Advertisement
ಸುಂದರ ದೇಶ ಮತ್ತು ಫ್ಯಾಶನ್ ನಾಡು ಎಂದೇ ಖ್ಯಾತಿ ಪಡೆದಿದೆ ಫ್ರಾನ್ಸ್ ದೇಶ. ರಾಜಧಾನಿ ಪ್ಯಾರಿಸ್ ಸಿರಿವಂತರ ಸ್ವರ್ಗವಾಗಿದೆ, ರಸಿಕರ ಪಾಲಿಗೆ ಅಗ್ಗವಾಗಿ ಲಭ್ಯ. ಸಿಯಾನಾ ನದಿ ನಗರವನ್ನು ಸುತ್ತುವರಿದಿದ್ದು ನಗರದ ನಡುವೆ ಧುತ್ತೆಂದು ಎದ್ದು ನಿಂತಿದೆ ಜಗತ್ ಪ್ರಸಿದ್ಧ ಐಫೆಲ್ ಟವರ್. ಪ್ಯಾರಿಸ್ ನಗರದಿಂದ ಪಶ್ಚಿಮಕ್ಕೆ 276 ಕಿ.ಮೀ. ದೂರದಲ್ಲಿ ಕಡಲ ಕಿನಾರೆಯಲ್ಲಿ ಮನೋಹರ ಸೌಂದರ್ಯಗಳೊಂದಿಗೆ ಒಂದು ನಗರವಿದೆ ಅದುವೇ ಡೀಪಿ ನಗರ. ಫ್ರೆಂಚ್ ಉಚ್ಚಾರದಲ್ಲಿ ಝಿಯಪ್. ಜೋವಿಯಲ್ ಮತ್ತು ಲೇಖಕ ದಿನೇಶ ಹೊಳ್ಳ
Related Articles
ಈ ಸಲ ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾಗಿರುವ ಕೋಳಿ ಅಂಕದ ಕುರಿತ ಗಾಳಿಪಟವನ್ನು ಈ ಉತ್ಸವಕ್ಕೋಸ್ಕರ ರಚಿಸಿಲಾಗಿದೆ. ಭಾರತೀಯ ಸಂಸ್ಕೃತಿಯನ್ನು ಗಾಳಿಪಟಗಳ ಮೂಲಕ ಜಗತ್ತಿಗೇ ಪರಿಚಯಿಸುವುದು ಟೀಮ್ ಮಂಗಳೂರು ತಂಡದ ಉದ್ದೇಶವಾಗಿದ್ದು ಜಗತ್ತಿನ 12 ದೇಶಗಳ ಅಂತರಾಷ್ಟ್ರೀಯ ಗಾಳಿಪಟ ಉತ್ಸವಗಳಲ್ಲಿ ಭಾಗವಹಿಸಿದ ಕೀರ್ತಿ ಟೀಮ್ ಮಂಗಳೂರು ತಂಡಕ್ಕೆ ಲಭಿಸಿದೆ. ಗಾಳಿಪಟ ಹಾರಾಟದೊಂದಿಗೆ ಭಾರತದ ಸಂಸ್ಕೃತಿ, ಪ್ರಕೃತಿ, ಜಾನಪದ ನೃತ್ಯ ಮುಂತಾದವುಗಳ ಬಗ್ಗೆ ರೇಖಾಚಿತ್ರಗಳ ಕಲಾಕೃತಿಯನ್ನು ಪ್ರದರ್ಶನ ಮಾಡಲಾಗುತ್ತಿದೆ.
