Advertisement
ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಸುಮಾರು 12ರಿಂದ 15 ವೈನರಿಗಳು ಭಾಗವಹಿಸಿ ಸುಮಾರು 150ಕ್ಕೂ ಹೆಚ್ಚುಬ್ರ್ಯಾಂಡ್ಗಳನ್ನು ಉತ್ಸವದಲ್ಲಿ ಪ್ರದರ್ಶಿಸಿತು. ಹಳೆಯ ವೈನ್ ಪ್ರದೇಶಗಳಾದ ಯುರೋಪ್ ಖಂಡ ಮತ್ತು ಹೊಸ ವೈನ್ ಪ್ರದೇಶಗಳಾದ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಚಿಲ್ಲಿ, ಅಮೆರಿಕ ಮೊದಲಾದ ದೇಶಗಳ ವೈನ್‌ಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ.
ವೈನ್ ಉತ್ಸವದಲ್ಲಿ ಮಳಿಗೆಯನ್ನು ಹಾಕಿದ್ದ ಬೆಂಗಳೂರಿನ ಗೌತಮ್ ಎಂಬವರ ಬಳಿ ಸ್ಪೇನ್, ಸೌತ್ ಆಫ್ರಿಕಾ, ಆಸ್ಟ್ರೇಲಿಯಾ, ಫ್ರಾನ್ಸ್ ಸಹಿತ ಹತ್ತು ದೇಶಗಳ ವಿವಿಧ ಬ್ರ್ಯಾಂಡ್ ಗಳ ವೈನ್‌ಗಳನ್ನು ಮಾರಾಟಕ್ಕಿಡಲಾಗಿತ್ತು. ಮಳಿಗೆಯಲ್ಲಿ ರೈಡಿಂಗ್ ಹೈ ಎನ್ನುವ ಬ್ರ್ಯಾಂಡ್ ನ 2008ರಷ್ಟು ಹಳೆಯ ವೈನ್ ಎಲ್ಲರ ಆಕರ್ಷಣೆಯಾಗಿತ್ತು.
Related Articles
ವೈನ್ ಮೇಳದ ಪ್ರವೇಶ ದರ 20 ರೂ. ನಿಗದಿಪಡಿಸಲಾಗಿದೆ. ಉತ್ಸವದಲ್ಲಿ ಎಲ್ಲ ವೈನ್ ಬ್ರ್ಯಾಂಡ್ ಮಾರಾಟಗಳ ಮೇಲೆ ಶೇ.10ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಅಲ್ಲದೆ ವೈನ್ ಮೇಳ ನಡೆಯುವ ಮೂರು ದಿವಸವೂ ಸಂಜೆ ವಿವಿಧ ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
Advertisement
ಕಳೆದ ಬಾರಿ 20 ಲಕ್ಷ ರೂ. ಆದಾಯವೈನ್ ಬಳಕೆಯನ್ನು ಉತ್ತೇಜಿಸುವ ಹಾಗೂ ವೈನ್ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಳೆದ ಬಾರಿ ನಗರದಲ್ಲಿ ಆಯೋಜಿಸಲಾಗಿದ್ದ ವೈನ್ ಮೇಳದಲ್ಲಿ ದೊರೆತ ಉತ್ತಮ ಸ್ಪಂದನೆಯ ಹಿನ್ನೆಲೆಯಲ್ಲಿ ಈ ಬಾರಿಯೂ ಯೋಜಿಸಲಾಗಿದೆ. ಕಳೆದ ಬಾರಿ 20 ಲಕ್ಷ ರೂ. ಆದಾಯವಾಗಿತ್ತು. ಈಗಷ್ಟೇ ಪ್ರದರ್ಶನ ಆರಂಭಗೊಂಡಿದೆ. ತುಂಬಾ ಜನರು ಇಲ್ಲಿ ಸೇರಿದ್ದಾರೆ. ಮಂಗಳೂರು ಜನರಿಂದ ಅದ್ಭುತ ಸ್ಪಂದನೆ ದೊರೆಯುವ ನಿರೀಕ್ಷೆಯಲ್ಲಿದ್ದೇವೆ.
– ರವೀಂದ್ರ ಶಂಕರ್ ಮಿರ್ಜೆ, ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