Advertisement

ಯುಎಇ ಕನ್ನಡಿಗರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ

02:58 PM Jun 28, 2021 | Team Udayavani |

ಮುಂಬಯಿ: ಯುಎಇ ಕನ್ನಡಿಗರು ಆಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಜೂ. 25ರಂದು ಆನ್‌ಲೈನ್‌ ಝೂಮ್‌ ಆ್ಯಪ್‌ ವೇದಿಕೆಯ ಮೂಲಕ ನಡೆಸಲಾಯಿತು.

Advertisement

ಅಬುಧಾಬಿ ಕರ್ನಾಟಕ ಸಂಘ, ಕರ್ನಾಟಕ ಸಂಘ ಶಾರ್ಜಾ, ಕನ್ನಡಿಗರು ದುಬಾೖ ಕನ್ನಡ ಮಿತ್ರರು ದುಬಾೖ, ಕನ್ನಡ ಸಂಘ ಅಲಐನ್‌ ಮತ್ತು ಬಸವ ಸಮಿತಿ ಸಹಯೋಗದೊಂದಿಗೆ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಕುವೈಟ್‌, ಕತ್ತಾರ್‌, ಜರ್ಮನಿ, ಆಸ್ಟ್ರೇಲಿಯಾ ದೇಶಗಳ ಯೋಗ ಪಟುಗಳು ಭಾಗವಹಿಸಿದ್ದರು.

ಪ್ರಥಮ ಭಾಗದಲ್ಲಿ ಭಾರತದಿಂದ ಯೋಗ ಗುರು ಡಾ| ಭಾಗೀರಥಿ ಅವರ ಮಾರ್ಗದರ್ಶನದಲ್ಲಿ ಭಾಗವಹಿಸಿದ್ದ ಎಲ್ಲರು ಅವರವರ ಮನೆಗಳಲ್ಲಿ ಯೋಗ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ದ್ವಿತೀಯ ಹಂತದ ಸಭಾ ಕಾರ್ಯಕ್ರಮದಲ್ಲಿ ಗಣ್ಯರು ಹಾಗೂ ಪ್ರೇಕ್ಷಕರು ಭಾಗವಹಿಸಿದ್ದರು. ಕಾವ್ಯಾ ಯುವರಾಜ್‌ ನಿರೂಪಣೆಗೈದರು. ತ್ರೀವೇಣಿ  ಪ್ರಾರ್ಥನೆಗೈದರು. ಕರ್ನಾಟಕ ಸಂಘ ಶಾರ್ಜಾ ಇದರ ಪೂರ್ವ ಅಧ್ಯಕ್ಷ ಬಿ. ಕೆ. ಗಣೇಶ್‌ ರೈ ಸ್ವಾಗತಿಸಿದರು.

ಯೋಗದ ತರಭೇತಿಯ ಪಯಣದ ಅನುಭವವನ್ನು ಗಿರೀಶ್‌ ಕಲಕುಂದ ಹಂಚಿಕೊಂಡರು. ದೀಪಿಕಾ ಸಂತೋಷ್‌ ಅವರು ಯೋಗ ಗುರು ಡಾ| ಭಾಗೀರಥಿ ಅವರನ್ನು ಪರಿಚಯಿಸಿದರು. ಕಾವ್ಯಾ ಯುವರಾಜ್‌ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕದ ನಿವೃತ್ತ ಡಿ. ಜಿ. ಪಿ. ಶಂಕರ್‌ ಮಹದೇವ್‌ ಬಿದರಿಯವರ ಪರಿಚಯದ ಬಳಿಕ ಮುಖ್ಯ ಅತಿಥಿಗಳು ಯೋಗದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.

ಅತಿಥಿಗಳಾಗಿ ಆಗಮಿಸಿದ್ದ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಕರ್ನಾಟಕ ಸಂಘ ಶಾರ್ಜಾ ಇದರ ಅಧ್ಯಕ್ಷ ಎಂ. ಇ. ಮೂಳೂರು, ಕನ್ನಡ ಮಿತ್ರರು ದುಬಾೖ ಅಧ್ಯಕ್ಷ ಶಶಿಧರ್‌ ನಾಗರಾಜಪ್ಪ, ಕನ್ನಡಿಗರು  ದುಬೈ ಅಧ್ಯಕ್ಷೆ ಉಮಾದೇವಿ ವಿದ್ಯಾಧರ್‌, ಮೋಹನ್‌ ನರಸಿಂಹಮೂರ್ತಿ ತಮ್ಮ ಸಂದೇಶ ವನ್ನು ನೀಡಿದರು.

Advertisement

ಕಾರ್ಯಕ್ರಮದಲ್ಲಿ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯು.ಎ.ಇ. ಘಟಕ, ಜೆ. ಎಸ್‌. ಎಸ್‌. ವಿದ್ಯಾಸಂಸ್ಥೆ, ಬಿಲ್ಲವಾಸ್‌ ದುಬಾೖ, ಅಂಚಿಗೇಲೆ ಸಮಾಜ, ಕರುನಾಡ ಕನ್ನಡಿಗರು ಯು.ಎ.ಇ., ಹೆಮ್ಮೆಯ ಕನ್ನಡಿಗರು ದುದುಬಾೖ, ಗಲ್ಫ್ ಕನ್ನಡ ಮೂವೀಸ್‌, ಅಧ್ಯಾತ್ಮ ಸಂಘ ಭಾರತ ಯು.ಎ.ಇ., ರಕ್ತದಾನ ಶಿಬಿರದ ಆಯೋಜಕರು ಭಾಗವಹಿಸಿದ್ದರು. ದೀಪಾ ನಾಯರ್‌ ಅವರ ಪುತ್ರಿ ಎಳೆಯ ಯೋಗ ಪ್ರತಿಭೆ ಅಂಚಿತಾ ನಾಯರ್‌ ಅವರಿಂದ ಯೋಗ ಪ್ರದರ್ಶನ ಏರ್ಪಡಿಸಲಾಗಿತ್ತು. ಕರ್ನಾಟಕ ಸಂಘ ಶಾರ್ಜಾ ಇದರ ನಿಕಟಪೂರ್ವ ಅಧ್ಯಕ್ಷ ಆನಂದ ಬೈಲೂರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next