Advertisement

ಗೋವಾ: ಆಗುಂದಾ ಕೋಟೆಯ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗಿಯಾದ ಸಿಎಂ ಪ್ರಮೋದ್ ಸಾವಂತ್

10:33 AM Jun 21, 2021 | Team Udayavani |

ಪಣಜಿ: ಯೋಗವು ಜಗತ್ತಿಗೆ ಭಾರವು ನೀಡಿದ ಅಮೂಲ್ಯ ಕೊಡುಗೆಯಾಗಿದೆ. ಕೋವಿಡ್ ಬಿಕ್ಕಟ್ಟನ್ನು ಎದುರಿಸಲು ಯೋಗವು ಲಕ್ಷಾಂತರ ಜನರಿಗೆ ಸಹಾಯ ಮಾಡಿದೆ. ನಾವೆಲ್ಲರೂ ಯೋಗವನ್ನು ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿಸೋಣ ಎಂದು ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಅಭಿಪ್ರಾಯಪಟ್ಟಿದ್ದಾರೆ.

Advertisement

ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಉತ್ತರ ಗೋವಾದ ಆಗುಂದಾ ಕೋಟೆಯಲ್ಲಿ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಪಾಲ್ಗೊಂಡು ಅವರು ಯೋಗ ವ್ಯಾಯಾಮ ಮಾಡಿದರು. ನಮ್ಮನ್ನು ಆರೋಗ್ಯವಾಗಿರಿಸಲು ಮತ್ತು ಸದೃಢವಾಗಿರಲು ನಾವು ಯೋಗವನ್ನು ದೈನಂದಿನ ಜೀವನದ ಭಾಗವಾಗಿಸಬೇಕು ಎಂದು ಮುಖ್ಯಮಂತ್ರಿ ಸಾವಂತ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಅಂತಾರಾಷ್ಟ್ರೀಯ ಯೋಗ ದಿನ: ಹಿಮಪಾತದ ನಡುವೆ 18 ಸಾವಿರ ಅಡಿ ಎತ್ತರದಲ್ಲಿ ಯೋಧರಿಂದ ಯೋಗ

ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ ಪ್ರತಿಕ್ರಿಯೆ ನೀಡಿ- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಯೋಗದ ಮಹತ್ವತೆಯ ಬಗ್ಗೆ ಜಗತ್ತಿಗೆ ಕಲಿಸಿದೆ, ಇದರಿಂದಾಗಿ ಹಲವಾರು ದೇಶಗಳು ಇದನ್ನು ತಮ್ಮ ಜೀವನಶೈಲಿಯ ಭಾಗವಾಗಿ ಅಳವಡಿಸಿಕೊಂಡಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next