Advertisement
ಈ ವರ್ಷದ ಧ್ಯೇಯ :
Related Articles
Advertisement
ಹಿರಿಯ ನಾಗರಿಕರು ಸದಾ ಚಟುವಟಿಕೆಗಳಿಂದ ಕೂಡಿರಬೇಕು. ಆರೋಗ್ಯದ ದೃಷ್ಟಿಯಿಂದ ಸಾಧ್ಯವಾದಷ್ಟು ಕ್ರಿಯಾಶೀಲವಾಗಿರುವುದು ಅತೀ ಮುಖ್ಯ. ಯೋಗ, ವಾಕಿಂಗ್ ಅಥವಾ ಒಳಾಂಗಣ ಕ್ರೀಡೆಗಳನ್ನು ದೈನಂದಿನ ಹವ್ಯಾಸವಾಗಿಸಿಕೊಂಡರೆ ಉತ್ತಮ. ವೈಯಕ್ತಿಕ ಸ್ವತ್ಛತೆಗೆ ಆದ್ಯತೆ ನೀಡಿದಲ್ಲಿ ಕಾಯಿಲೆಯಿಂದ ದೂರವಿರಬಹುದು. ಸಮತೋಲಿತ ಆಹಾರ ಸೇವನೆ ಆರೋಗ್ಯ ರಕ್ಷಣೆಗೆ ಪೂರಕ. ಹಸುರು ತರಕಾರಿ, ಹಣ್ಣುಗಳ ಸೇವನೆ ಉಪಯುಕ್ತ.
ಕಾಲಕಾಲಕ್ಕೆ ವೈದ್ಯರ ಭೇಟಿ :
ನನಗೆ ವಯಸ್ಸಾಯಿತು, ಇನ್ನು ನಮ್ಮಿಂದೇನೂ ಆಗದು ಎಂಬ ಹತಾಶ ಭಾವನೆ ಸಲ್ಲದು. ಹೃದಯದ ಸಮಸ್ಯೆ ಅಥವಾ ಇನ್ನಿತರ ಯಾವುದೇ ಕಾಯಿಲೆಯ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ, ಯಾವ ರೀತಿಯ ವ್ಯಾಯಾಮ ನಿಮಗೆ ಸೂಕ್ತ ಎಂಬುದನ್ನು ತಿಳಿದುಕೊಳ್ಳಿ. ವಯಸ್ಸು ಹೆಚ್ಚುತ್ತಾ ಹೋದಂತೆ ಹಲ್ಲಿನ ಸಮಸ್ಯೆ ಸಹಿತ ಮೌಖೀಕ ಅನಾರೋಗ್ಯಗಳು ಕಾಡುವುದು ಸಾಮಾನ್ಯ. ಅಷ್ಟು ಮಾತ್ರವಲ್ಲ ಆರೋಗ್ಯ ಸಂಬಂಧಿ ಬೇರೆ ಬೇರೆ ಸಮಸ್ಯೆಗಳು ಕಾಡಲಾರಂಭಿಸುತ್ತವೆ. ಆದರೆ ಎಲ್ಲವುಗಳಿಗೂ ಪರಿಹಾರವಿದೆ. ಹಾಗಾಗಿ ಯಾವುದಕ್ಕೂ ಹೆದರುವ ಅಗತ್ಯವಿಲ್ಲ.
ಸಕಾರಾತ್ಮಕ ಚಿಂತನೆ, ಹೊಸತನದತ್ತ ಒಲವು :
ಹಿರಿಯ ನಾಗರಿಕರಾದವರಿಗೆ ಆತ್ಮವಿಶ್ವಾಸವಿರಬೇಕು ಅಷ್ಟೇ. ಅವರ ಮನಃಸ್ಥಿತಿಯ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ. ಸಕಾರಾತ್ಮಕ ಚಿಂತನೆಯಿಂದ ಆರೋಗ್ಯಪೂರ್ಣರಾಗಿರಲು ಸಾಧ್ಯ. ಸಾಧ್ಯವಾದಷ್ಟು ಹೊಸ ಹೊಸ ವಿಷಯ ತಿಳಿದುಕೊಂಡಾಗ ಜೀವನ ಸಂತಸದಿಂದಿರಲು ಸಹಕಾರಿ. ಮನಸ್ಸನ್ನು ಒತ್ತಡಮುಕ್ತವಾಗಿಸಿ, ಹಗುರವಾಗಿಸಿಕೊಂಡು ಚಟುವಟಿಕೆಯಿಂದಿದ್ದಾಗ ಒಂಟಿತನದ ಸಮಸ್ಯೆ ಕಾಡಲಾರದು.
- 1950-2010ರ ನಡುವೆ ವಿಶ್ವದಾದ್ಯಂತ ಮನುಷ್ಯರ ಜೀವಿತಾವಧಿ 46ರಿಂದ 68 ವರ್ಷಗಳಿಗೆ ಏರಿತು.
- 2019ರಲ್ಲಿ 65 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ 703 ಮಿಲಿಯನ್ ವ್ಯಕ್ತಿಗಳಿದ್ದರು.
- ಪೂರ್ವ ಏಷ್ಯಾ ಮತ್ತು ಆಗ್ನೆಯ ಏಷ್ಯಾದ ಪ್ರದೇಶಗಳಲ್ಲಿ ಅತೀ ಹೆಚ್ಚು ವೃದ್ಧರಿದ್ದಾರೆ.(261 ಮಿಲಿಯನ್), ಅನಂತರ ಯುರೋಪ್ ಮತ್ತು ಉತ್ತರ ಅಮೆರಿಕ (200 ದಶಲಕ್ಷಕ್ಕೂ ಹೆಚ್ಚು)
- ಮುಂದಿನ ಮೂರು ದಶಕಗಳಲ್ಲಿ ವಿಶ್ವದಾದ್ಯಂತ ವಯಸ್ಸಾದವರ ಸಂಖ್ಯೆ ದ್ವಿಗುಣಗೊಳ್ಳಲಿದೆ.
- ವಿಶ್ವಸಂಸ್ಥೆಯ ಪ್ರಕಾರ 2050ರ ವೇಳೆಗೆ ವಿಶ್ವದಲ್ಲಿ 60 ವರ್ಷ ಮೇಲ್ಪಟ್ಟವರ ಸಂಖ್ಯೆ 2 ಬಿಲಿಯನ್‌ಗಳಿಗೇರಲಿದೆ. 2015ರಲ್ಲಿ ಇದು 900ಮಿಲಿಯನ್ ಆಗಿತ್ತು. ಸದ್ಯ ವಿಶ್ವದಲ್ಲಿ 80 ವರ್ಷ ಮೇಲ್ಪಟ್ಟವರ ಸಂಖ್ಯೆ 125 ಮಿಲಿಯನ್.