Advertisement

ವಿವಿಧ ಕ್ಷೇತ್ರಗಳ ಸಾಧಕ ಮಹಿಳೆಯರಿಗೆ ಸಮ್ಮಾನ

07:40 PM Apr 06, 2021 | Team Udayavani |

ಉತ್ತರ ಕರ್ನಾಟಕ ಬಳಗ ಕತಾರ್‌ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಸಾಧಕ ಮಹಿಳೆಯರ ಸಮ್ಮಾನ ಮತ್ತು ಮಾತುಕತೆ ಕಾರ್ಯಕ್ರಮ ಮಾ. 19ರಂದು ವರ್ಚುವಲ್‌ ಮೂಲಕ ನಡೆಯಿತು.

Advertisement

ಉತ್ತರ ಕರ್ನಾಟಕ ಬಳಗ ಕತಾರ್‌ನ ಅಧ್ಯಕ್ಷ ಶಶಿಧರ್‌ ಹೆಬ್ಟಾಳ್‌ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಧರ ಕುಲಕರ್ಣಿ ದಂಪತಿ ಪ್ರಾರ್ಥನೆ ಗೀತೆಯನ್ನು ಹಾಡಿದರು. ಪ್ರೀತಿ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಸಿಬಂದಿ ಲೀಲಾ ಗಣೇಶ್‌ ಮತ್ತು ಸಂಗಡಿಗರಿಂದ ಜಾನಪದ ಗೀತೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಅನ್ನಪೂರ್ಣ ಮುತ್ತುರಾಜ್‌ ಅತಿಥಿಗಳನ್ನು ಪರಿಚಯಿಸಿ, ಸಾಧಕ ಮಹಿಳೆಯರನ್ನು ಅಭಿನಂದಿಸಿದರು.

ಮೈಸೂರಿನ ಡಿವೈಎಸ್‌ಪಿ ಪ್ರಿಯದರ್ಶಿನಿ ಸಾನಿಕೊಪ್ಪ, ಚಲನಚಿತ್ರ ನಟಿ ಅಭಿನಯಾ, ಆಸ್ಟ್ರೇಲಿಯಾದ ಸೈಂಟ್‌ ಮದರ್‌ ತೆರೇಸಾ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ| ಆರ್‌. ವಿಜಯ ಸರಸ್ವತಿ, ಕತಾರ್‌ನ ಬ್ರಿಲಿಯೆಂಟ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ನ ಪ್ರಾಂಶುಪಾಲೆ ಆಶಾ ಶಿಜು, ಬೆಂಗಳೂರಿನ ಮಕ್ಕಳ ತಜ್ಞೆ ಆಶಾ ಬೆನಕಪ್ಪ, ಸಮಾಜ ಸೇವಕಿ, ಸೈಂಟ್‌ ಮದರ್‌ ತೆರೇಸಾ ವಿಶ್ವವಿದ್ಯಾನಿಲಯದ ಸಿಂಡಿಕೇಟ್‌ ಸದಸ್ಯೆ ಜ್ಯೋತಿ ಕುಲಕರ್ಣಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಇಟಲಿಯ ಜಾನ್ಹಾ ಕನ್ನಡ ಹಾಡನ್ನು ಹಾಡಿ ರಂಜಿಸಿದರು.

Advertisement

ಇದೇ ಸಂದರ್ಭದಲ್ಲಿ  ವಿವಿಧ ಕ್ಷೇತ್ರದ ಸಾಧಕ ಮಹಿಳೆಯರಾದ ಹಿರಿಯ ಸಾಹಿತಿ ಇಟಲಿಯ ಜಯಮೂರ್ತಿ,  ಕರ್ನಾಟಕದ ಪತ್ರಕರ್ತೆ ಶೋಭಾ ಎಂ.ಸಿ., ಧಾರವಾಡದ ವಿದುಷಿ ಶ್ರುತಿ ಕುಲಕರ್ಣಿ, ವಿಜಯಪುರ ಒಬವ್ವ ಪಡೆಯ ಜಯಂತಿ ನಾಯಕ್‌, ಬೆಂಗಳೂರಿನ ಕೋವಿಡ್‌ ವಾರಿಯರ್‌ ಜೆಸಿಂತಾ ಎಸ್‌. ಅವರನ್ನು ಸಮ್ಮಾನಿಸಲಾಯಿತು.  ಲಕ್ಷ್ಮೀ ಲಿಂಗದಳ್ಳಿ ದುಬೈ ಮಾತನಾಡಿ ಶುಭಹಾರೈಸಿದರು.

ಅಧ್ಯಕ್ಷ ಶಶಿಧರ್‌ ಹೆಬ್ಟಾಳ್‌ ಮಾತನಾಡಿ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ  ವಿಶ್ವ ಮಹಿಳೆಯರ ಸಂಗಮವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದ

ಆರಂಭದಲ್ಲಿ ಸ್ವಾಗತ ಭಾಷಣ ಮಾಡಿದ ಪ್ರತೀಕ್ಷಾ ದಿವಾಕರ್‌ ಕೊನೆಗೆ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next