ಮಣಿಪಾಲ: ಮಾಹೆ ವಿ.ವಿ. ಹಾಗೂ ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್ (ಎಂಸಿಒಎನ್) ವರ್ಚುವಲ್‌ನಲ್ಲಿ ಮಣಿಪಾಲ ಇಂಟರ್ ನ್ಯಾಶನಲ್ ರಿಸರ್ಚ್ ಕಾನ್‌ಕ್ಲೇವ್ (ಎಂಐಎನ್‌ಆರ್‌ಸಿ) ಹಮ್ಮಿಕೊಂಡಿದೆ.
ಜ. 19ರಂದು ಕೆಎಂಸಿಯ ಡಾ| ಟಿಎಂಎ ಪೈ ಸಭಾಂಗಣದಲ್ಲಿ ವರ್ಚುವಲ್ ವ್ಯವಸ್ಥೆ ಮೂಲಕ ಕಾನ್‌ಕ್ಲೇವ್‌ಗೆ ಚಾಲನೆ ಸಿಕ್ಕಿದೆ.
ಇಂಡಿಯನ್ ನರ್ಸಿಂಗ್ ಕೌನ್ಸಿಲ್‌ನ ಕನ್ಸಲ್ಟೆಂಟ್ ಡಾ| ಪುನೀತಾ ಇಝಿಲರಸ್ ಮುಖ್ಯ ಅತಿಥಿಯಾಗಿ ಮಾತನಾಡಿ, ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಂಡು ವಿವಿಧ ಕ್ಷೇತ್ರದಲ್ಲಿ ಆಗಿರುವ ಭಾಷಾಂತರ ಸಂಶೋಧನೆಯು ಉತ್ತಮ ಗುಣಮಟ್ಟದ ಸಂಶೋಧನೆಗಳನ್ನು ಪಡೆಯುವಂತೆ ಮಾಡಿದೆ. ನರ್ಸಿಂಗ್ ಕ್ಷೇತ್ರದಲ್ಲಿ ಆಗಬೇಕಿರುವ ಸಂಶೋಧನೆಗಳ ಕುರಿತು ಬೆಳಕು ಚೆಲ್ಲಿದರು. ನರ್ಸಿಂಗ್ ಕ್ಷೇತ್ರದ ಸಂಶೋಧನೆಯಲ್ಲಿ ತೊಡಗಿರುವವರು ಆರೋಗ್ಯ ಕ್ಷೇತ್ರದ ನೀತಿ ನಿರೂಪಣೆಯಲ್ಲೂ ಪ್ರಮುಖ ಪಾತ್ರ ವಹಿಸುವಂತಾಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಹೆ ಕುಲಪತಿ ಲೇ| ಜ| ಡಾ| ವೆಂಕಟೇಶ್ ಮಾತನಾಡಿ, ಶೈಕ್ಷಣಿಕ ಸಂಸ್ಥೆಗಳಲ್ಲಿ, ಅದರಲ್ಲೂ ವಿಶೇಷವಾಗಿ ಆರೋಗ್ಯ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಇನ್ನಷ್ಟು ಹೆಚ್ಚಬೇಕು. ಅಂತರ್ ಶೀಸ್ತೀಯ ಸಹಯೋಗ, ಪರಿಶ್ರಮ ಹಾಗೂ ನೆಟ್‌ವರ್ಕಿಂಗ್ ಈ ಮೂರು ಅಂಶಗಳನ್ನು ಸೂಕ್ತ ರೀತಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಂಶೋ ಧನೆಯನ್ನು ಹೊರತರಲು ಸಾಧ್ಯವಿದೆ ಎಂದರು.
ಕಮ್ಯೂನಿಟಿ ಸೆಟ್‌ಅಪ್ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಯುವ ಜನತೆ ಹೆಚ್ಚಿನ ಆವಿಷ್ಕಾರ ಆಧಾರಿತ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮ ಸಂಘಟನೆಯ ಅಧ್ಯಕ್ಷ ಡಾ| ಜುದಿತ್ ಎ. ನರೊನ್ಹಾ ಸ್ವಾಗತಿಸಿದರು.ಕಮ್ಯೂನಿಟಿ ಹೆಲ್ತ್ ನರ್ಸಿಂಗ್‌ನ ಸಹಾಯಕ ಪ್ರಾಧ್ಯಾ ಪಕಿ ಜಯಲಕ್ಷ್ಮೀ ಕೆ. ವಂದಿಸಿದರು. ಮಣಿಪಾಲ್ ಸ್ಕೂಲ್ ಆಫ್ ನರ್ಸಿಂಗ್‌ನ ಸಹಾಯಕ ಉಪನ್ಯಾಸಕ ಇದಿತ್ ಜೋವಿತ್ ಬಂಗೇರ ಕಾರ್ಯಕ್ರಮ ಆಯೋಜಿಸಿದ್ದರು.
ಚೈಲ್ಡ್ ಹೇಲ್ತ್ ನರ್ಸಿಂಗ್ ವಿಭಾಗದ ಪ್ರಾಧ್ಯಾಪಕ ಡಾ| ಅನೀಸ್ ಜಾರ್ಜ್ ಅವರು ಭಾಷಾಂತರ ಸಂಶೋಧನೆ ಕುರಿತು ವಿಶೇಷ ಮಾಹಿತಿ ನೀಡಿದರು. ಈ ಕಾನ್‌ಕ್ಲೇವ್ ಜ.22ರವರೆಗೆ ನಡೆಯಲಿದೆ.