Advertisement

ಕಲಬುರಗಿ ತೊಗರಿಗೆ ಅಂತಾರಾಷ್ಟ್ರೀಯ ಮಾನ್ಯತೆ

06:45 AM Jan 11, 2018 | |

ಕಲಬುರಗಿ: ಶ್ರೇಷ್ಠ ಗುಣಮಟ್ಟ ಹಾಗೂ ಹಲವು ವೈಶಿಷ್ಟé ಹೊಂದಿರುವ ಬಿಸಿಲು ನಾಡಿನ ಕಲಬುರಗಿಯ ತೊಗರಿಗೆ ಈಗ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾನ್ಯತಾ ಪ್ರಮಾಣಪತ್ರ ದೊರಕಲಿದೆ. 

Advertisement

ತೊಗರಿಯಲ್ಲಿನ ವಿಶಿಷ್ಠತೆ ಆಧರಿಸಿ ಭಾರತ ಸರ್ಕಾರದಿಂದ ಭೌಗೋಳಿಕ ಸೂಚಕ (ಜಿಯಾಗ್ರಾಫಿಕಲ್‌ ಇಂಡಿಕೇಟರ್‌ ಯುನಿಕ್‌ ಹಿಸ್ಟರಿ) ಪ್ರಮಾಣ ಪತ್ರ ದೊರಕುತ್ತಿದೆ. ಇನ್ಮುಂದೆ ಬ್ಯಾಡಗಿ ಮೆಣಸಿನಕಾಯಿ, ನಂಜನಗೂಡಿನ ಬಾಳೆ, ಕೂರ್ಗದ ಕಿತ್ತಳೆ, ದೇವನಹಳ್ಳಿಯ ಚಕ್ಕೋತ, ಮೈಸೂರಿನ ವೀಳ್ಯದೆಲೆ ಜತೆ ಕಲಬುರಗಿ ತೊಗರಿ ಸೇರಿಕೊಳ್ಳಲಿದೆ. 

ಸುದ್ದಿಗೋಷ್ಠಿಯಲ್ಲಿ ಕೃಷಿ ಮಹಾವಿದ್ಯಾಲಯದ ಡೀನ್‌ ಡಾ| ಜೆ.ಆರ್‌.ಪಾಟೀಲ್‌ ಕಲಬುರಗಿ ತೊಗರಿಗೆ ಭೌಗೋಳಿಕ ಸೂಚಕ ಪ್ರಮಾಣ ಪತ್ರ ದೊರೆಯುತ್ತಿರುವ ವಿಷಯ ಪ್ರಸ್ತಾಪಿಸಿದರು. ರಾಯಚೂರು ಕೃಷಿ ವಿಶ್ವವಿದ್ಯಾಲಯ,ಕರ್ನಾಟಕ ತೊಗರಿ ಅಭಿವೃದಿಟಛಿ ಮಂಡಳಿ ಜತೆಗೂಡಿ ಹೈದ್ರಾಬಾದ್‌ನ ಇಕ್ರಿಸ್ಯಾಟ್‌ ಸಂಸ್ಥೆಯ ಐಪಿಎಫ್‌ಸಿ ಸಹಾಯದೊಂದಿಗೆ ಕಲಬುರಗಿ ತೊಗರಿಯ ಇತಿಹಾಸ,ತೊಗರಿಯಲ್ಲಿನ ವಿಶೇಷ ಪೌಷ್ಟಿಕಾಂಶ, ತೊಗರಿ ಬೆಳೆಯುವ ಮಣ್ಣಿನ ವೈಶಿಷ್ಟéತೆ ಸೇರಿ ಸಮಗ್ರ ಆಯಾಮದಿಂದ ರೂಪಿಸಲಾದ ಸಂಶೋಧನಾ ವರದಿ ಆಧಾರದ ಮೇಲೆ ಮಾನ್ಯತೆ ದೊರಕುತ್ತಿದೆ. ಕೆಲವೇ ದಿನಗಳಲ್ಲಿ ಕೇಂದ್ರದಿಂದ ಈ ಕುರಿತು ಅಧಿಕೃತ ಆದೇಶ ಹೊರ ಬೀಳಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next