Advertisement
ನಿಜವಾದ ನಾಗರೀಕತೆಡೀಪಿ ನಗರವು ಅತೀ ಸುಂದರ ಹಾಗೂ ಸ್ವತ್ಛತೆಯ ಸಂಕೀರ್ಣವಾಗಿದೆ. ಒಂದು ಕಡೆ ನಗರ ಮತ್ತು ಇನ್ನೊಂದು ಕಡೆ ಸಾಗರ. ನಗರದ ನಡುವೆ ವೃತ್ತಾಕಾರದಲ್ಲಿ ನೀರು ತುಂಬಿದೆ. ಒಂದಷ್ಟು ದೋಣಿಗಳು ನಿಂತಿರುತ್ತವೆ. ನಗರದ ಒಂದು ಕಡೆ ಪುರಾತನ ಟರೆಲ್ (ಚಾಪೆಲ್) ಇದ್ದು ಇನ್ನೊಂದು ಕಡೆ ಎತ್ತರದಲ್ಲಿ ಡೀಪಿಯ ಚರಿತ್ರೆಯನ್ನು ಹೇಳುವ ಪುರಾತನ ಚರ್ಚು ನಗರದ ಮುಕುಟವಿಟ್ಟಂತೆ ತಲೆ ಎತ್ತಿ ನಿಂತಿದೆ. ಡೀಪಿ ಕಡಲ ಕಿನಾರೆಯ ರೋವಾನ್ ಬೀಚ್‌ನಲ್ಲಿ ವರ್ಷ ಪೂರ್ತಿ ಉತ್ಸವ, ಸಂಭ್ರಮಗಳು ಜರಗುತ್ತಿದ್ದು ಕಡಲ ಕಿನಾರೆಯೇ ಆಕರ್ಷಣೆಯ ಕೇಂದ್ರ ಭಾಗ. ನಗರದ ಮನೆ, ಕಟ್ಟಡಗಳಲ್ಲಿ ಕಡಲ ಕಾಗೆ ಕೂಗುತ್ತಿರುವ ಸದ್ದು ಕೇಳಿಸುತ್ತದೆ. ಅದು ಡೀಪಿಯ ಸೌಂದರ್ಯಕ್ಕೆ ಸಂಗೀತದ ಲೇಪನ ನೀಡುತ್ತದೆ. ಫ್ರೆಂಚ್ ಆಹಾರಗಳ ಹೋಟೆಲ್‌ಗಳೇ ತುಂಬಿರುವ ಡೀಪಿಯಲ್ಲಿ ಏಕೈಕ ಭಾರತೀಯ ಹೊಟೇಲ್ ತಾಜ್‌ಮಹಲ್. ಚಾಕೊಲೇಟ್ ಮಾರಿ ದೇಶ ಸುತ್ತಿದರು
ಡೀಪಿ ನಗರದಲ್ಲಿ ನಮಗೆ ವಿಶೇಷವಾಗಿ ಆತ್ಮೀಯರಾಗಿ ಕಂಡು ಬರುವ ವ್ಯಕ್ತಿಯೆಂದರೆ ಅಲ್ಲಿನ ಪ್ರಜೆ ಜೋವಿಯಲ್. ಭಾರತಕ್ಕೆ ಕಳೆದ 26 ವರ್ಷಗಳಿಂದ ನಿರಂತರ ಬರುತ್ತಿದ್ದು ಜಗತ್ತಿನ ಎಲ್ಲಾ ದೇಶಗಳನ್ನು ಸುತ್ತಿ ಬಂದವರು. ಜೋವಿಯಲ್ ಹೋಗದ ದೇಶಗಳೇ ಇಲ್ಲ. ತಾನು ಪ್ರವಾಸ ಮಾಡಿದ ಎಲ್ಲಾ ದೇಶಗಳ ಸಂಸ್ಕೃತಿ, ಪದ್ಧತಿ, ಸಂಪ್ರದಾಯ, ಆಚಾರ-ವಿಚಾರ, ಆಹಾರ-ವಿಹಾರ, ಎಲ್ಲದರ ಬಗ್ಗೆಯೂ ತಿಳಿದುಕೊಂಡು ಬರುವ ಒಬ್ಬ ವಿಶೇಷ ಅಧ್ಯಯನಕಾರ. ಅದರಲ್ಲೂ ಭಾರತೀಯ ನೃತ್ಯ ಮತ್ತು ತುಳುನಾಡಿನ ಯಕ್ಷಗಾನದ ಬಗ್ಗೆ ಇವರಿಗೆ ಅಪಾರ ಒಲವು. ಇಷ್ಟೆಲ್ಲ ನಿರಂತರ ಪ್ರಪಂಚ ಸುತ್ತಾಡುವ ಜೋವಿಯಲ್ ಏನೂ ಬಹಳ ದೊಡ್ಡ ಉದ್ಯಮಿ ಅಲ್ಲ ಅಥವಾ ಬಹಳ ದೊಡ್ಡ ಸಂಬಳದ ಉದ್ಯೋಗಿ ಅಲ್ಲ. ಜೋವಿಯಲ್‌ನ ಉದ್ಯೋಗ ಕೇವಲ ರಸ್ತೆ ಬದಿಯಲ್ಲಿ ಚಾಕೊಲೇಟು ಮಾರುವುದು ಅಷ್ಟೆ ! ವರ್ಷದ ಅರ್ಧಭಾಗ ದುಡಿದರೆ ಉಳಿದ ಅರ್ಧಭಾಗ ಪ್ರವಾಸ. ಡೀಪಿ ನಗರದ ರಸ್ತೆ ಬದಿಯಲ್ಲಿ ಚಾಕೊಲೇಟು ಮಾರಿ ಇಡೀ ಪ್ರಪಂಚ ಸುತ್ತಾಡುತ್ತಾರೆಂದರೆ ಆಶ್ಚರ್ಯವೇ. ಜೋವಿಯಲ್‌ನ ಸ್ನೇಹ ನಮಗೂ ಹೆಮ್ಮೆ. ದಿನೇಶ ಹೊಳ್ಳ