ಪಣಜಿ: ಗೋವಾ ರಾಜಧಾನಿ ಪಣಜಿಯಲ್ಲಿ 52 ನೇಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭಗೊಂಡಿದ್ದು, ಮಹೋತ್ಸವದಲ್ಲಿ ಚಲನಚಿತ್ರ ಕ್ಷೇತ್ರದ ಹಲವು ದಿಗ್ಗಜ ಕಲಾವಿದರು ಪಾಲ್ಗೊಳ್ಳುತ್ತಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ರವರ ದಬಂಗ್ ಡಾನ್ಸ್ ಪ್ರೇಕ್ಷಕರ ಗಮನ ಸೆಳೆಯಿತು. ಇಷ್ಟೇ ಅಲ್ಲದೆಯೇ ರಣವೀರ್ ಸಿಂಗ್ ರವರು ಕೂಡ ತಮ್ಮ ನಟನೆಯ ಮೂಲಕ ಪ್ರೇಕ್ಷಕರ ಮನ ಗೆದ್ದರು.
ಗೋವಾದಲ್ಲಿ 9 ದಿನಗಳ ಕಾಲ ನಡೆಯಲಿರುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ, ಸಲ್ಮಾನ್ ಖಾನ್ ಹುಡ ಹುಡ ದಬಂಗ್ ಎಂದು ಫುಲ್ ಜೋಶ್ ನಲ್ಲಿ ಡಾನ್ಸ್ ಮಾಡಿ ಪ್ರೇಕ್ಷಕರ ಗಮನ ಸೆಳೆದರು. ಸಲ್ಮಾನ್ ಖಾನ್ ರವರ ಈ ಡಾನ್ಸ್ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಶೇಷ ವಿಭಾಗ ಘೋಷಣೆ
ಗೋವಾದ ಚಲನಚಿತ್ರಗಳಿಗಾಗಿ ಭಾನುವಾರ ಗೋವಾ ಮನೋರಂಜನಾ ಸಂಸ್ಥೆ ವಿಶೇಷ ವಿಭಾಗವನ್ನು ಘೋಷಣೆ ಮಾಡಿದೆ.
ಪಣಜಿಯಲ್ಲಿ ಕರೆದಿದ್ದ ಸುದ್ಧಿಗೋಷ್ಠಿಯಲ್ಲಿ ಗೋವಾ ಮನೋರಂಜನಾ ಸಂಸ್ಥೆಯ ಉಪಾಧ್ಯಕ್ಷ ಸುಭಾಷ ಫಳದೇಸಾಯಿ ಮಾತನಾಡಿ, ಈ ವಿಶೇಷ ವಿಭಾಗವು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಒಂದು ಭಾಗವಾಗಿದ್ದು, ಈ ವಿಭಾಗದಲ್ಲಿ ಗೋವಾದ 8 ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು ಎಂದರು.
ಇದನ್ನೂ ಓದಿ:ಕಾಂಗ್ರೆಸ್ ನಾಯಕರು ಮಹಾ ಸುಳ್ಳುಗಾರರು,ಇವರಿಗೆ ನೋಬೆಲ್ ಪ್ರಶಸ್ತಿ ಕೊಡಬೇಕು: ಈಶ್ವರಪ್ಪ
ಚಲನಚಿತ್ರ ನಿರ್ಮಾಪಕ ಮತ್ತು ನಟ ಎಸ್.ವಿ. ರಾಜೇಂದ್ರಸಿಂಗ್ ಬಾಬು ರವರ ಅಧ್ಯಕ್ಷತೆಯಲ್ಲಿ ಛಾಯಾಗ್ರಾಹಕರಾದ ಪ್ರಶಾಂತನು ಮಹಾಪಾತ್ರ ಮತ್ತು ನಟ ಮತ್ತು ನಿರ್ಮಾಪಕ ಪ್ರಮೋದ ಪವಾರ ಒಳಗೊಂಡ ತೀರ್ಪುಗಾರರು 8 ಚಲನಚಿತ್ರಗಳನ್ನು ಆಯ್ಕೆ ಮಾಡಿದ್ದಾರೆ ಎಂದು ಸುಭಾಷ ಫಳದೇಸಾಯಿ ಮಾಹಿತಿ ನೀಡಿದರು.