Advertisement

ಐಎಂಡಿಗೆ ಅಂತಾರಾಷ್ಟ್ರೀಯ ಮಾನ್ಯತೆ: ಡಾ|ಹೆಗ್ಗಡೆ ಸ್ವೀಕಾರ

03:45 AM Jun 28, 2017 | Team Udayavani |

ಬೆಳ್ತಂಗಡಿ: ಮೈಸೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್‌ಸ್ಟಿಟ್ಯೂಟ್‌ ಫಾರ್‌ ಮ್ಯಾನೇಜ್‌ಮೆಂಟ್‌ ಡೆವಲಪ್‌ಮೆಂಟ್‌ ಸಂಸ್ಥೆ (ಎಸ್‌ಡಿಎಂ ಐಎಂಡಿ)ಗೆ ದೊರೆತ ಅಮೆರಿಕದ ಪ್ರತಿಷ್ಠಿತ ಎಸಿಬಿಎಸ್‌ಪಿ ಮಾನ್ಯತೆಯನ್ನು ಸೋಮವಾರ ಅಮೆರಿಕದ ಅನಹೆಮ್‌ ನಗರದಲ್ಲಿ ನಡೆದ ಸಮಾರಂಭದಲ್ಲಿ ಎಸ್‌ಡಿಎಂ ಐಎಂಡಿ ಸಂಸ್ಥೆಯ ಅಧ್ಯಕ್ಷ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಸ್ವೀಕರಿಸಿದರು.

Advertisement

ಡಾ| ಹೆಗ್ಗಡೆ ಅವರು ಐಎಂಡಿ ಸಂಸ್ಥೆಯ ನಿರ್ದೇಶಕರಾದ ಡಾ| ಎನ್‌.ಆರ್‌. ಪರಶುರಾಮನ್‌ ಅವರೊಂದಿಗೆ ಚೀಫ್‌ ಅಕ್ರೆಡಿಟೇಶನ್‌ ಅಧಿಕಾರಿ ಡಾ| ಸ್ಟೀವ್‌ ಪಾಸ್ಕೆìಲ್‌, ಬೋರ್ಡ್‌ ಆಫ್‌ ಕಮಿಷನರ್ಸ್‌ನ ಅಧ್ಯಕ್ಷ ಡಾ| ರೇ ಎಲ್ಡಿ†ಡ್ಜ್ ಅವರಿಂದ ಮಾನ್ಯತೆಯ ಪ್ರಮಾಣಪತ್ರವನ್ನು ಸ್ವೀಕರಿಸಿದರು.

ಮೈಸೂರಿನ ಎಸ್‌ಡಿಎಂಐಎಂಡಿ ಪೋಸ್ಟ್‌ ಗ್ರಾಜುಯೇಟ್‌ ಡಿಪ್ಲೊಮಾ ಇನ್‌ ಮ್ಯಾನೇಜ್‌ ಮೆಂಟ್‌ (ಪಿಜಿಡಿಎಂ) ಕೋರ್ಸ್‌ಗೆ ಅಕ್ರೆಡಿಟೇಷನ್‌ ಕೌನ್ಸಿಲ್‌ ಫಾರ್‌ ಬಿಸಿನೆಸ್‌ ಸ್ಕೂಲ್ಸ್‌ ಆ್ಯಂಡ್‌ ಪ್ರೋಗ್ರಾಮ್ಸ್‌ (ಎಸಿಬಿಎಸ್‌ಪಿ) ಯುಎಸ್‌ಎ ಅವರಿಂದ ಮಾನ್ಯತೆ ದೊರಕಿದೆ.

