Advertisement

ಗ್ರಾಮೀಣ ಮಕ್ಕಳಿಗೆ ಅಂತಾರಾಷ್ಟ್ರೀಯ ಶಿಕ್ಷಣ ಅವಶ್ಯ

04:11 PM Mar 24, 2017 | Team Udayavani |

ಆಳಂದ: ನಾಡಿನ ನೆಲ, ಜಲ ಭಾಷೆಯೊಂದಿಗೆ ಗ್ರಾಮೀಣ ಮಕ್ಕಳಿಗೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ಮತ್ತು ತಂತ್ರಜ್ಞಾನದ ಮಾಹಿತಿ ನೀಡುವುದು ಅಗತ್ಯವಾಗಿದೆ ಎಂದು ರಾಜ್ಯದ ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಶಂಕರ ಬಿದರಿ ಹೇಳಿದರು. 

Advertisement

ತಾಲೂಕಿನ ಭೂಸನೂರ ಗ್ರಾಮದ ಶ್ರೀ ಗೊಲ್ಲಾಳೇಶ್ವರ ಸಮಗ್ರ ಗ್ರಾಮೀಣ ಅಭಿವೃದ್ಧಿ ಮತ್ತು ವಿದ್ಯಾವರ್ಧಕ ಟ್ರಸ್ಟ್‌ ಅಡಿಯಲ್ಲಿನ ಮಾತ್ರೋಶ್ರೀ ನೀಲಾಂಬಿಕಾ ಎಸ್‌. ಪಾಟೀಲ ಪಬ್ಲಿಕ್‌ ಸ್ಕೂಲ್‌ನ ಐದನೇ ವರ್ಷದ ವಾರ್ಷಿಕೋತ್ಸವ, ವೀರಯೋಧರಿಗೆ, ರೈತ ಸಾಧಕರಿಗೆ ಹಾಗೂ ಸಮಾಜ ಚಿಂತಕರಿಗೆ, ಬರಹಗಾರರಿಗೆ ಏರ್ಪಡಿಸಿದ್ದ ಅದ್ಧೂರಿ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. 

ಶಾಲೆಯಿಂದಲೇ ಮಕ್ಕಳಿಗೆ ಪೈಪೋಟಿಗೆ  ಸವಾಲೊಡ್ಡುವ ರೀತಿಯಲ್ಲಿ ಶಿಕ್ಷಕರು ಬೋಧಿಧಿ ಸುವ ಕಲೆ ಕರಗತ ಮಾಡಿಕೊಳ್ಳಬೇಕು. ಹಳ್ಳಿಯಲ್ಲಿ ರೈತಾಪಿ ವರ್ಗ ಕಾರ್ಮಿಕ ಮತ್ತು ಕೂಲಿ ಕಾರ್ಮಿಕರೆ ಹೆಚ್ಚಾಗಿರುವುದು. ಇಂಥವರ ಮಕ್ಕಳು ಉನ್ನತ ಹುದ್ದೆಗೆ ಬರಲು ಪೂರಕವಾದ ತಯಾರಿ ಆಗಬೇಕು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು. 

ಕಲಬುರಗಿಯ ಸ್ವಾಮಿ ನಾರಾಯಣ ಅಂತಾರಾಷ್ಟ್ರೀಯ ಶಾಲೆ ಪ್ರಾಚಾರ್ಯ ಶ್ಯಾಮಸುಂದರ ಕುಲಕರ್ಣಿ, ಸಾನ್ನಿಧ್ಯ ವಹಿಸಿದ್ದ ದೇವಂತಗಿ ಮಠದ ರೇಣುಕ ಶಿವಾಚಾರ್ಯರು ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಬಾಬುಗೌಡ ಎಸ್‌. ಪಾಟೀಲ, ಕೋಶ್ಯಾಧ್ಯಕ್ಷೆ ನೀಲಾಂಬಿಕಾ ಬಿ. ಪಾಟೀಲ, 

