Advertisement

Goa: ನಾಳೆಯಿಂದ ಗೋವಾದಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

11:32 PM Nov 18, 2023 | Team Udayavani |

ವಿಶ್ವದ ಅತಿದೊಡ್ಡ ಸಿನಿಮಾ ಮತ್ತು ಸಂಸ್ಕೃತಿ ಉತ್ಸವಗಳ ಪೈಕಿ ಒಂದಾಗಿರುವ 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ(ಐಎಫ್ಎಫ್) ಗೋವಾದಲ್ಲಿ ಸೋಮವಾರದಿಂದ ಆರಂಭವಾಗಲಿದೆ. ಒಟ್ಟು 10 ದಿನಗಳ ಕಾಲ ನಡೆಯುವ ಈ ಸಿನಿಮಾ ಉತ್ಸವದಲ್ಲಿ ಜಗತ್ತಿನ 270ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನ ಕಾಣಲಿವೆ. ಈ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Advertisement

ಮೈಕೆಲ್‌ ಡೌಗ್ಲಾಸ್‌ಗೆ ಜೀವಮಾನ ಶ್ರೇಷ್ಠ ಪ್ರಶಸ್ತಿ:
ಚಲನಚಿತ್ರೋತ್ಸವದಲ್ಲಿ ಖ್ಯಾತ ಹಾಲಿವುಡ್‌ ನಟ, ನಿರ್ಮಾಪಕ ಮೈಕೆಲ್‌ ಡೌಗ್ಲಾಸ್‌ಗೆ 2023ನೇ ಸಾಲಿನ ಪ್ರತಿಷ್ಠಿತ ಸತ್ಯಜಿತ್‌ ರೇ ಜೀವಮಾನ ಶ್ರೇಷ್ಠ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಸಮ್ಮಾನ್‌ ರಾಯ್‌ ಚಿತ್ರ ಪ್ರದರ್ಶನ:
ಚಲನಚಿತ್ರೋತ್ಸವದಲ್ಲಿ ಒಟ್ಟು 10 ಫೀಚರ್‌ ಫಿಲ್ಮ್ಗಳ ಪ್ರದರ್ಶನವಾಗಲಿದೆ. ಈ ಪೈಕಿ ಪಶ್ಚಿಮ ಬಂಗಾಳದ ನಿರ್ದೇಶಕ ಸಮ್ಮಾನ್‌ ರಾಯ್‌ ಅವರು ಫೀಚರ್‌ ಫಿಲ್ಮ್ “ದಿ ಎಕ್ಸೆ„ಲ್‌-ನಿರ್ಬಾಶನ್‌’ ಕೂಡ ಪ್ರದರ್ಶನ ಕಾಣುತ್ತಿದೆ. 1960 ದಶಕದಲ್ಲಿ ಪಶ್ಚಿಮ ಬಂಗಾಳ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರ ಸ್ಥಳೀಯ ಸಂಸ್ಕೃತಿ, ಮಾನಸಿಕ ಸ್ಥಿತಿ ಮತ್ತು ಸಾಮಾಜಿಕ ಸ್ಥಿತಿಗತಿಯನ್ನು ಚಿತ್ರಿಸುತ್ತದೆ.

ಮೊದಲ ಚಿತ್ರ “ಕ್ಯಾಚಿಂಗ್‌ ಡಸ್ಟ್‌’:
ಗೋವಾದ ಚಲನಚಿತ್ರೋತ್ಸವದಲ್ಲಿ ಮೊದಲು ಪ್ರದರ್ಶನಗೊಳ್ಳುವ ಚಿತ್ರ ಬ್ರಿಟನ್‌ನ ಥ್ರಿಲ್ಲರ್‌ ಸಿನಿಮಾ “ಕ್ಯಾಚಿಂಗ್‌ ಡಸ್ಟ್‌’ ಹಾಗೂ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ಕೊನೆಯ ಚಿತ್ರ ಅಮೆರಿಕದ ಕ್ರೀಡಾ ಕ್ಷೇತ್ರದ ಜೀವನಚರಿತ್ರೆ “ದಿ ಫೆದರ್‌ ವೇಟ್‌’. ಒಟ್ಟು 270ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನ ಕಾಣಲಿದೆ.

ತೀರ್ಪುಗಾರರ ಸಮಿತಿಯಲ್ಲಿ ನಾಗಾಭರಣ:
ಖ್ಯಾತ ನಿರ್ದೇಶಕ, ನಟ, ನಿರ್ಮಾಪಕ ಟಿ.ಎಸ್‌.ನಾಗಾಭರಣ ಅವರು ಫೀಚರ್‌ ಫಿಲ್ಮ್ ವಿಭಾಗದ ತೀರ್ಪುಗಾರರ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಸಮಿತಿಯಲ್ಲಿ ಒಟ್ಟು 12 ಸದ್ಯಸರು ಇದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next