ್ತಿತರರು ಉಪಸ್ಥಿತರಿದ್ದರು.

ಶಾಲಾ ಪ್ರಾಥಮಿಕ ವಿಭಾ ಗದ ಮುಖ್ಯ ಶಿಕ್ಷಕಿ ಸಂಧ್ಯಾ, ಕೆ.ಜಿ. ವಿಭಾಗದ ಮುಖ್ಯ ಶಿಕ್ಷಕಿ ಮಮತಾ, ದೈ.ಶಿ. ಶಿಕ್ಷಕರಾದ ಭಾಸ್ಕರ ಗೌಡ, ಗಿರೀಶ್‌, ದೀಪಕ್‌, ಹರ್ಷಿತಾ, ಆಶಾಲತಾ, ವಾಣಿಶ್ರೀ, ರಶ್ಮಿ ಪಾಲ್ಗೊಂಡಿದ್ದರು.

Advertisement

ಶಾಲೆಯ ಮುಖ್ಯ ಶಿಕ್ಷಕ ಸತೀಶ್‌ ಕುಮಾರ್‌ ರೈ ಸ್ವಾಗತಿಸಿ, ದ.ಕ. ಜಿಲ್ಲಾ ಯೋಗ ಸಂಘದ ಅಧ್ಯಕ್ಷ ರಾಮಣ್ಣ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಗಣೇಶ್‌ ಏತಡ್ಕ ಕಾರ್ಯಕ್ರಮ ನಿರ್ವಹಿಸಿದರು. ಯೋಗ ಸಂಯೋಜಕಿ ನಮಿತಾ ಅವರು ಮಕ್ಕಳಿಗೆ ಸೂರ್ಯನಮಸ್ಕಾರ ಮತ್ತು ಯೋಗದ ವಿವಿಧ ಆಯಾಮ ಹೇಳಿಕೊಟ್ಟರು.

‘ಉಲ್ಲಾಸ, ಉತ್ಸಾಹ ವೃದ್ಧಿ’
ಸುಳ್ಯ:
ಯೋಗದಿಂದ ಮಾನಸಿಕ, ದೈಹಿಕ ಸದೃಢತೆಯ ಜತೆಗೆ ರೋಗಗಳು ದೂರವಾಗುತ್ತವೆ ಹಾಗೂ ಉಲ್ಲಾಸ, ಉತ್ಸಾಹ ವೃದ್ಧಿಸುತ್ತವೆ ಎಂದು ಜಿ.ಪಂ. ಸದಸ್ಯೆ ಪುಷ್ಪಾವತಿ ಬಾಳಿಲ ಅವರು ಹೇಳಿದರು.

ಐವರ್ನಾಡು ಸ.ಪ.ಪೂ. ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿ.ಪಂ. ಸದಸ್ಯ ಎಸ್‌.ಎನ್‌. ಮನ್ಮಥ, ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಗ್ರಾ.ಪಂ. ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ, ಸದಸ್ಯರಾದ ರಾಜೀವಿ, ಸುಜಾತಾ ಪವಿತ್ರಮಜಲು, ಹಿರಿಯರಾದ ನೂಜಾಲು ಪದ್ಮನಾಭ ಗೌಡ, ಕಾಲೇಜಿನ ಪ್ರಾಂಶುಪಾಲ ಮಹಮ್ಮದ್‌ ಇಸಾಕ್‌, ಪ್ರೌಢಶಾಲಾ ಹಿರಿಯ ಶಿಕ್ಷಕ ಸೂಫಿ ಪಿ.ಐ. ಮತ್ತಿತರರು ಉಪಸ್ಥಿತರಿದ್ದರು.

ನೂಜಾಲು ಪದ್ಮನಾಭ ಗೌಡ ಅವರು ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಿದರು. ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಯು.ಡಿ. ಶೇಖರ್‌ ವಂದಿಸಿದರು. ಶಿಕ್ಷಕ ಚಿದಾನಂದ ಕೆ. ಕಾರ್ಯಕ್ರಮ ನಿರೂಪಿಸಿದರು. ಅನಂತರ ಸುಜಾತಾ ಪವಿತ್ರಮಜಲು ಮತ್ತು ಶಾಲಾ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು.

ಪುತ್ತೂರು: ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ವಿಶ್ವ ಯೋಗ ದಿನಾಚರಣೆಯಲ್ಲಿ ಶಾಸಕ ಸಂಜೀವ ಮಠಂದೂರು, ಸಹಾಯಕ ಕಮಿಷನರ್‌ ಎಚ್.ಕೆ. ಕೃಷ್ಣಮೂರ್ತಿ, ಬಿಇಒ ಸುಕನ್ಯಾ ಡಿ.ಎನ್‌. ಮತ್ತಿತರರು ಪಾಲ್ಗೊಂಡು ಯೋಗಾಭ್ಯಾಸ ಮಾಡಿದರು.

ಆರೋಗ್ಯ ಅಮೂಲ್ಯ
ಮುಖ್ಯ ಅತಿಥಿಯಾಗಿದ್ದ ಪುತ್ತೂರು ಸಹಾಯಕ ಕಮಿಷನರ್‌ ಎಚ್.ಕೆ. ಕೃಷ್ಣಮೂರ್ತಿ ಮಾತನಾಡಿ, ಹಣ, ಸಂಪತ್ತು ಎಷ್ಟೇ ಮಾನವನಲ್ಲಿ ಇದ್ದರೂ ಮಾನವನು ರೋಗಗ್ರಸ್ತನಾದರೆ ಅವೆಲ್ಲ ವ್ಯರ್ಥ. ಈ ಕಾರಣದಿಂದ ಅಮೂಲ್ಯವಾದ ಆರೋಗ್ಯ ವನ್ನು ಕಾಪಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಿತ್ಯ ಯೋಗಾಭ್ಯಾಸವನ್ನು ರೂಢಿಸಿಕೊಳ್ಳಬೇಕು. ಎಳವೆಯಿಂದಲೇ ಈ ಅಭ್ಯಾಸವನ್ನು ಕಲಿತುಕೊಳ್ಳಬೇಕು ಎಂದು ಅವರು ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next