ಎರಡು ಮಾನ್ಯತೆ
ಭಾರತದಲ್ಲಿ ಇರುವ ಬಿ – ಶಾಲೆಗಳ ಪೈಕಿ ಯುರೋಪಿಯನ್‌ ಫೌಂಡೇಶನ್‌ ಫಾರ್‌ ಮ್ಯಾನೇಜ್‌ಮೆಂಟ್‌ ಡೆವಲಪ್‌ಮೆಂಟ್‌ (ಇಎಫ್‌ಎಂಡಿ) ಮತ್ತು ಎಸಿಬಿಎಸ್‌ಪಿ – ಈ ಎರಡೂ ಮಾನ್ಯತೆಗಳನ್ನು ಪಡೆದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಎಸ್‌ಡಿಎಂ ಐಎಂಡಿ ಪಾತ್ರವಾಗಿದೆ. ಜಾಗತಿಕ ಗುಣಮಟ್ಟದ ಮಾನದಂಡಗಳನ್ನು ಹಾಗೂ ಅಂತಾರಾಷ್ಟ್ರೀಯ ದೃಷ್ಟಿಕೋನ ವನ್ನು ಹೊಂದಿರುವ ಉತ್ತಮ ಕಲಿಕೆಯ ವಾತಾವರಣವನ್ನು ಈ ಮಾನ್ಯತೆಗಳು ಇಲ್ಲಿನ ವಿದ್ಯಾರ್ಥಿಗಳಿಗೆ ಒದಗಿಸಿಕೊಡಲಿವೆ.

ವಿದ್ಯಾರ್ಥಿಗಳಿಗೆ ವರದಾನ
ಈ ಮಾನ್ಯತೆಯಿಂದ ಎಸ್‌ಡಿಎಂಐ ಎಂಡಿ ಸಂಸ್ಥೆಯು ಎಸಿಬಿಎಸ್‌ಪಿಯಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳ  “ಜಾಗತಿಕ ಶಿಕ್ಷಣ ಸಮೂಹದ’ ಒಂದು ಭಾಗವಾಗಿ ಗುರುತಿಸಲ್ಪಡುತ್ತದೆ. ಹಾಗೆಯೇ ವಿನಿಮಯ ಕಾರ್ಯಕ್ರಮ ಗಳನ್ನು, ಸಂಶೋಧನಾ ಕಾರ್ಯಕ್ರಮ ಗಳನ್ನು ನಡೆಸಲು ಮತ್ತು ಸಾಂಸ್ಕƒತಿಕ ಪುಷ್ಟೀಕರಣ ಹೊಂದಲು ಈ ಮಾನ್ಯತೆ ಸಹಾಯಕವಾಗಲಿದೆ.

Advertisement

ನಿರ್ವಹಣಾ ಶಿಕ್ಷಣ ಕ್ಷೇತ್ರದಲ್ಲಿ, ಉದ್ಯಮ ವರ್ಗದವರೊಂದಿಗೆ ಸಂವಹನ ಹಾಗೂ ಉದ್ಯೋಗ, ವಿಶ್ವ ಮಟ್ಟದ ಮೂಲಸೌಕರ್ಯ, ಉತ್ತಮ ಶಿಕ್ಷಣ ಮಟ್ಟ ಹಾಗೂ ಧರ್ಮ ಸ್ಥಳದ ಸಂಸ್ಕƒತಿಯಿಂದ ದೊರೆತ ಮೌಲ್ಯ ಗಳನ್ನು ಅಳವಡಿಸಿಕೊಂಡಿರುವ ಎಸ್‌ಡಿಎಂ ಐಎಂಡಿ ಸಂಸ್ಥೆಯು ಅಂತಾರಾಷ್ಟ್ರೀಯ ಮಾನ್ಯತೆಯನ್ನು ಗಳಿಸಿದೆ ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬೋಧನೆಗೆ ಅವಕಾಶ
ಎಸಿಬಿಎಸ್‌ಪಿಯಿಂದ ದೊರೆತ ಮಾನ್ಯತೆಯು ಪಿಜಿಡಿಎಂ ಕಾರ್ಯ ಕ್ರಮದ ಯುವ ನಿರ್ವಹಣಾ ವಿದ್ಯಾರ್ಥಿಗಳಿಗೆ ವಿಶ್ವಮಟ್ಟದಲ್ಲಿ ಉದ್ಯೋಗ ಗಳಿಸುವಲ್ಲಿ ಯೋಗ್ಯರನ್ನಾಗಿಸುವುದು, ತಮ್ಮ ನಾಯಕತ್ವ ಗುಣಗಳು ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದಿಂದ ಸಂಬಂಧಿತ ವಿಷಯಗಳ ಸಮಸ್ಯೆಗಳಿಗೆ ಸಮಾಧಾನ ಹುಡುಕುವುದು ಮತ್ತು ಸಂಸ್ಥೆಯ ಅಧ್ಯಾಪಕರಿಗೆ ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯಗಳಿಗೆ ಬೋಧಿಸಲು ಅವಕಾಶಗಳನ್ನು ಗಳಿಸಿಕೊಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next