ಭೂಸನೂರ ಹಿರೇಮಠದ ಶಂಭು ಸೋಮನಾಥ ಶಿವಾಚಾರ್ಯರು, ಜಿಪಂ ಸದಸ್ಯ ಸಿದ್ಧರಾಮ ಪ್ಯಾಟಿ, ಪುರಸಭೆ ಮಾಜಿ ಅಧ್ಯಕ್ಷ ವಿಠuಲರಾವ ಪಾಟೀಲ, ಶಿಕ್ಷಕರ ಸಂಘದ ಕಾರ್ಯದರ್ಶಿ ನರಸಪ್ಪ ಬಿರಾದಾರ, ಪಿಎಸ್‌ಐ ಉದ್ದಂಡಪ್ಪ ಮಣ್ಣೂರಕರ್‌, ಡಾ| ಶಂಕರ ಎಂ. ಬಾಳಿ, ಮುಖ್ಯ ಶಿಕ್ಷಕ ಸಂತೋಷಕುಮಾರ ಶೇೆಳಕೆ ಇದ್ದರು. 

Advertisement

ಹುತಾತ್ಮ ಯೋಧರ ಸ್ಮರಣಾರ್ಥವಾಗಿ ಕರ್ತವ್ಯದಲ್ಲಿರುವ ಯೋಧ ಅಲ್ಲಾಪುರದ  ಎನ್‌.ಜಿ.ಪಾಟೀಲ, ಬೀದರನ ಅಮೂಲಕುಮಾರ ಕುಲಕರ್ಣಿ, ಧುತ್ತರಗಾಂವದ ಹಣಮಂತರಾವ ಬಂಗರಗಿ,ಯಳಸಂಗಿಯ ಮಹಾದೇವ ಎಲ್‌.  ಚವ್ಹಾಣ ಅವರನ್ನು ಸನ್ಮಾನಿಸಲಾಯಿತು. 

ಕೃಷಿ ಕ್ಷೇತ್ರದಿಂದ ಬಸವರಾಜ ಯಲಶೆಟ್ಟಿ, ಕಾರ್ಮಿಕ ವಿಭಾಗದಿಂದ ನೂರಂದಪ್ಪ ಮಾಶ್ಯಾಳೆ, ವೈದ್ಯಕೀಯ ಕ್ಷೇತ್ರದಿಂದ ಡಾ| ಶರಣಗೌಡ ಸಾಹು ಮತ್ತು ಹುಬ್ಬಳಿಯ ನಿವೃತ್ತ ಚೀಪ್‌ ಮೆಡಿಕಲ್‌ ಆμಸರ್‌ ಡಾ| ಬಿ.ಆರ್‌. ಕುಲಕರ್ಣಿ ಹಾಗೂ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಶಾಲೆಗೆ ಭೂದಾನ ಮಾಡಿದ ಕಾಶಪ್ಪ ಆರ್‌. ಸುತಾರ, ಮೋನಮ್ಮ ಆರ್‌. ಸುತಾರ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಅರಳುವ ಮೊಗ್ಗು ವಾರ್ಷಿಕ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಪ್ರಮೋದ ಪಟವಾರಿ ನಿರೂಪಿಸಿದರು. ಶಿಕ್ಷಕಿ ಆಶಾ ಎಂ. ಪಾಗಾ ಸ್ವಾಗತಿಸಿರು. ಸಂಗೀತಾ ಹರಗನಹಳ್ಳಿ ವಂದಿಸಿದರು. ಮಧು ದೇಶಮುಖ ಸೋಲಾಪುರ ದೇಶ ಭಕ್ತಿ ಹಾಡಿದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ, ಕಿರುರೂಪಕ ನಡೆಸಿಕೊಟ್ಟರು. 

Advertisement

Udayavani is now on Telegram. Click here to join our channel and stay updated with the latest news.

Next