Advertisement
ಸಿನಿಮಾ ವೀಕ್ಷಕರಿಗೆ ನೀರಿನ ಬಗ್ಗೆ ತಿಳಿವಳಿಕೆ ನೀಡುವಂತಹ ಚಿತ್ರಗಳನ್ನು ಪ್ರದರ್ಶಿಸುವ ಸಂಬಂಧ, ಡಿ.14ರಿಂದ 16ರ ವರೆಗೆ ನೀರಿನ ಧ್ವನಿಗಳು ಎಂಬ ಶೀರ್ಷಿಕೆಯಡಿ 11ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಹಮ್ಮಿಕೊಂಡಿದ್ದು, 60 ದೇಶಗಳ 229 ಸಿನಿಮಾಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ.
Related Articles
Advertisement
ಅಲ್ಲದೆ ಅಸ್ಸಾಮಿ ಭಾಷೆಯ “ರಿಧಂ ಆಫ್ ಬಹ್ಮಪುತ್ರ’, ಸುಂದರ್ ಬನ್ಸ್ ನದಿ ಮುಖಜ ಭೂಮಿಯ ಬಗ್ಗೆ ಕಥೆ ಹೇಳುವ “ಸುಂದರ್ ಬನ್ಸ್ ರೈಸಿಂಗ್ ವಾಟರ್ ಯಬ್ಬಿಂಗ್ ಲೈಫ್’ ಅಜಿತ್ ಚೌಧರಿ ನಿರ್ದೇಶನದ “ದಿ ಬ್ಲೂé ಕ್ಯಾಪ್’ ಸೇರಿದಂತೆ ಹಲವು ನಿರ್ದೇಶಕರ ವಿಭಿನ್ನ ರೀತಿಯ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.
ಜಲ ಸಂರಕ್ಷಣೆಯೇ ಪ್ರದರ್ಶನದ ಕೇಂದ್ರ: ಜಲ ಸಂರಕ್ಷಣೆಯನ್ನೇ ಕೇಂದ್ರವಾಗಿಸಿಕೊಂಡು ಉತ್ಸವ ಆಯೋಜಿಸಿದ್ದು, ಕಾಶ್ಮೀರಿ, ಜರ್ಮನ್, ಥೈಲ್ಯಾಂಡ್, ಪೆರು, ಇಂಡೋನೇಷಿಯಾ, ಜರ್ಮನಿ, ಕಿರ್ಜಿಸ್, ಸ್ವಿಡ್ಜರ್‌ಲ್ಯಾಂಡ್, ರೋಮೇನಿಯಾ ಸೇರಿ 60 ದೇಶಗಳ 229 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.
ಪ್ರದರ್ಶನಕ್ಕೆ ಪ್ರವೇಶ ಉಚಿತವಾಗಿದ್ದು, ರಾಜ್ಯ ಮಾಲಿನ್ಯ ನಿಂಯತ್ರಣ ಮಂಡಳಿ ಕಟ್ಟಡ ಮತ್ತು ಜಯನಗರದ 9ನೇ ಬ್ಲಾಕ್‌ನ ಜೈನ್ ವಿಶ್ವವಿದ್ಯಾಲಯದಲ್ಲಿ ಚಿತ್ರೋತ್ಸವ ನಡೆಯಲಿದೆ ಎಂದು ಕಾರ್ಯಕ್ರಮ ಆಯೋಜಕ ಜಾರ್ಜ್ ಕುಟ್ಟಿ ಹೇಳಿದರು. ಜಿ.ವಿ.ವರ ಪ್ರಸಾದ್ ನಿರ್ದೇಶನದ ತೆಲಗಿನ ಅವರ್ ಟೆಂಪಲ್ ಸೇರಿದಂತೆ ಹಿಂದಿ, ಕಾಶ್ಮೀರ, ಅಸ್ಸಾಂ,ಬೆಂಗಾಲಿ ಭಾಷೆಯ ಸಿನಿಮಾಗಳು ಕೂಡ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ ಎಂದರು.
ಬೆಂಗಳೂರಿನ ಕೆರೆಗಳು ಅಳಿವಿನಂಚಿನಲ್ಲಿವೆ.ಜಲ ಸಂರಕ್ಷಣೆಯ ಬಗ್ಗೆ ಜನತೆಯಲ್ಲಿ ಮತ್ತಷ್ಟು ಅರಿವು ಮೂಡಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಅಯೋಜಿಸಿರುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಜನತೆಯನ್ನು ಮತ್ತಷ್ಟು ಜಾಗೃತಗೊಳಿಸಲಿದೆ.-ಚಿತ್ರೋತ್ಸವದ ಸಂಘಟಕ, ಕ್ಷಿತಿಜಾ ಅರಸ್