ಬೆಂಗಳೂರು: “ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಕನ್ನಡ ಚಿತ್ರವು ಸ್ಪೇನ್ ದೇಶದ ಮ್ಯಾಡ್ರಿಡ್ ನಗರದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲೂ ಪ್ರಶಸ್ತಿಗೆ ಭಾಜನವಾಗಿದೆ.
ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ ಉಡುಪಿಯ ಬಾಲನಟ ದೃಶಾ ಕೊಡಗು ಅವರಿಗೆ ಶ್ರೇಷ್ಠ ಬಾಲ ನಟ ಪ್ರಶಸ್ತಿ ದೊರಕಿದೆ. ಈ ಚಿತ್ರಕ್ಕೆ ಈ ಮೊದಲು ರೋಂನಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಶ್ರೇಷ್ಠ ಚಿತ್ರವೆಂದು ವಿಮರ್ಶಕರ ಪ್ರಶಸ್ತಿಗೆ ಭಾಜನವಾಗಿತ್ತು. ಕಳೆದ ತಿಂಗಳು ಜರ್ಮನಿಯ ಸ್ಟುಟ್ ಗಾರ್ಟ್ ಚಿತ್ರೋತ್ಸವದಲ್ಲಿ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ಗಳಿಸಿತ್ತು.
ಇದೀಗ ಪ್ರಶಸ್ತಿ ಪಡೆಯುವ ಸರದಿ ಚಿತ್ರದ ಮುಖ್ಯ ಪಾತ್ರಧಾರಿ ನಟನದ್ದಾಗಿದೆ. ಖ್ಯಾತ ರಂಗ ನಿರ್ದೇಶಕ, ಚಿತ್ರ ನಿರ್ದೇಶಕ, ಕಲಾ ನಿರ್ದೇಶಕ ಹಾಗೂ ಚಿತ್ರಕಲಾವಿದ ಬಾಸುಮ ಕೊಡಗು ಅವರ ಮಗನಾದ ದೃಶಾ ಅವರು ಕಟಾ³ಡಿಯ ಎಸ್.ವಿ.ಎಸ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದು, ಅನೇಕ ಕಿರು ಚಿತ್ರಗಳಲ್ಲಿ, ರಂಗ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಸಂಗೀತ ಮತ್ತು ಸಾಹಿತ್ಯದಲ್ಲೂ ಆಸಕ್ತಿ ಇರುವ ದೃಶಾ, ಕಲಾವಿದರ ಕುಟುಂಬದ ಕುಡಿಯಾಗಿದ್ದಾರೆ.
ಇದನ್ನೂ ಓದಿ:ಜೋಗ ಜಲಪಾತ: ಪ್ರವಾಸಿಗರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯವಲ್ಲ
ಗಿರೀಶ ಕಾಸರವಳ್ಳಿ ನಿರ್ದೇಶನದ ಈ ಚಿತ್ರವನ್ನು ಖ್ಯಾತ ನಿರ್ಮಾಪಕ ಎಸ್.ವಿ.ಶಿವ ಕುಮಾರ್ ಅವರು ತಮ್ಮ ಸಂಗಮ ಫಿಲಂಸ್ ಲಾಂಛನದಲ್ಲಿ ತಯಾರಿಸಿದ್ದಾರೆ. ಕವಿ, ಸಾಹಿತಿ ಜಯಂತ ಕಾಯ್ಕಿಣಿಯವರ ಹಾಲಿನ ಮೀಸೆ ಕಥೆಯನ್ನಾಧರಿಸಿದೆ. ಸಮಕಾಲೀನ ಭಾರತದ ಬಹು ಮುಖ್ಯ ಸಮಸ್ಯೆಗಳಲ್ಲೊಂದಾದ ಐಡೆಂಟಿಟಿಯ ಪ್ರಶ್ನೆ ಚಿತ್ರದ ಹೂರಣ.