Advertisement

ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ: ಮನ ಸೆಳೆದ ಮನೋರಂಜನಾ ಆಟೋಟ!

01:24 AM Dec 25, 2022 | Team Udayavani |

ಮೂಡುಬಿದಿರೆ: ಅಂತಾ ರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಹಲವು ವಿಶೇಷತೆಗಳ ಮೂಲಕವೇ ಗಮನಸೆಳೆದಿದೆ. ಸಾಹಸ ಕ್ರೀಡೆಗಳು ಮಾತ್ರವಲ್ಲದೆ ಫನ್‌ ಗೇಮ್ಸ್‌ ಮತ್ತು ಹೈಕಿಂಗ್‌ ಕೂಡ ವಿದ್ಯಾರ್ಥಿಗಳಿಗೆ ಹೊಸ ಹುರುಪು ನೀಡಿದೆ.
ಹಲವು ವಿದ್ಯಾರ್ಥಿಗಳು ಪಿಲಿಕುಳ, ಬೀಚ್‌ ಇತ್ಯಾದಿ ಪ್ರವಾಸೀ ತಾಣಗಳಿಗೆ ಭೇಟಿ ನೀಡಿದರೆ, ಇನ್ನೊಂದಷ್ಟು ಮಂದಿ ಚಾಲೆಂಜ್‌ ವ್ಯಾಲಿ ಕಸರತ್ತುಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಉಳಿದ ವಿದ್ಯಾರ್ಥಿಗಳು ಫನ್‌ಗೇಮ್ಸ್ ಮತ್ತು ಹೈಕಿಂಗ್‌ ಅಥವಾ ಕಾಲ್ನಡಿಗೆ ನಡೆಸಿದರು.

Advertisement

ಹೈಕಿಂಗ್‌ ಹೇಗೆ?
ಹೈಕಿಂಗ್‌ ಬೆಳಗ್ಗೆ 7 ಗಂಟೆಗೆ ಆರಂಭವಾದರೆ ಮಧ್ಯಾಹ್ನ 11 ಗಂಟೆಯ ವರೆಗೂ ಇರುತ್ತದೆ. ಮೂಡುಬಿದಿರೆಯ ಸಾವಿರ ಕಂಬದ ಬಸದಿ, ಕಡಲಕೆರೆ, ಪುತ್ತಿಗೆ, ಅಲಂಗಾರು ಮೊದಲಾದ ಕಡೆಗಳಿಗೆ ಕೆಡೆಟ್‌ಗಳು ನಡೆದೇ ಹೋಗುತ್ತಾರೆ. ಪ್ರಕೃತಿ ಸೌಂದರ್ಯ ಆಸ್ವಾದಿಸುತ್ತಾ ನಡೆಯುವುದು ಮನಸ್ಸಿಗೆ ಮುದ ನೀಡುತ್ತದೆ. ಪ್ರತೀ ದಿನ ಪ್ರತ್ಯೇಕ ತಂಡಗಳಲ್ಲಿ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ಭಾಗವಹಿಸುತ್ತಾರೆ.

ಫನ್‌ ಗೇಮ್ಸ್‌ನ ಉದ್ದೇಶವೇ ಆಟದೊಂದಿಗೆ ಮನೋರಂಜನೆ. ಎರಡು ಬ್ಯಾಚ್‌ಗಳಲ್ಲಿ ನಡೆಯುವ ಸ್ಪರ್ಧೆಯಲ್ಲಿ 8 ಸಾವಿರದಿಂದ 10 ಸಾವಿರ ಮಂದಿ ಭಾಗವಹಿಸುತ್ತಿದ್ದಾರೆ. ಜಾಂಬೂರಿಯಲ್ಲಿರುವ ಎಲ್ಲ ವಿದ್ಯಾರ್ಥಿಗಳಿಗೂ ಅವಕಾಶ ಸಿಗುವುದು ಇದರ ವಿಶೇಷತೆ. ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿದ ಸ್ಪರ್ಧಾಳುಗಳಿಗೆ ಅವರ ಚಟುವಟಿಕೆ ಪುಸ್ತಕದಲ್ಲಿ ಮೊಹರು ಹಾಕ ಲಾಗುತ್ತದೆ. ಹೆಚ್ಚು ಮೊಹರು ಪಡೆದವರು “ಆ್ಯಕ್ಟಿವಿಟಿ ಬ್ಯಾಡ್ಜ್’ ಪಡೆಯುತ್ತಾರೆ.

ಯಾವೆಲ್ಲ ಆಟಗಳು?
ಫನ್‌ಗೇಮ್ಸ್ ನಲ್ಲಿ ಏಮ್ಸ್‌ ಆನ್‌ದ ಪಾಯಿಂಟ್‌, ಮೂನ್‌ ವಾಕ್‌, ಬಾಸ್ಕೆಟ್‌ಬಾಲ್‌, ವಾಟರ್‌ ವರ್ಕ್‌, ಆರೆಂಜ್‌ ಆ್ಯಂಡ್‌ ರೀಚ್‌, ಬ್ರಿಕ್ಸ್‌ ಮೇಕ್ಸ್‌ದವೇ, ಪಿಕ್‌ದ ಕಪ್‌ ಆ್ಯಂಡ್‌ ವಿನ್‌, ಬಬಲ್‌ ಇನ್‌ ದ ಹೋಲ್‌, ಟ್ರೈನ್‌ ಇನ್‌ದ ಟ್ರ್ಯಾಕ್ ಮೊದಲಾದ ಆಟಗಳಲ್ಲಿ ಕಡೆಟ್‌ಗಳು ತಮ್ಮ ಮನೋ ಸಾಮರ್ಥ್ಯ ಪ್ರದರ್ಶಿಸಿ, ಬ್ಯಾಡ್ಜ್ ಪಡೆಯಲು ಪ್ರತಿ ಸ್ಪರ್ಧಿಗಳಿಗೆ ತೀವ್ರ ಸ್ಪರ್ಧೆ ಒಡ್ಡಿದರು.

ಆಟದೊಂದಿಗೆ ಸಂತೋಷವನ್ನು ಪಡೆಯುವುದು ಫನ್‌ ಗೇಮ್‌ನ ಪ್ರಮುಖಾಂಶ. ಇಲ್ಲಿ ಸ್ಪರ್ಧೆಯೂ ಇದೆ ಮನೋರಂಜನೆಯೂ ಇದೆ. ವಿದ್ಯಾರ್ಥಿ ಒಟ್ಟು ಮನೋವಿಕಾಸಕ್ಕೂ ಇದು ಸಹಕಾರಿ. ಪ್ರತಿಯೊಬ್ಬ ಕೆಡೆಟ್‌ ಪಾಲ್ಗೊಳ್ಳುತ್ತಾರೆ.
– ಟಿ.ಕೆ. ನಾರಾಯಣ ಸ್ವಾಮಿ / ಜನಾರ್ದನ್‌,
ಫನ್‌ ಗೇಮ್ಸ್‌ ಉಸ್ತುವಾರಿಗಳು

Advertisement

– ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next